ಕೆಎಲ್ಇ್ ಸಂಸ್ಥೆಯ ವೇಣುಧ್ವನಿ 90.4 ಎಫ್ಎಮ್ ಕೇಂದ್ರದಿಂದ ಸೋಮವಾರ ದಿನಾಂಕ 30ನೆ ಮಾರ್ಚ್ 2026 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಶ್ರೀಮತಿ ಜಾನಕಿ ಕೆ. ಎಂ ಅವರು ಮಾತನಾಡಿ ಕೆಎಲ್ಇೀ ವೇಣುಧ್ವನಿ ರೇಡಿಯೋ ಕೇಂದ್ರದಿಂದ ಸ್ತ್ರೀಧ್ವನಿ ಕಾರ್ಯಕ್ರಮದಡಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಪರಿಚಯಿಸಿರುವುದು ಶ್ಲಾಗನಿಯವಾಗಿದೆ ಎಂದರು.

ಬದಲಾವಣೆ ಜಗದ ನಿಯಮ ಅಂತ ನಾವು ಹೇಳ್ತಿವಿ. ಬದಲಾಗಬೇಕು ನಾವು ಎಲ್ಲಿ ಬದಲಾಗಬೇಕು ಅಂದ್ರೆ ಅವಳ ಧ್ವನಿ ಅವನಿಗೂ ಕೇಳಬೇಕು ಮತ್ತು ಅದಕ್ಕೆ ಸ್ಪಂದಿಸಬೇಕು. ಪರಸ್ಪರ ಗೌರವದಿಂದ ನಮ್ಮಲ್ಲಿ ಕೊಡು ಕೊಳ್ಳುವಿಕೆ ಆದಾಗ ಒಂದು ಆದರ್ಶ ಸಮಾಜ, ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಈಗ ಉಸಿರುಗಟ್ಟಿ ದುಡಿದು ಸಾಧನೆ ಮಾಡೋದು ಬೇರೆ ಅವಳ ಹಿಂದೆ ಪುರುಷ ನಿಂತು ನಾನಿದ್ದೇನೆ ಎಂದು ಹೇಳಿದಾಗ ಆ ಸಂಭ್ರಮವೇ ಬೇರೆ ಅಂತಹ ಒಂದು ನಿರಾಳತೆಯನ್ನು ಹೆಣ್ಣು ಮಕ್ಕಳಿಗೆ ಕೊಡುವಂತಹ ದಕ್ಕಿಸಿಕೊಳ್ಳುವಂತಹ ಕೇಲಸ ಇಂತಹ ದಿನಗಳ ಮೂಲಕ, ಇಂತಹ ಸಾಧಕರನ್ನು ನೋಡವ ಮೂಲಕ ನಮ್ಮ ಒಳಗೆ ಬರಬೇಕು, ಈ ಸಂವೇದನಾ ಶೀಲತೆ ಪುರಷರಿಗಷ್ಟೆ ಅಲ್ಲ ಮಹಿಳೆಯರಿಗೂ ಬರಬೇಕು ಎಂದರು. ನಾವು ಯಾವುದಾದರು ಪ್ರೇರಣಾದಾಯಕ ಮಾತುಗಳನ್ನು ಕೇಳಿಸಿಕೊಂಡಾಗ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಎತ್ತರಕ್ಕೆ ಬೆಳೆಯೊದಕ್ಕೆ ಸಾಧ್ಯ ಎಂದರು.

ಕೆಎಲ್ಇಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕಿ ಡಾ. ಸುಚೇತಾ ಕುರುಂದಕರ್ ಮಾತನಾಡಿ ಮಹಿಳೆ ಮತ್ತು ಪುರುಷ ಎಂದು ಬೇದಭಾವವಿಲ್ಲದೇ, ಇಂದು ಮಹಿಳೆ ಎಲ್ಲಾ ರಂಗದಲ್ಲಿಯೂ ಸಹ ಮುಂಚುಣಿಯಲ್ಲಿದ್ದಾಳೆ. ಇಂದಿನ ವೇಗದ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಕೇವಲ ಹಣ ಸಂಪಾದನೆ ಸಾಕಾಗುವುದಿಲ್ಲ. ಸಮತೋಲನ, ಸಮಾಜದ ಮೇಲಿನ ಜವಾಬ್ದಾರಿ ಮತ್ತು ಮಾನವಿಯ ಮೌಲ್ಯಗಳು ಅತ್ಯಂತ ಮುಖ್ಯವಾಗಿವೆ. ನಮಗೆ ಜೀವನದಲ್ಲಿ ಎನಾದರು ಹೊಸದನ್ನು ಕಲಿಯಲಿಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ ಆದ್ದರಿಂದ “ಲರ್ನ್, ಅರ್ನ್ ಮತ್ತು ರಿಟರ್ನ್” ಎಂಬ ತತ್ವವು ವ್ಯಕ್ತಿಯ ಜೀವನವನ್ನು ಸಮತೋಲನಗೊಳಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ. ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ವಿ. ಎಂ. ಪಟ್ಟಣಶೆಟ್ಟಿ ಮಾತನಾಡಿ ಮಹಿಳೆಯರು ಸಮಾಜದ ಆಧಾರಸ್ತಂಭಗಳು, ಶಿಕ್ಷಣ, ಆರ್ಥಿಕ ಸ್ವಾವಲಂಬನೆ ಮತ್ತು ಆತ್ಮವಿಶ್ವಾಸವೇ ಮಹಿಳೆಯರನ್ನು ಶಕ್ತಿಶಾಲಿಯನ್ನಾಗಿ ಮಾಡುತ್ತದೆ ಎಂದರು.
