ಖಾನಾಪೂರ–ಹೆಮಾಡಗಾ ಮಾರ್ಗದಲ್ಲಿ ಭಾರಿ ಮಳೆ ಗಾಳಿಗೆ ಉರುಳಿದ ಮರ; ಕೆಲಕಾಲ ವಾಹನ ಸಂಚಾರ ಸ್ಥಗಿತ! ಆರ್ ಎಫ್ಒ ಶ್ರೀಕಾಂತ್ ಪಾಟೀಲ್ ತಕ್ಷಣ ತಮ್ಮ ಸಿಬ್ಬಂದಿಯೊಡನೆ ಆಗಮಿಸಿ ರಸ್ತೆ ತೆರವು ಕಾರ್ಯಾಚರಣೆ ನಡೆಸಿ ಸಂಚಾರ ಸುಗಮ ಮಾಡಿದ್ದರು!
-ಖಾನಾಪೂರ–ಹೆಮ್ಮಡಗಾ ಮಾರ್ಗದ ಹಲಾತ್ರಿ ನದಿ ಸೇತುವೆ ಹಾಗೂ ಮಂತುರ್ಗಾ ಕತ್ರಿ ನಡುವಿನ ಭಾಗದಲ್ಲಿ ಗಾಳಿ-ಮಳೆಯ ಪರಿಣಾಮವಾಗಿ ಒಂದು ದೊಡ್ಡ ಮರ ಏಕಾಏಕಿ ರಸ್ತೆಯ ಮೇಲೆ ಉರುಳಿತು. ಇದರಿಂದ ಈ ಮಾರ್ಗದ ಸಂಚಾರ ಕೆಲಕಾಲ ಸಂಪೂರ್ಣ ಸ್ಥಗಿತಗೊಂಡಿತ್ತು.
ಈ ಮಾರ್ಗದ ಮೂಲಕ ಗೋವಾಕ್ಕೆ ಹೋಗುವ ಮತ್ತು ಬರುವ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತವೆ. ಮರ ರಸ್ತೆ ಮಧ್ಯದಲ್ಲಿ ಬಿದ್ದಿದ್ದರಿಂದ ಎರಡೂ ಬದಿಗಳಲ್ಲಿ ವಾಹನಗಳ ಉದ್ದನೆಯ ಸಾಲುಗಳು ನಿರ್ಮಾಣವಾಗಿದ್ದವು. ಪ್ರಯಾಣಿಕರು ಹಾಗೂ ಸ್ಥಳೀಯ ನಾಗರಿಕರು ಕೆಲಕಾಲ ತೀವ್ರ ಅನಾನುಕೂಲ ಅನುಭವಿಸಬೇಕಾಯಿತು.
ಈ ನಡುವೆ ಈ ಪ್ರದೇಶದ ಕೆಲವರು ಘಟನೆಯ ಮಾಹಿತಿ ತಕ್ಷಣ ಖಾನಾಪೂರ ಅರಣ್ಯ ಇಲಾಖೆಯ ರೇಂಜ್ ಫಾರೆಸ್ಟ್ ಆಫೀಸರ್ (RFO) ಶ್ರೀಕಾಂತ್ ಪಾಟೀಲ್ ಅವರಿಗೆ ವಿವರವಾದ ಮಾಹಿತಿ ನೀಡಿದರು.

ಘಟನೆಯ ಗಂಭೀರತೆಯನ್ನು ಮನಗಂಡ ಆರ್ ಎಫ್ಒ ಶ್ರೀಕಾಂತ್ ಪಾಟೀಲ್ ಅವರು ತಮ್ಮ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತಕ್ಷಣ ಘಟನಾ ಸ್ಥಳಕ್ಕೆ ಕಳುಹಿಸಿದರು. ಅರಣ್ಯ ಸಿಬ್ಬಂದಿಗಳು ತಕ್ಷಣ ಕ್ರಮ ಕೈಗೊಂಡು ಮರವನ್ನು ಕತ್ತರಿಸಿ ರಸ್ತೆ ಬದಿಗೆ ತೆರವುಗೊಳಿಸಿದರು ಮತ್ತು ಸ್ವಲ್ಪ ಸಮಯದಲ್ಲೇ ಮಾರ್ಗವನ್ನು ಮುಕ್ತಗೊಳಿಸಿದರು. ನಂತರ ಸಂಚಾರ ಸುಗಮವಾಗಿ ಆರಂಭವಾಯಿತು.
ಈ ತುರ್ತು ಕ್ರಮದಿಂದ ಸಂಭವಿಸಬಹುದಾದ ದೊಡ್ಡ ಮಟ್ಟದ ಸಂಚಾರ ದಟ್ಟಣೆ ತಪ್ಪಿತು. ಕರ್ತವ್ಯನಿಷ್ಠ ಅರಣ್ಯ ಅಧಿಕಾರಿ ಶ್ರೀಕಾಂತ್ ಪಾಟೀಲ್ ಹಾಗೂ ಅವರ ಅಧಿಕಾರಿಗಳು ಮತ್ತು ಅರಣ್ಯ ಸಿಬ್ಬಂದಿಗಳ ತ್ವರಿತ ಕಾರ್ಯಾಚರಣೆಗೆ ಸ್ಥಳೀಯ ನಾಗರಿಕರು ಹಾಗೂ ಪ್ರಯಾಣಿಕರು ಕೃತಜ್ಞತೆ ವ್ಯಕ್ತಪಡಿಸಿ ಮೆಚ್ಚುಗೆ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಡಿವೈಆರ್ ಎಫ್ಓ ಗುರುನಾಥ ಬಾಯನವರ, ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ
