BELAGAVI

ವೃದ್ಧನಿಗೆ 15 ಕೋಟಿ ವಂಚನೆ ಪ್ರಕರಣ: 1 ಕೋಟಿ ರೂ. ಹಣ ಫ್ರೀಜ್; ಹತ್ತು ಬ್ಯಾಂಕ್ ಖಾತೆಗಳ ಮೇಲೆ ತನಿಖಾ ಕಣ್ಣು!

Share

ವೃದ್ಧನಿಗೆ 15 ಕೋಟಿ ಡಿಜಿಟಲ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 1 ಕೋಟಿ ರೂ. ಹಣ ಬ್ಲ್ಯಾಕ್ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಹೇಳಿದರು.

ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ವೃದ್ಧನ ಖಾತೆಯಿಂದ 15 ಕೋಟಿ ರೂ. ವಂಚನೆಯಲ್ಲಿ ಅಹ್ಮದಾಬಾದ್, ಕೊಲ್ಕತ್ತಾ, ಗುವಾಹಟಿ, ಹರಿಯಾಣ ಹಾಗೂ ದೆಹಲಿಯ 10 ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿತ್ತು. ಹೈದ್ರಾಬಾದ್ ನಲ್ಲಿ ತನಿಖೆ ಮಾಡಿದಾಗ ಶ್ರೀಪಾದ ನಾಯಕ ಹಾಗೂ ಶರದ್ ನಾಯಕ ಇಬ್ಬರು ಆರೋಪಿಗಳು ಖಾಸಗಿ ಕಂಪನಿ ಹೆಸರಿನಲ್ಲಿ ನಕಲಿ ಖಾತೆಗೆ ವರ್ಗಾವಣೆ ಮಾಡಿದ್ದರು. ಇವರನ್ನು ಬಂಧಿಸಲು ವಿಶೇಷ ತಂಡ ರಚನೆ ಮಾಡಲಾಗಿದೆ.

10 ಕೋಟಿಗೂ ಅಧಿಕ ವಂಚನೆ ಪ್ರಕರಣಗಳಲ್ಲಿ ಸಿಬಿಐಗೆ ಹಸ್ತಾಂತರ ಮಾಡಬೇಕು ಎಂದು ಸರಕಾರದ ನಿಯಮ ಇದೆ. ಅದರ ಕಾಗದ ಪತ್ರಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದರು.
ಬೆಳಗಾವಿ ನಗರದಲ್ಲಿ 2,900 ಮ್ಯೂಲ್ ಖಾತೆಗಳು ಚಾಲ್ತಿಯಲ್ಲಿವೆ. ಸಾರ್ವಜನಿಕರು ಹಣದ ಆಸೆಗೆ ನಿಮ್ಮ ಪರಿಚಯಸ್ತರಿಗೆ ನಿಮ್ಮ ಬ್ಯಾಂಕ್ ಖಾತೆ ಕೊಡಬೇಡಿ ಎಂದರು.

Tags:

error: Content is protected !!