ದೇವರು ವರಕ್ಟ್ರೂ ಪೂಜಾರಿ ವರ ನೀಡಲಿಲ್ಲ ಎಂಬ ಗಾದೆ ಮಾತಿಗೆ, ಧಾರವಾಡ ಮಾವು ಬೆಳೆಗಾರರ ಪರಿಸ್ಥಿತಿಯ ಅಕ್ಷರಶಃ ಹೊಲಿಕೆಯಾಗುತ್ತಿದೆ. ಮಾವಿನ ಮರದ ಹೂ ನೋಡಿದ್ದ ಬೆಳೆಗಾರರು ಈ ಬಾರಿ ನಮ್ಮ ಕಷ್ಟ ಎಲ್ಲ ತೀರಿದವು ಎಂಬ ಭರವಸೆಯಲ್ಲಿದ್ರೂ, ಆದರೆ ಮಳೆರಾಯ ಎಲ್ಲವನ್ನು ಉಲ್ಟಾ ಮಾಡಿದ್ದಾನೆ.
ಒಂದು ಖಾಲಿ ಖಾಲಿಯಾಗಿರುವ ಮಾವು ಮರಗಳು….ಇನ್ನೊಂದು ರೈತ ಹೋಲದಲ್ಲಿ ಅಲ್ಲೊಂದು ಇಲ್ಲೊಂದು ಕಾಣುವ ಫೇಮಸ್ ಆಫುಸ್ ಹಣ್ಣಿನ ಮಾವಿನ ಕಾಯಿಗಳು…ಮಗದೊಂದು ತೋಟಗಾರಿಕೆ ಇಲಾಖೆ ಸಹಾಯ ನೀರಿಕ್ಷೆಯಲ್ಲಿರುವ ಮಾವು ಬೆಳೆಗಾರರು. ಎಸ್ ಈ ಎಲ್ಲ ದೃಶ್ಯಗಳುಗೆ ಧಾರವಾಡ ಜಿಲ್ಲೆಯ ಧಾರವಾಡ ತಾಲೂಕು, ಹುಬ್ಬಳ್ಳಿ ತಾಲೂಕು, ಕಲಘಟಗಿ ತಾಲ್ಲೂಕು ಹಾಗೂ ಅಳ್ನಾವಾರ ತಾಲೂಕಿನ ಮಾವಿನ ತೋಟಗಳು ಸಾಕ್ಷಿಯಾಗಿವೆ. ಅಂದ ಹಾಗೆ ಈಗ ನೈಸರ್ಗಿಕವಾಗಿ ಮಾವು ಬೆಳೆ ಕಣ್ಣು ಹಾಯಿಸದ್ಲೇಲ್ಲ ಮಾವಿನ ಕಾಯಿಗಳು ಕಾಣುವ ಸಮಯ ಈಗ. ಆದರೆ ಇತ್ತಿಚೆಗೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದಾಗಿ ಮಾವಿನ ಮರುಗಳು ಈಗ ಬರಿದಾಗಿ ನಿಂತಿವೆ. ನಿತ್ಯವು ಮಾವಿನ ಮರಗಳನ್ನು ನೋಡುತ್ತಾ ಕೆಲವು ಮಾವಿನ ವ್ಯಾಪಾರಸ್ಥರು ಸೇರಿ ಬೆಳೆಗಾರರು ಈಗ ಮನದಲ್ಲಿಯೇ ಕೊರಗುವ ಸ್ಥಿತಿ ನಿರ್ಮಾಣವಾಗಿದೆ. ಈ ಕಡೆ ತೋಟಗಾರಿಕೆಯ ಇಲಾಖೆಯ ಅಧಿಕಾರಿಗಳು ಇಷ್ಟೊಂದು ಮಟ್ಟದಲ್ಲಿ ಮಾವಿನ ಬೆಳೆ ಹಾನಿಯಾದ್ರೂ ಕೂಡಾ ಪರಿಶೀಲನೆಗೆ ಬರುತ್ತಿಲ್ಲ. ಈ ಕಡೆ ಉತ್ತಮ ಬೆಳೆಯ ನಿರೀಕ್ಷೆ ಹುಟ್ಟಿಸಿದ ಮಾವು ಬೆಳೆಯು ಈಗ ಆಲಿಕಲ್ಲು ಹೊಡೆತಕ್ಕೆ ಖಾಲಿ ಖಾಲಿಗಿಯಾವೆ. ಇದರಿಂದಾಗಿ ಈಗ ಮಾವಿನ ತೋಟವನ್ನು ರೈತರಿಂದ ಹಿಡಿದು ವ್ಯವಹರಿಸುವವರ ಪಾಡು ದೇವರಿಗೆ ಪ್ರೀತಿಯಾಗಿದೆ. ಕಾರಣ ಬೆಳೆಯನ್ನು ನಂಬಿ ರೈತರೊಂದಿಗೆ ವ್ಯವಹಾರ ಮಾಡಿದ ಮಾರಟಗಾರ ಈಗ ಬೆಳೆಯೇ ಇಲ್ಲದೇ ಪರದಾಡು ಸ್ಥಿತಿ ನಿರ್ಮಾಣವಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಸುಮಾರು ಹನ್ನೆರಡು ಸಾವಿರದಿಂದ 14ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಬಹುತೇಕ ಮಾವಿನ ತೋಟದ ಪರಿಸ್ಥಿತಿ ಇದೇ ಆಗಿದೆ. ಇನ್ನೊಂದು ಕಡೆ ಎರಡ್ಮೂರ ಏಕರೆ ಮಾವಿನ ತೋಟ ಮಾಡಿದ ರೈತರ ಪಾಡು ಕೇಳುವವರೇ ಇಲ್ಲದಂತಾಗಿದೆ. ವರ್ಷವಿಡೀ ಮಾವಿನ ಫಲಕ್ಕಾಗಿ ದುಡಿದು, ಇನ್ನೇನು ಮಾವು ಹೂ ಚೆನ್ನಾಗಿ ಬಿಟ್ಟಿದೆ. ಈ ಬಾರಿ ಉತ್ತಮ ಮಾವು ಫಸಲು ಪಕ್ಕಾ ಎಂದು ಅಂದ್ಕೊಂಡಿದ್ದರು. ವರುಣರಾಯ ಅದನ್ನು ಈಗ ಕಸಿದುಕೊಂಡಿದ್ದಾನೆ. ಜತೆಗೆ ಧಾರವಾಡ ಪೇಢಾದಂತೆ ಮಾವಿನ ರಾಜನೆಂದು ಕರೆಯಿಸಿಕೊಳ್ಳುವ ಫೇಮಸ್ ಆಫಸ್ ಮಾವಿನ ಹಣ್ಣು ಧಾರವಾಡ ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಲಾಗುತಿತ್ತು. ಈಗ ವರುಣನ ಹೋಡೆತಕ್ಕೆ ಆಫಸ ಹಣ್ಣಿನ ಫಸಲು ಕಾಣದಂತಾಗಿದ್ದು, ಈ ವರ್ಷ ಮಾವಿನ ಹಣ್ಣಿನ ರಾಜನಿಗೆ ಬರಗಾಲ ಸೃಷ್ಟಿಯಾಗಿದೆ. ಆಲಿಕಲ್ಲು ಮಳೆಯಿಂದಾಗಿ ವರ್ಷವೀಡಿ ಮಾವಿನ ತೋಟದಲ್ಲಿ ದುಡಿದ ರೈತರು ಈಗ ಕಣ್ಣೀರು ಹಾಕುವಂತಾಗಿದೆ. ಇಷ್ಟೇಲ್ಲ ಆಲಿಕಲ್ಲು ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದರು ತೋಟಗಾರಿಕೆಯ ಸಚಿವರು ಅಥವಾ ಜಿಲ್ಲಾಡಳಿತ ಹಾಗೂ ತೋಟಗಾರಿಕೆ ಇಲಾಖೆ ಈ ಕಡೆ ತಿರುಗಿಯು ನೋಡದಿರುವುದು ರೈತರ ಆಕ್ರೋಶಕ್ಕೆ ದಾರಿ ಮಾಡಿಕೊಡುತ್ತಿದೆ.
ಧಾರವಾಡದಲ್ಲಿ ಇತ್ತಿಚೆಗೆ ಸುರಿದ ಆಲಿಕಲ್ಲು ಸಹಿತ ಮಳೆ ಮಾವು ಬೆಳೆಗಾರರಿಗೆ ಶಾಪವಾಗಿ ಪರಿಣಮಿಸಿದೆ. ಧಾರವಾಡ ತಾಲ್ಲೂಕು ಸೇರಿ ನಾಲ್ಕು ತಾಲ್ಲೂಕಿನಲ್ಲಿ ಹೆಚ್ಚಾಗಿ ಮಾವಿನ ತೋಟಗಳುದ್ದು, ಈಗ ಎಲ್ಲ ಮಾವು ಬೆಳೆದ ರೈತರು ಸೇರಿದಂತೆ ತೋಟ ಹಿಡಿದ ವ್ಯಾಪಾರಸ್ಥರಿಗೆ ಆಲಿಕಲ್ಲು ಮಳೆ ರಕ್ತ ಕಣ್ಣೀರು ತರಿಸುತ್ತಿದೆ. ಈಗಲಾದ್ರೂ ಮಾವು ಬೆಳೆಗಾರರ ಕಷ್ಟ ಕೇಳಲು ತೋಟಗಾರಿಕೆಯ ಇಲಾಖೆಯ ಅಧಿಕಾರಿಗಳು ಮುಂದಾಗುತ್ತಾರೋ ಇಲ್ವೊ ಎಂಬುವುದು ಕಾದು ನೋಡಬೇಕಾಗಿದೆ.
