Dharwad

ಧಾರವಾಡದ ನವನಗರ ಪೊಲೀಸ ಕಮಿಷನರ್ ಕಚೇರಿ ಮುಂದೆ ಬೈಕ್ ಚಾಲಕ ಮೇಲೆ ಹರಿದ ಗ್ಯಾಸ್ ಟ್ಯಾಂಕರ್, ಚಾಲಕ ಸಾವು..

Share

ಕರ್ತವ್ಯ ನಿರತ ಸಿಆರ್‌ಪಿಎಫ್ ಯೋಧನ ಮೇಲೆ ಗ್ಯಾಸ್ ಟ್ಯಾಂಕರ್ ಲಾರಿ ಹರಿದ ಪರಿಣಾಮ ಯೋಧ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಧಾರವಾಡ ನವನಗರ ಪೊಲೀಸ್ ಕಮಿಷನರ್ ಕಚೇರಿ ಸಮೀಪ ಈಗಷ್ಟೇ ನಡೆದಿದೆ‌.

ಧಾರವಾಡದ ರಾಯಾಪುರಕ್ಕೆ ಹುಬ್ಬಳ್ಳಿಯಿಂದ ಆಗಮಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ.

ಋತ ಬೈಕ್ ಚಾಲಕ ಸಿಆರ್‌ಪಿಎಫ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎನ್.ಎಫ್.ಸಿದ್ದಪ್ಪನವರ (52) ಎಂಬುವವರೇ ಮೃತ ಬೈಕ ಚಾಲಕ ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಊಟ ಮಾಡಿಕೊಂಡು ಮರಳಿ ಕರ್ತವ್ಯಕ್ಕೆ ಹೋಗುತ್ತಿದ್ದ ವೇಳೆ ಗ್ಯಾಸ್ ಟ್ಯಾಕರ್ ಸಿದ್ದಪ್ಪನವರ ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಇದರಿಂದ ತಲೆಗೆ ಗಂಭೀರವಾಗಿ ಗಾಯವಾಗಿ ಸಿದ್ದಪ್ಪನವರ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ನವಮಗರ ಎಪಿಎಂಸಿ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ಕೈಗೊಂಡಿದ್ದಾರೆ.

Tags:

error: Content is protected !!