ಮಹಿಳೆಯರು ತಮ್ಮ ಸಾಮಥ್ರ್ಯವನ್ನು ಅರಿತುಕೊಂಡು ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಮುನ್ನಡೆಯುತ್ತಿದ್ದಾರೆ. ಮಹಿಳೆಯರ ಸಾಧನೆಗಳು ಕುಟುಂಬ ಮತ್ತು ಸಮಾಜದ ಪ್ರಗತಿಗೆ ದಾರಿ ತೋರಿಸುತ್ತವೆ. ಕೇವಲ ಒಳ್ಳೆಯ ವಿಚಾರಗಳನ್ನು ಅಳವಡಿಸಿಕೊಳ್ಳುದಷ್ಟೆಯಲ್ಲ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು. ಪ್ರತಿಯೊಬ್ಬರ ಜೀವನದಲ್ಲಿ ಮಹಿಳೆಯ ಪಾತ್ರ ತುಂಬಾ ದೊಡ್ಡದಿರುತ್ತದೆ. ಆಕೆ ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ ಬಾಳಿಗೆ ಬೆಳಕಾಗುತ್ತಾಳೆ, ವೈಯಕ್ತಿಕವಾಗಿ ಮನೆಯ ಅರ್ಧ ಜವಾಬ್ಧಾರಿಯನ್ನಯ ಹೊರುವ ಜೋತೆಗೆ ಇಂದು ಅನೇಕ ಕ್ಷೇತ್ರಗಳಲ್ಲಿಯೂ ಕೂಡ ತನ್ನ ಕೇಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾಳೆ, ಸಮಾಜದ ಕಟ್ಟುಪಾಡುಗಳ ಹೊರತಾಗಿಯೂ ಕೂಡ ಇಂದಿನ ಆಧುನಿಕ ತಂತ್ರಜ್ಞಾನ ದಿನಗಳಲ್ಲಿ ಆಕೆ ಸಾಧನೆಯ ಶಿಖರವನ್ನು ಮುಟ್ಟುತ್ತಿದ್ದಾಳೆ ಎಂದರು.
ಈ ಸಂದರ್ಭದಲ್ಲಿ ಕೆಎಲ್ಇ ವೇಣುಧ್ವನಿ ಬಾನುಲಿ ಕೇಂದ್ರದ ನಿಲಯ ನಿರ್ವಾಹಕ ಡಾ. ವಿರೇಶಕುಮಾರ ನಂದಗಾವ ಮಾತನಾಡಿ ವೇಣುಧ್ವನಿ ಬಾನುಲಿ ಕೇಂದ್ರ ನಡೆದು ಬಂದ ದಾರಿಯ ಕುರಿತು ತಿಳಿಸಿದರು ಮತ್ತು ಮುಖ್ಯ ಅತಿಥಿಗಳನ್ನು ಪರಿಚಹಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು ಮತ್ತು ಭಾಗವಹಿಸಿದ್ದ ಮಹಿಳೆಯರು ಕಾರ್ಯಕ್ರಮದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಕೆಎಲ್ಇನ ವೇಣುಧ್ವನಿ ಬಾನುಲಿ ಕೇಂದ್ರದ ಕಾರ್ಯಕ್ರಮ ಸಂಯೋಜಕ ಮಂಜುನಾಥ ಬಳ್ಳಾರಿ, ಕಾರ್ಯಕ್ರಮ ನಿರ್ವಾಹಕಿ ಮನಿಷಾ ಪಿ. ಎಸ್. ಮತ್ತು ಸಿಬ್ಭಂದಿ ಉಪಸ್ಥಿತರಿದ್ದರು. ವೇಣುಧ್ವನಿ ಕಾರ್ಯಕ್ರಮ ನಿರ್ವಾಹಕರಾದ ಮಂಜುನಾಥ ಪೈ ಮತ್ತು ಶ್ರೀಮತಿ ಅನುಪಮಾ ಕೆ. ಕಾರ್ಯಕ್ರಮ ನಿರೂಪಿಸಿದರು.
