ಕಳೆದ ಏಪ್ರಿಲ್ 2ರಂದು ಧಾರವಾಡ ಜಿಲ್ಲೆ ಅಣ್ಣಿಗೇರಿ ತಾ. ಬಸಾಪುರ ಗ್ರಾಮದಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಅಣ್ಣಿಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಣ್ಣಿಗೇರಿ ತಾಲ್ಲೂಕಿನ ನಿವಾಸಿಗಳಾದ ಉಮೇಶ ಹರಣಶಿಕಾರಿ(30), ಈರಪ್ಪ ಹರಣಶಿಕಾರಿ (25) ಇಬ್ಬರು ಬಂಧಿತ ಮನೆಗಳ್ಳರಾಗಿದ್ದಾರೆ. ಏಪ್ರಿಲ್ 2ರಂದು ಬಸಾಪುರ ಗ್ರಾಮದಲ್ಲಿ ಮನೆಯ ಡೋರ್ ಲಾಕ್ ಮುರಿದು ಮನೆ ಕಳ್ಳತನ ಮಾಡಲಾಗಿತ್ತು. ಈ ಕುರಿತು ಮನೆಯ ಮಾಲೀಕರು ಅಣ್ಣಿಗೇರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ದೂರು ದಾಖಲಿಸಿಕೊಂಡ ತನಿಖೆಗೆ ಇಳಿದಿದ್ದ ಪೊಲೀಸರು ಈಗ ಕಳ್ಳತನವಾಗಿ ವಾರದಲ್ಲಿಯೇ ಆರೋಗಳ ಹೆಡೆಮುರಿ ಕಟ್ಟಿದ್ದಾರೆ.
ಬಂಧಿತರಿಂದ 35ಗ್ರಾಂ ಬಂಗಾರ, 720 ಗ್ರಾಂ ಬೆಳ್ಳಿ ಜತೆಗೆ ಪೂಜಾ ಸಾಮಗ್ರಿಗಳು ಸೇರಿ ಒಟ್ಟು ಸುಮಾರು 5ಲಕ್ಷ ರೂಪಾಯಿ ಬೆಲೆಬಾಳು ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಇನ್ನೂ ತನಿಖೆಯ ವೇಳೆ ಆರೋಪಿಗಳು ಪಟ್ಟಣದ ತಹಶಿಲ್ದಾರ ಕಚೇರಿ ಬೀಗ್ ಒಡೆದು ಕಳ್ಳತನ ಯತ್ನ, ಅಣ್ಣಿಗೇರಿ ಹುಡ್ಕೋ ಕಾಲನಿಯ ರಮೇಶ ಕೊಟಗಿ ಹಾಗೂ 2022ರಲ್ಲಿ ಶಿಶುವಿನಹಾಳದ ಮುಖ್ತಮಸಾಬ್ ಹಂಚಿನಾಳ ಮನೆ ಕಳ್ಳತನ ಕುರಿತು ಸತ್ಯ ಒಪ್ಪಿಕೊಂಡಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಸದ್ಯ ಇಬ್ಬರು ಆರೋಪಿಗಳ ತನಿಖೆ ಪೂರ್ಣಗೊಂಡ ಹಿನ್ನಲೆಯಲ್ಲಿ ನ್ಯಾಯಾಧೀಶರ ಮುಂದೆ ಆರೋಪಿತರನ್ನು ಕಂಬಿ ಹಿಂದೆ ತಳ್ಳಲಾಗಿದೆ.
