BELAGAVI

ಬೆಳಗಾವಿಯಲ್ಲಿ ಕೋಟಿ ಕೋಟಿ ವಂಚನೆ: ದುಬೈ ಲಿಂಕ್ ಪತ್ತೆ, ಮಹಿಳಾ ಆರೋಪಿ ಅರೆಸ್ಟ್!

Share

ವಿದೇಶದಲ್ಲಿ ಕುಳಿತು ಬೆಳಗಾವಿ ನಗರದಲ್ಲಿ ಮ್ಯೂಲ್ ಖಾತೆಯ ಮೂಲಕ ಕೋಟ್ಯಂತರ ರೂ. ವಂಚನೆ ಮಾಡಿದ್ದ ಮಹಿಳೆಯನ್ನು ಬಂಧನ‌ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಹೇಳಿದರು.
ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ದುಬೈನಲ್ಲಿ ಕುಳಿತು ವ್ಯಕ್ತಿಯೋರ್ವನು ಮ್ಯೂಲ್ ಖಾತೆಯನ್ನು ಬಳಿಸಿಕೊಂಡು ಬೆಳಗಾವಿ ನಗರದ ವ್ಯಕ್ತಿಯೋರ್ವನಿಗೆ ಕೋಟ್ಯಂತರ ರೂ. ವಂಚನೆ ಮಾಡಿದ್ದ. ವಂಚನೆ ಮಾಡಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ದುಬೈನಲ್ಲಿ ಇರುವ ಆರೋಪಿ ಬಂಧನಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಸಾರ್ವಜನಿಕರು ಬಾಡಿಗೆ ಆಧಾರದ ಮೇಲೆ ಬೇರೆಯವರಿಗೆ ನಿಮ್ಮ ಬ್ಯಾಂಕ್ ಖಾತೆ ಕೊಟ್ಟರೆ ನಿಮ್ಮ ಮೇಲೂ ಕ್ರಮವಾಗುತ್ತದೆ ಎಂದರು.

Tags:

error: Content is protected !!