Bailahongala

ಬೈಲಹೊಂಗಲದ ಹಾರುಗೋಪ್ಪ ಗ್ರಾಮದಲ್ಲಿ ಅದ್ದೂರಿ ಹನುಮ ಜಯಂತಿ: ಪಲ್ಲಕ್ಕಿ ಉತ್ಸವಕ್ಕೆ ಭಕ್ತರ ಹರ್ಷಘೋಷ

Share

ಹಾರುಗೋಪ್ಪ ತಾಲೂಕಿನ ಹಾರುಗೋಪ್ಪ ಗ್ರಾಮದ ಜೈ ಶ್ರೀ ಹನುಮಾನ್ ಯುವಕ ಮಂಡಳಿ ಹಾಗೂ ಸಮಸ್ತ ಗುರುಹಿರಿಯರ ನೇತೃತ್ವದಲ್ಲಿ ಹನುಮ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿತ್ತು.

ಗುರುವಾರ ಮುಂಜಾನೆ 6 ಗಂಟೆಗೆ ಶ್ರೀ ಪತ್ರಯ್ಯ ಸ್ವಾಮಿ ಹಿರೇಮಠ ಅವರಿಂದ ಹನುಮದೇವರಿಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿತು. ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿಯಿಂದ ರಾತ್ರಿಯಿಡೀ ನಡೆದ ಭಜನಾ ಕಾರ್ಯಕ್ರಮವು ಭಕ್ತರಲ್ಲಿ ಭಕ್ತಿಭಾವ ಮೂಡಿಸಿತು. ದಿನವಿಡೀ ದೇವಸ್ಥಾನದಲ್ಲಿ ಮಹಾ ಅಭಿಷೇಕ, ಕುಂಭಮೇಳ ಹಾಗೂ ಪಲ್ಲಕ್ಕಿ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ಜರುಗಿದವು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಗೋಷ್ಠಿಗಳೊಂದಿಗೆ ಹನುಮಂತನ ಪಲ್ಲಕ್ಕಿ ಹಾಗೂ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯ ಮುಂಭಾಗದಲ್ಲಿ ಬೀರೇಶ್ವರ ಡೊಳ್ಳಿನ ಮಜಲು ಹಾಗೂ ಭಜನಾ ಮಂಡಳಿಯವರು ‘ಜೈ ಶ್ರೀರಾಮ್, ಜೈ ಹನುಮಾನ್’ ಎಂಬ ಘೋಷಣೆಗಳೊಂದಿಗೆ ಸಾಗಿದರು. ಕಾರ್ಯಕ್ರಮದ ನಂತರ ಗಣ್ಯರಿಗೆ ಸತ್ಕಾರ ಸಮಾರಂಭ ನಡೆಯಿತು ಹಾಗೂ ಆಗಮಿಸಿದ ಭಕ್ತಾದಿಗಳಿಗೆ ಅಚ್ಚುಕಟ್ಟಾದ ಮಹಾಪ್ರಸಾದ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆನಂದ ಕುರಬರ, ಸೋಮಪ್ಪ ಮರಕಟ್ಟಿ, ಬಸವರಾಜ ಜಕ್ಕನ್ನವರ, ಶಿವಾನಂದ ಸಂಕನ್ನವರ, ನಾಗಪ್ಪ ನಾಯಕರ, ಸಾಗರ ಜಕನ್ನವರ, ಚಿದಾನಂದ ಪೂಜೇರಿ, ರಾಯನಗೌಡ್ ಪಾಟೀಲ, ವಿಜಯ ಕಲ್ಲಯ್ಯನವರ, ಮಹೇಶ ಪಟ್ಟಣ, ಈರಪ್ಪ ಜಕನ್ನವರ, ರಮೇಶ ಜಕನ್ನವರ, ಮಹಾಂತೇಶ ಜಕನ್ನವರ, ವಿರೇಶ ದಂಡಿನ, ಕಪಿಲ ಹುಲಕುಂದ ಹಾಗೂ ಹಾರುಗೋಪ್ಪ ಗ್ರಾಮದ ಸಮಸ್ತ ಗುರು ಹಿರಿಯರು ಮತ್ತು ಜೈ ಹನುಮಾನ್ ಯುವಕ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Tags:

error: Content is protected !!