Hukkeri

ಹುಕ್ಕೇರಿ : ಡಾ, ಬಾಬು ಜಗಜೀವನರಾಮ್ ರವರು ಜಗತ್ತಿಗೆ ಜೀವನ ನೀಡಿದ ಮಹಾನ್ ಹೋರಾಟಗಾರ – ತಹಸಿಲ್ದಾರ ಕಟ್ಟಿಮನಿ

Share

ಸಮಾನತೆಯ ಹರಿಕಾರನಿಗೆ ಅಧಿಕಾರಿಗಳ ಪುಷ್ಪನಮನ
ಡಾ, ಬಾಬು ಜಗಜೀವನ್ ರಾಮ್ ರವರು ಸಮಾನತೆಗಾಗಿ ಹೋರಾಟ ಮಾಡಿ ಜಗತ್ತಿಗೆ ಬೇಳಕು ಚೆಲ್ಲಿದ ಮಹಾನ್ ವ್ಯಕ್ತಿಯಾಗಿದ್ದರು ಎಂದು ಹುಕ್ಕೇರಿ ತಹಸಿಲ್ದಾರ ಬಲರಾಮ ಕಟ್ಟಿಮನಿ ಹೇಳಿದರು.

ಹುಕ್ಕೇರಿ ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ತಾಲೂಕಾ ಆಡಳಿತ ಹಾಗೂ ಹುಕ್ಕೇರಿ, ಸಂಕೇಶ್ವರ ಪುರಸಭೆಗಳ ಸಂಯುಕ್ತ ಆಶ್ರಯದಲ್ಲಿ ಡಾ, ಬಾಬು ಜಗಜೀವನರಾಮ ರವರ ಜಯಂತಿ ಉತ್ಸವ ಸಮಾರಂಭ ವನ್ನು ಯಮಕನಮರ್ಡಿ ಹುಣಸಿಕೋಳ್ಳ ಮಠದ ಸಿದ್ದ ಬಸವ ದೇವರ ದಿವ್ಯ ಸಾನಿಧ್ಯದಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ ಡಾ, ಬಾಬು ಜಗಜೀವನ್ ರಾಮ ರವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಬೆಳಗಿನ ಜಾವ ಪಟ್ಟಣದ ಅಂಬೇಡ್ಕರ ಉದ್ಯಾನವನದಲ್ಲಿ ತಾಲೂಕಾ ದಂಡಾಧಿಕಾರಿ ಬಲರಾಮ ಕಟ್ಟಮನಿ ಬಾಬೂಜಿಯವರ ಭಾವ ಚಿತ್ರಕ್ಕೆ ಮತ್ತು ಡಾ, ಬಾಬಾಸಾಹೇಬ ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಜರುಗಿಸಿ ವಾದ್ಯ ಮೇಳಗಳೊಂದಿಗೆ ಮೇರವಣೆಗೆ ಮೂಲಕ ಸಭಾ ಭವನಕ್ಕೆ ಬರಮಾಡಿಕೋಳ್ಳಲಾಯಿತು.

ಸಮಾಜ ಕಲ್ಯಾಣ ಸಹಾಯಕ ನಿರ್ದೆಶಕ ಗುರುಶಾಂತ ಪಾವಟೆ ಮಾತನಾಡಿ ಇಂದು ಹುಕ್ಕೇರಿ ತಾಲೂಕಾ ಆಡಳಿತ ಮತ್ತು ಸಮಾಜದ ಮುಖಂಡರ ರೊಂದಿಗೆ ಡಾ, ಬಾಬು ಜಗಜೀವನರಾಮ ರವರ 119 ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದರು
ನಂತರ ಮಾತನಾಡಿದ ಸಮಾಜ ಮುಖಂಡ ಉದಯ ಹುಕ್ಕೇರಿ ಬಾಬೂಜಿಯವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಎಲ್ಲರೂ ಸಮಾನರು ಎಂದು ಹೋರಾಟಕ್ಕೆ ಇಡಿ ಜೀವನವನ್ನು ಮುಡುಪಾಗಿಟ್ಟು ಸಮಾನತೆಯ ಹರಿಕಾರ ರವರ ಜಯಂತಿ ಯನ್ನು ಇಂದು ಹುಕ್ಕೇರಿ ಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು

ವೇದಿಕೆ ಮೇಲೆ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ, ಬಿ ಇ ಓ ಪ್ರಭಾವತಿ ಪಾಟೀಲ, ಪೋಲಿಸ್ ಇನ್ಸಪೇಕ್ಟರ ಶಿವಶಂಕರ ಅವುಜಿ,ಸಿ ಡಿ ಪಿ ಓ ಹೋಳೆಪ್ಪ ಎಚ್, ಮಹೇಶ ಬಜಂತ್ರಿ, ಸುಭಾಷ ಗಸ್ತಿ, ಸಮಾಜ ಮುಖಂಡರಾದ ಬಾಹುಸಾಹೆಬ ಪಾಂಡ್ರೆ, ರಮೇಶ ಹುಂಜಿ,ಕೆಂಪಣ್ಣ ಶಿರಹಟ್ಟಿ, ರಮೇಶ ಹೊಸಮನಿ, ರೇಖಾ ಬಂಗಾರಿ, ಕವಿತಾ ಬೇವಿನಕಟ್ಟಿ, ಶಶಿಕಾಂತ ಹೋನ್ನಳ್ಳಿ, ಮಲ್ಲು ಭಂಡಾರಿ, ಉಪಸ್ಥಿತರಿದ್ದರು.
ತಹಸಿಲ್ದಾರ ಕಟ್ಟಮನಿ ಮಾತನಾಡಿ ಹಸಿರು ಕ್ರಾಂತಿ ಹರಿಕಾರ,ರಾಷ್ಟ್ರ ನಾಯಕ ಹಾಗೂ ಭಾರತದ ಉಪ ಪ್ರಧಾನಿ ಡಾ, ಬಾಬು ಜಗಜೀವನ ರಾಮ ರವರು ದೀನ ದಲಿತರ ಮತ್ತು ಶೋಷಿತರ ಪರವಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದ ಮಹಾನ ನಾಯಕರಾಗಿದ್ದರು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು ಎಂದರು
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗಳು ಮತ್ತು ವಿವಿಧ ತಾಲೂಕಾ ಮಟ್ಟದ ಅಧಿಕಾರಿಗಳು ಹಾಗೂ ದಲಿತಪರ ಸಂಘಟನೆಗಳ ಮುಖಂಡರು ಹಾಜರಿದ್ದರು

Tags:

error: Content is protected !!