ಅಕ್ಷರ ಕಲಿಸಿದ ಗುರುವಿಗೆ ಸಲ್ಲಿಸುವ ಗೌರವವೇ ಶ್ರೇಷ್ಠವಾದುದು. ಬೆಳಗಾವಿಯ ಬಿ.ಕೆ. ಕಂಗ್ರಾಳಿ ಸರ್ಕಾರಿ ಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕ ಎಸ್.ಎಸ್. ವನ್ನುರ ಅವರಿಗೆ ಶಿಕ್ಷಕ ಬಳಗ ಹಾಗೂ ವಿದ್ಯಾರ್ಥಿಗಳು ಸೇರಿ ಹೃತಪೂರ್ವಕ ಸನ್ಮಾನ ಮಾಡಿದ್ದಾರೆ.
ಬೆಳಗಾವಿಯ ಬಿ.ಕೆ. ಕಂಗ್ರಾಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕ ಎಸ್.ಎಸ್. ವನ್ನುರ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ರುದ್ರಪ್ಪ ಬಳಕುಂದಿ ವಹಿಸಿದ್ದರು. ಶಿಕ್ಷಕಿ ಆಷ್ಮಾ ನಾಯ್ಕ ಮಾತನಾಡಿ, ಸವಾಲುಗಳ ನಡುವೆಯೂ ಮಕ್ಕಳ ಬದುಕಿಗೆ ಬೆಳಕಾದ ಶಿಕ್ಷಕರ ಋಣ ತೀರಿಸಲಾಗದು ಎಂದರು. ಸಮಾರಂಭದಲ್ಲಿ ಶಾಹು ನಗರದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ವೃಂದ, ಮರಾಠಿ ಶಾಲೆಯ ಗುರುವೃಂದ, ಅಡುಗೆ ಸಿಬ್ಬಂದಿ ಶೋಭಾ ತಳವಾರ, ಅರುಣ ಪಾಟೀಲ, ನಮಿತಾ ಕಾಂಬಳೆ, ಬಿ.ವೈ. ಹಿತಾರಗೌಡರ್, ಎಸ್.ಎನ್. ಉಪ್ಪಿನ, ಶಾಬಾಷ್ ಖಾನ್, ಬಾಂದುರ್ಗೆ, ಭಾರತಿ ಸೊಪ್ಪಿಮಠ, ಎಸ್.ಎಂ. ಅಂಗಡಿ, ಟಕ್ಕೇಕರ್, ಬಾಳಿಗಟ್ಟಿ, ಆರ್.ಜೆ. ಭಜಂತ್ರಿ, ಎಸ್.ಎಸ್. ವಗ್ಗರ, ಶೈಲಶ್ರೀ ಸಿ. ಕೋಲಕಾರ, ಎಸ್.ಎಸ್. ಕೋಲಕಾರ, ಪ್ರಭಾವತಿ ಪತ್ತಾರ, ಅಮೃತಾ ಕಮ್ಮಾರ, ಶಿವಲೀಲಾ, ಗೀತಾ ಬಡಿಗೇರ ಸೇರಿದಂತೆ ಹಲವು ಗಣ್ಯರು ಹಾಗೂ ಹಳೆಯ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಸುರೇಶ ಸಕ್ರೆಣ್ಣವರ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ನಾಲ್ಕನೇ ತರಗತಿ ಮಕ್ಕಳಿಂದ ಸಾಂಸ್ಕೃತಿಕ ವೈಭವ ಜರುಗಿತು.
