ನಗರ ಪ್ರದೇಶವಾದರೂ ಅಲ್ಲಿ ಕೃಷಿ ಕುಟುಂಬಗಳೇ ಹೆಚ್ಚು. ಅಲ್ಲಿ ಈಗ ಮನೆ ಮನೆಯಲ್ಲೂ ಹಬ್ಬದ ವಾತವಾರಣ ಸೃಷ್ಟಿಯಾಗಿದೆ. ಬರೋಬ್ಬರಿ 200 ವರ್ಷಗಳ ನಂತರ ಈ ಜಾತ್ರೆ ಈಗ ಅಲ್ಲಿ ಸ್ಥಳೀಯ ನಿವಾಸಿಗಳಲ್ಲಿ ಹಬ್ಬಸಂಭ್ರಮ ಮೂಡುವಂತೆ ಮಾಡಿದೆ. ಎಲ್ಲಿ ಇದೂ ಅಂತೀರಾ ಅದರ ಕುರಿತು ಒಂದು ಚಿಕ್ಕ ರಿಪೋರ್ಟ್ ಇಲ್ಲಿದೆ ನೋಡಿ..

ಒಂದು ಕಡೆ ಕಾಣ್ಣು ಕಾಯಿಸಿದ ಕಡೆಗಳಲ್ಲಿ ಹಳದಿಯಾಗಿ ಕಾಣುತ್ತಿರುವ ಜನ….ಮತ್ತೊಂದು ಕಡೆ ದೇವಿ ಹೊತ್ತು ಭಕ್ತರಿಗೆ ದರ್ಶನ ನೀಡುತ್ತಿರುವ ದೃಶ್ಯ…ಮಗದೊಂದು ಕಡೆ ಗಲ್ಲಿ ಗಲ್ಲಿಯಲ್ಲೂ ದೇವಿ ಜಾತ್ರೆಯ ಹೊನ್ನಾಟದ ಕಲರವ…ಎಸ್ ಎಲ್ಲ ದೃಶ್ಯಗಳಿಗೆ ಧಾರವಾಡದ ಮಾಳಾಪುರ ಹಾಗೂ ಕಮಲಾಪು ಸಾಕ್ಷಿಯಾಗಿದೆ. ಧಾರವಾಡದ ಮಾಳಾಪುರ ಸೇರಿ ಕಮಲಾಪುರದಲ್ಲಿ ಕೃಷಿ ಕುಟುಂಬಗಳೇ ಹೆಚ್ಚು ವಾಸವಾಗಿದ್ದು, ಈ ಮಾಳಾಪುರದಲ್ಲಿ ಇದೀಗ ಬರೊಬ್ಬರಿ 200 ವರ್ಷಗಳ ನಂತರ ಗ್ರಾಮ ದೇವಿಯರ ಜಾತ್ರೆಯ ಸಂಭ್ರಮ ಮನೆ ಮಾಡಿದೆ. ಗ್ರಾಮ ದೇವಿಯರ ಜಾತ್ರೆಯನ್ನು ಬರೊಬ್ಬರಿ 200 ವರ್ಷಗಳ ನಂತರ ಇಲ್ಲಿ ಆಚರಿಸಲಾಗುತ್ತಿದೆ. ಮಾಳಾಪುರ ಹಾಗೂ ಕಮಲಾಪುರ ಭಾಗದಲ್ಲಿ ಈ ಜಾತ್ರೆಯ ಸಂಭ್ರಮ ಇದೀಗ ಮನೆ ಮಾಡಿದೆ. ಈ ಗ್ರಾಮದೇವಿಯರ ಮೂರ್ತಿಗಳಿಗೆ ಬಣ್ಣ ಬಳಿಯಲಾಗಿದ್ದು, ಅವುಗಳ ಪ್ರತಿಷ್ಠಾಪನೆ ಕಾರ್ಯ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆದಿದೆ. ಈ ಜಾತ್ರೆ ಅಂಗವಾಗಿ ಎರಡು ದಿನ ಮಾಳಾಪುರ ಮತ್ತು ಕಮಲಾಪುರದಲ್ಲಿ ಹೊನ್ನಾಟ ನಡೆಯುತ್ತಿದ್ದು, ಇದರಿಂದಾಗಿ ಎರಡೂ ಏರಿಯಾಗಳು ಸಂಪೂರ್ಣ ಬಂಡಾರದಿಂದ ಮಿಂದೆದ್ದಿವೆ.
ಈ ಜಾತ್ರೆ ಅಂಗವಾಗಿ ಈ ಏರಿಯಾಗಳ ಜನ ಯಾರೂ ಕಾಲಿಗೆ ಚಪ್ಪಲಿ ಹಾಕುವಂತಿಲ್ಲ. ಒಟ್ಟು ಏಳು ದಿನಗಳ ಜಾತ್ರೆ ನಡೆಯಲಿದ್ದು, ಮೊದಲ ದಿನವಾದ ಬುಧವಾರ ಕಮಲಾಪುರದಲ್ಲಿ ದೇವಿಯರ ಮೂರ್ತಿಗಳ ಮೆರವಣಿಗೆ ನಡೆಯಿತು. ಮೆರವಣಿಗೆ ವೇಳೆ ಮೂರ್ತಿಗಳಿಗೆ ಬಂಡಾರ ಎರಚಲಾಯಿತು. ಎಲ್ಲ ಭಕ್ತರೂ ಬಂಡಾರದಲ್ಲಿ ಮಿಂದೆದ್ದಿದ್ದರು.
200ವರ್ಷಗಳ ಬಳಿಕ ಗ್ರಾಮದೇವಿಯರ ಜಾತ್ರೆ ನಡೆಯುತ್ತಿದ್ದು, ಇಡೀ ಏರಿಯಾ ಸಂಪೂರ್ಣ ಬಂಡಾರಮಯವಾಗಿದೆ. ಜಾತಿ, ಬೇಧ ಮರೆತು ಸಾವಿರಾರು ಭಕ್ತರು ಈ ಹೊನ್ನಾಟದಲ್ಲಿ ಪಾಲ್ಗೊಂಡಿದ್ದರು. ಇನ್ನೂ ಗುರುವಾರ ದಿನ ಈ ಹೊನ್ನಾಟ ನಡೆಯಲಿದ್ದು, ಎಲ್ಲ ಬಡಾವಣೆಗಳಲ್ಲೂ ದೇವಿಯರ ಮೂರ್ತಿಗಳ ಮೆರವಣಿಗೆ ನಡೆಯಲಿದೆ. ಭಕ್ತರು ಶ್ರದ್ಧಾ ಭಕ್ತಿಯಿಂದ ಗ್ರಾಮ ದೇವಿ ಜಾತ್ರೆಯಲ್ಲಿ ಭಾಗಿಯಾಗುತ್ತಿದ್ದಾರೆ.
