BELAGAVI

ಪೌರ ಕಾರ್ಮಿಕರಿಗೆ ಸಹಕಾರ ನೀಡಿ ಪ್ಲಾಸ್ಟಿಕ್ ಮುಕ್ತ ಬೆಳಗಾವಿಯನ್ನು ನಿರ್ಮಿಸಿ ; ಜಿಲ್ಲಾ ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ

Share

ಸಮಾಜದಲ್ಲಿ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಸಹಕಾರ ನೀಡಿ ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಿ ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ ಎಂದು ಬೆಳಗಾವಿ ಜಿಲ್ಲಾ ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ ಹೇಳಿದರು.

ಗುರುವಾರ ಬೆಳಗಾವಿ ನರಗುಂದಕರ ಭಾವಿ ವೃತ್ತದಲ್ಲಿ ಮಹಾನಗರ ಪಾಲಿಕೆಯಿಂದ ವಿಶ್ವ ಜಲದಿನ ಹಾಗೂ ಪ್ಲಾಸ್ಟಿಕ್ ಮುಕ್ತ ಅರಿವು ಮತ್ತು ಕ್ಲಾಥ್ ಬ್ಯಾಗ್ ವೆಡ್ಡಿಂಗ್ ಯಂತ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೌರ ಕಾರ್ಮಿಕರು ಮನೆಯ ಶುದ್ಧ ಮಾಡುವ ರೀತಿಯಲ್ಲಿ ನವರವನ್ನು ಶುದ್ಧ ಮಾಡುತ್ತಾರೆ. ಅವರಿಗೆ ಸಹಕಾರ ಕೊಡದಿದ್ದರೆ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ನಮಗೆ ತಿಳಿಯದೆಯೇ ನಾವು ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ನಾವು ಎಷ್ಟೇ ತೊಂದರೆ ನೀಡಿದರೂ ಭೂ ತಾಯಿ ತಡೆದುಕೊಳ್ಳುತ್ತಿದ್ದಾಳೆ. ದಿನದಿಂದ ದಿನಕ್ಕೆ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದೆ. ಅದನ್ನು ಕಡಿಮೆ ಮಾಡಬೇಕು ಎಂದರು.
ಮೊದಲು ಬೇರೆ ದೇಶದಲ್ಲಿ ನೀರು ಹಾಗೂ ಆಮ್ಲಜನಕ ಖರೀದಿ ಮಾಡುವುದನ್ನು ನೋಡಿ ನಾವು ಅಪಹಾಸ್ಯ ಮಾಡುತ್ತಿದ್ದೇವು. ಈಗ ನಾವು ಸಹ ಹಣ ಕೊಟ್ಟು ಖರೀದಿ ಮಾಡುತ್ತಿದ್ದೇವೆ‌. ನಮ್ಮ ಪರಿಸರವನ್ನು ನಾವು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಮಾತನಾಡಿ, ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಯಾಗುತ್ತಿದೆ. ಮೈಕ್ರೋ ಪ್ಲಾಸ್ಟಿಕ್ ಮಣ್ಣಿನ ಮೂಲಕ ಅಥವಾ ನೀರಿನ ಮೂಲಕ ಬಂದಾಗ ಕ್ಯಾನ್ಸರ್, ಸಂತಾನ ಹೀನತೆ ಬರುತ್ತದೆ. ಆದ್ದರಿಂದ ನಾವು ಪ್ಲಾಸ್ಟಿಕ್ ಬಳಕೆ ಮಾಡದೆ ಪರಿಸರಕ್ಕೆ ಹಾನಿಯಾಗುವ ವಸ್ತುಗಳನ್ನು ಬಳಸಬಾರದು ಎಂದು ಕರೆ ನೀಡಿದರು‌.

ಮೇಯರ್ ಪ್ರೀತಿ ಕಾಮಕಾರ, ಉಪಮೇಯರ್ ಹನುಮಂತ ಕೊಂಗಾಲಿ, ಮಾಜಿ ಮೇಯರ್ ಮಂಗೇಶ್ ಪವಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!