BELAGAVI

ಹಿರೇಬಾಗೇವಾಡಿಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂದಲ್ ಉರುಸ್ ಆರಂಭ

Share

ಇಡೀ ರಾಜ್ಯಕ್ಕೆ ಹಿಂದೂ ಮುಸ್ಲಿಂ ಸೌಹಾರ್ದತೆಯ ಸಂದೇಶ ಸಾರುವ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯ ಹಜರತ್ ಸಯ್ಯದ್ ಮೊಹ್ಮದ್ ಗೌಸ್ ಶಾಹ್ ಖಾದ್ರಿ ದರ್ಗಾದ ಸಂದಲ್ ಉರುಸ್ ಅತ್ಯಂತ ಭಕ್ತಿಭಾವದಿಂದ ಆರಂಭಗೊಂಡಿದೆ.

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯ ಹಜರತ್ ಸಯ್ಯದ್ ಮೊಹ್ಮದ್ ಗೌಸ್ ಶಾಹ್ ಖಾದ್ರಿ ದರ್ಗಾದ ಸಂದಲ್ ಉರುಸ್ ಕಾರ್ಯಕ್ರಮ ಉತ್ಸಾಹದಿಂದ ಆರಂಭಗೊಂಡಿದೆ. ಮೋಮಿನ ಗಲ್ಲಿಯಿಂದ ಬಝಾರ್ ಗಲ್ಲಿ ಮಾರ್ಗವಾಗಿ ದರ್ಗಾದ ವರೆಗೆ ವಾದ್ಯಮೇಳ ಸಂದಲ್ ಮೆರವಣಿಗೆ ನಡೆಸಲಾಯಿತು.ಶುಕ್ರವಾರದಂದು ಕವ್ವಾಲಿ, ಶನಿವಾರ ಮತ್ತು ಭಾನುವಾರ ನಾಟಕ, ಮೂರು ದಿನ ಕುಸ್ತಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಈ ವೇಳೆ ಮಾತನಾಡಿದ ದರ್ಗಾದ ಪ್ರಮುಖರು, ಪ್ರತಿವರ್ಷದಂತೆ ಈ ಬಾರಿಯೂ ಏಪ್ರೀಲ್ 22 ರಿಂದ ಏಪ್ರೀಲ್ 25 ರ ವರೆಗೆ ಸಂದಲ್ ಉರುಸ್ ಆಚರಿಸಲಾಗುತ್ತಿದೆ. ಇದು ಕೇವಲ ಮುಸ್ಲಿಂರೇ ಅಲ್ಲ ಹಿಂದೂ-ಮುಸ್ಲಿಂ ಭಾವೈಕ್ಯತೆಯಿಂದ ಆಚರಿಸುವ ಹಬ್ಬವಾಗಿದೆ. ಬಾಗೇವಾಡಿಯ ಈ ಉರುಸು ಇಡೀ ರಾಜ್ಯದಲ್ಲಿ ಒಂದು ಮಾದರಿಯಾಗಿದೆ ಎಂದರು.

ಮತ್ತೋರ್ವ ಪ್ರಮುಖರು ಹಿರೇಬಾಗೇವಾಡಿಯ ಈ ಉರುಸು ಹಿಂದೂ ಮುಸ್ಲಿಂ ಇಬ್ಬರೂ ಸೌಹಾರ್ದತೆಯಿಂದ ಆಚರಿಸುವ ಹಬ್ಬವಾಗಿದೆ. ಪ್ರತಿಯೊಂದು ಮನೆಗಳಲ್ಲಿಯೂ ಗೌರವ ಆದರದಿಂದ ನಡೆದುಕೊಳ್ಳಲಾಗುತ್ತದೆ. ದೇವರಲ್ಲಿಯೂ ಶಾಂತಿ ಸೌಹಾರ್ದತೆ ನೆಲೆಸಲಿ ಎಂದು ಪ್ರಾರ್ಥಿಸಲಾಗಿದೆ. ಒಗ್ಗಟ್ಟೇ ನಮ್ಮ ದೇಶದ ಅಖಂಡತೆಗೆ ಮತ್ತು ಅಭಿವೃದ್ಧಿಯ ಮೂಲ ಮಂತ್ರವಾಗಿದೆ ಎಂದರು.

ಈ ವೇಳೆ ಸಾವಿರಾರು ಭಕ್ತರು ಭಾಗಿಯಾಗಿದ್ಧರು.

Tags:

error: Content is protected !!