BELAGAVI

ಸಂವಿಧಾನದಿಂದ ಮಾತ್ರ ಸಮಾಜದಲ್ಲಿ ಸಮಾನತೆ ಸಾಧ್ಯ

Share

ಬೆಳಗಾವಿ ಕ್ಯಾಂಪ್‌ನ ಐತಿಹಾಸಿಕ ರಾಧಾಕೃಷ್ಣ ವಾಲ್ಮೀಕಿ ಮಂದಿರದ ಶತಮಾನೋತ್ಸವದ ಅಂಗವಾಗಿ ಇಂದು ಬೃಹತ್ ಮಹಾಪ್ರಸಾದ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಫಿರೋಜ್ ಸೇಠ್ ಅವರು, ಸಮಾಜದಲ್ಲಿನ ಮೇಲು-ಕೀಳು ಭಾವನೆಗಳನ್ನು ತೊಡೆದುಹಾಕಲು ಅಂಬೇಡ್ಕರ್ ಅವರ ಸಂವಿಧಾನವೇ ದಾರಿದೀಪ ಎಂದು ನುಡಿದರು.

ಬೆಳಗಾವಿ ನಗರದ ಕ್ಯಾಂಪ್ ಪ್ರದೇಶದ ಮೆಹತರ್ ಸಮಾಜ ಸುಧಾರಣಾ ಮಂಡಲದ ವತಿಯಿಂದ ಶ್ರೀ ರಾಧಾಕೃಷ್ಣ ವಾಲ್ಮೀಕಿ ಮಂದಿರದ ಶತಮಾನೋತ್ಸವ ವರ್ಷಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮಹಾಪ್ರಸಾದ ಕಾರ್ಯಕ್ರಮವು ಇಂದು ಯಶಸ್ವಿಯಾಗಿ ನೆರವೇರಿತು. ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಫಿರೋಜ್ ಸೇಠ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಬೆಳಗಾವಿ ಕ್ಯಾಂಟೋನ್ಮೆಂಟ್ ಎಕ್ಸಿಕ್ಯೂಟಿವ್ ಆಫೀಸರ್ ಮಂಚಲವಾರ್ ಸುದಾಮ್ ಹರಿವಿಜಯ್ ಅವರು ಪಾಲ್ಗೊಂಡಿದ್ದರು. ಅವರೊಂದಿಗೆ ಕ್ಯಾಂಟೋನ್ಮೆಂಟ್ ಬೋರ್ಡ್‌ನ ಎಲ್ಲಾ ಮಾಜಿ ಉಪಾಧ್ಯಕ್ಷರುಗಳು ಹಾಗೂ ಚುನಾಯಿತ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಈ ವೇಳೆ ಮಾತನಾಡಿದ ಮಾಜಿ ಶಾಸಕ ಫಿರೋಜ್ ಸೇಠ್ ಅವರು ಮನುವಾದಿ ವಿಚಾರಗಳು ಮೇಲು ಕೀಳೆಂಬ ಭಾವನೆಗಳನ್ನು ಸಮಾಜದಲ್ಲಿ ಭಿತ್ತಿದ್ದವು. ಅದನ್ನು ತೊಡೆದು ಹಾಕುವ ಕೆಲಸವನ್ನು ಬಾಬಾಸಾಹೇಬ್ ಅಂಬೇಡ್ಕರರ ಸಂವಿಧಾನವು ಮಾಡಿದೆ. ಮೊದಲೂ ಸಣ್ಣ ವಿಚಾರಗಳನ್ನು ಬಿಟ್ಟು ಬಿಡಬೇಕು. ಯಾರು ಚಿಕ್ಕವರು ಯಾರೂ ದೊಡ್ಡವರಲ್ಲ. ಆತ್ಮವಿಶ್ವಾಸಗಳನ್ನು ಬೆಳೆಸಿಕೊಂಡಾಗ ಮಾತ್ರ ಮುನ್ನಡೆಯಲು ಸಾಧ್ಯ. ಒಳ್ಳೆಯ ವಿಚಾರಗಳಿಗೆ ಎಲ್ಲರೂ ಬೆಂಬಲ ನೀಡಿದರೇ, ಅದು ಶತಶತಮಾನಗಳ ಕಾಲ ತನ್ನ ಮಹತ್ವವನ್ನ ಪಡೆದುಕೊಳ್ಳುತ್ತದೆ ಎಂದರು.

ಉತ್ತರ ಮತಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರ ಪುತ್ರ ಅಮಾನ್ ಸೇಠ್ ಅವರು, ಬೆಳಗಾವಿ ನಗರದಲ್ಲಿ ಮ್ಹೇತರ್ ಸಮಾಜದ ಜನಸಂಖ್ಯೆ ಕಡಿಮೆಯಾಗಿದ್ದರೂ ಕೂಡ ಈ ಸಮಾಜದ ಯೋಗದಾನ ಅಧಿಕವಾಗಿದೆ. ಎಲ್ಲ ಸಮುದಾಯಗಳು ಒಂದಾಗಿ ಮುಂದುವರೇದಾಗ ಮಾತ್ರ ಸಮಾಜದ ಉನ್ನತಿ ಸಾಧ್ಯ. ಭಾರತದಲ್ಲಿ ಸಮಾನತೆ ಮತ್ತು ಏಕತೆಯನ್ನು ಕಾಪಾಡಲೂ ಡಾ.ಬಾಬಾಸಾಹೇಬ್ ಅಂಬೇಡ್ಕರರು ನೀಡಿದ ಸಂವಿಧಾನವೂ ಪೂರಕವಾಗಿದೆ. ನಮ್ಮ ಮನೆ, ರಾಜ್ಯ ದೇಶ ಸಂವಿಧಾನದ ದಾರಿಯಲ್ಲಿ ಒಂದಾಗಿ ನಡೆದಾಗ ಮಾತ್ರ ಅಭಿವೃದ್ಧಿ ಕಾಣಲೂ ಸಾಧ್ಯ ಎಂದರು.

ಡಾ. ಮದನ್ ಡೋಂಗರೆ ಅವರು ಉತ್ತರ ಕ್ಷೇತ್ರದ ಶಾಸಕರಾಗಿದ್ದಾಗ ಫಿರೋಜ್ ಸೇಠ್ ಅವರಾಗಲಿ ಹಾಲಿ ಶಾಸಕರಾದ ಆಸೀಫ್ ಸೇಠ್ ಅವರು ಕೂಡ ಮ್ಹೇತರ್ ಸಮಾಜದ ಲ್ಲ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಸಮಾಜ ಸದಾ ನೆನಸುವಂತಹ ಕಾರ್ಯಗಳನ್ನು ಮಾಡಬೇಕು. ಮ್ಹೇತರ್ ಸಮುದಾಯದ ಜನಸಂಖ್ಯೆ ಕಡಿಮೆಯಾಗಿದೆ ಆದರೇ ಸಮುದಾಯದ ಪ್ರತಿಯೊಬ್ಬರ ಹೃದಯ ವಿಶಾಲವಾಗಿದೆ ಎಂದರು.

ಇನ್ನು ದಂಡು ಮಂಡಳಿಯ ಮಾಜಿ ಉಪಾಧ್ಯಕ್ಷ ಸಾಝೀದ್ ಶೇಖ್ ಅವರು, ರಾಧಾಕೃಷ್ಣ ಮಂದಿರದ ಅಭಿವೃದ್ಧಿಗಾಗಿ ಮಾಜಿ ಶಾಸಕ ಫಿರೋಜ್ ಸೇಠ್ ಅವರ ಯೋಗದಾನ ಅಧಿಕವಾಗಿದೆ. ಅಲ್ಲದೇ ಕ್ಯಾಂಪ್ ಪ್ರದೇಶದಲ್ಲಿನ ಅಭಿವೃದ್ಧಿಗೆ ಅವರು ಒತ್ತು ನೀಡಿದ ಮೊದಲ ಶಾಸಕರಾಗಿದ್ದಾರೆ. ಹಾಲಿ ಶಾಸಕ ಆಸೀಫ್ ಸೇಠ್ ಅವರು ಕೂಡ ಕ್ಯಾಂಪ್ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ನರೋತ್ತಮ ಚವ್ಹಾಣ್, ಶೇಖರ್ ಛಬ್ರಿ, ದೀಪಕ್ ವಾಘೇಲಾ, ಸುನೀಲ್ ಬನ್ಸೆ, ಅಲ್ಲೇದ್ದೀನ್ ಕಿಲ್ಲೇದಾರ, ರಿಝ್ವಾನ್ ಬೇಪಾರಿ, ಚಂದ್ರಶೇಖರಯ್ಯಾ ಸವಡಿ, ರಾಹಿಲಾ ಶೇಖ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!