Vijaypura

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅಮೋಘ ಸಾಧನೆ ಮಾಡಿದ ಎಕ್ಸಲಂಟ್ ವಿಜ್ಞಾನ ಪ.ಪೂ ಕಾಲೇಜು ಒಟ್ಟು ೯೯.೫೮ ಪ್ರತಿಷತ ಫಲಿತಾಂಶ, ೪೩೮ ಡಿಷ್ಟಿಂಕ್ಷನ್

Share

ಪ್ರಸಕ್ತ ಸಾಲಿನ ಬಹು ನಿರೀಕ್ಷಿತ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಪ್ರಕಟಗೊಂಡಿದ್ದು ವಿಜಯಪುರ ನಗರದ ಪ್ರತಿಷ್ಠಿತ ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಅದರಲ್ಲಿ ಅನುಷ್ಕಾ ಮಹಿಶಾಳೆ ೬೦೦ ಕ್ಕೆ ೫೮೮ ಅಂಕಗಳನ್ನು ಪಡೆಯುವುದರೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನಪಡೆದರೆ, ನಿಖಿಲ ಕಿತ್ತೂರ ೫೮೫ ಅಂಕಗಳೊAದಿಗೆ ದ್ವಿತೀಯ ಸ್ಥಾನ, ಪ್ರತೀಕ ಚವ್ಹಾಣ ಹಾಗೂ ಅಂಜನಾ ಹೊನ್ನುಂಗುರ ೫೮೪ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ತೃತೀಯ ಸ್ಥಾನವನ್ನು ಹಂಚಿಕೊAಡಿದ್ದಾರೆ. ಉಳಿದಂತೆ ಮಲ್ಲಿಕಾರ್ಜುನ ಮುಚ್ಚಂಡಿ(೫೮೨), ಅಕ್ಷತಾ ದೊಡ್ಡಮನಿ (೫೮೨), ರಕ್ಷಿತಾ ಬಿರಾದಾರ (೫೮೨), ಅಮನ್ ಮದಬಾವಿ(೫೮೧), ಶ್ರೇಯಾ ಗಂಗರಗೊAಡ(೫೮೧) ಶ್ರೇಯಾ ಮುರುಗುಂಡೆ (೫೮೦), ಸಹನಾ ಮಾವಿನಗಿಡದ(೫೭೯), ಅಮರ್ ಇರಕಲ್(೫೭೯), ಧರಣಿ ಜ್ಯೋಷಿ(೫೭೯), ಸಾವಿತ್ರಿ ಸುನೀಲ್ ಪಾಟೀಲ(೫೭೯), ಅನುಶ್ರಿ ಬಿರಾದಾರ (೫೭೮), ಸುದೀಪ ದೊರನಳ್ಳಿ (೫೭೮), ವೈಷ್ಣವಿ ಚಿಮ್ಮಲಗಿ(೫೭೮), ಶ್ರೇಯಾ ತೋಪಲಕಟ್ಟಿ (೫೭೭), ಗಣೇಶ ಕನ್ನೊಳ್ಳಿ (೫೭೭), ಮದನಗೌಡ ಝಳಕಿ (೫೭೭), ಸುಜನ್ ಮಾಂಡವಕರ್(೫೭೬), ಅಂಜಲಿ ಹಟ್ಟಿ (೫೭೬), ಸೌಜನ್ಯ ಸುನೀಲ್ ಪ್ರಕಾಶ (೫೭೬), ಸ್ಪೂರ್ತಿ ಬಿರಾದಾರ (೫೭೬),

ಅರ್ಪನೂರ್ ಕರ್ಜಗಿ (೫೭೬), ಸೇರಿದಂತೆ ವಿದ್ಯಾರ್ಥಿಗಳು ಅತೀ ಹೆಚ್ಚು ಅಂಕಗಳನ್ನು ಪಡೆದುಕೊಂಡಿರುತ್ತಾರೆ. ಗುಣಮಟ್ಟದ ಶಿಕ್ಷಣದ ಮೂಲಕ ಗುರುತಿಸಿಕೊಂಡಿರುವ ಕಾಲೇಜಿನಿಂದ ಪರೀಕ್ಷೆಗೆ ಹಾಜರಾಗಿದ ೭೧೮ ವಿದ್ಯಾರ್ಥಿಗಳ ಪೈಕಿ ೭೧೫ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಅದರಲ್ಲಿ ೪೩೮ ಡಿಸ್ಟಿಂಗ್ಷನ್, ೨೭೩ ಪ್ರಥಮ ದರ್ಜೆ ಹಾಗೂ ೪ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದುಒಟ್ಟು ೯೯.೫೮ ಪ್ರತಿಷತ ಫಲಿತಾಂಶವನ್ನು ದೊರೆತಿರುತ್ತದೆ. ಗಣೀತದಲ್ಲಿ ೭೯, ಭೌತಶಾಸ್ತçದಲ್ಲಿ ೧೨, ಕಂಪ್ಯೂಟರ್ ಸೈನ್ಸನಲ್ಲಿ ೩೯, ಜೀವಶಾಸ್ತçದಲ್ಲಿ ೦೫, ಕನ್ನಡದಲ್ಲಿ ೦೫ ಹಾಗೂ ಸಂಸ್ಕೃತದಲ್ಲಿ ಒಬ್ಬ ಸೇರಿದಂತೆ ಹೆಚ್ಚಿನ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡು ಅತ್ಯತ್ತಮ ಸಾಧನೆ ಮಾಡಿರುತ್ತಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ ಈ ಪರೀಕ್ಷೆಯ ನಂತರದಲ್ಲಿ ಎದುರಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ಮೂಲಕ ಮಕ್ಕಳು ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಿ ಹೆತ್ತರವರ ಕನಸನ್ನು ಈಡೇರಿಸಬೇಕು ಎಂದು ಹೇಳಿದರು. ಮಕ್ಕಳ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಜುನಗೊಂಡ ಸೇರಿದಂತೆ ಆಡಳಿತ ಮಂಡಳಿಯ ಸರ್ವ ಸದಸ್ಯರು, ಸರ್ವ ಬೋಧಕ ಬೋಧಕೇತರ ಸಿಬ್ಬಂದಿಗಳು ಶುಭ ಹಾರೈಸಿದ್ದಾರೆ.

Tags:

error: Content is protected !!