Dharwad

ಧಾರವಾಡ: ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಕೊಲೆ ಕೇಸ್; ಎಂಟು ಹಂತಕರು ಅಂದರ್!!!

Share

ಧಾರವಾಡದ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಉಪನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ತಡರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಎಂಟು ಜನ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಇಡೀ ಧಾರವಾಡ ನಗರವನ್ನೇ ಬೆಚ್ಚಿಬೀಳಿಸಿದ್ದ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಉಪನಗರ ಪೊಲೀಸರು ಎಂಟು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರ ಮಾರ್ಗದರ್ಶನದಲ್ಲಿ ರಚಿಸಲಾಗಿದ್ದ ಮೂರು ವಿಶೇಷ ತಂಡಗಳು ತಡರಾತ್ರಿ ಈ ಕಾರ್ಯಾಚರಣೆ ನಡೆಸಿವೆ.

ಬಂಧಿತರಲ್ಲಿ ಐವರು ನೇರವಾಗಿ ಕೊಲೆಯಲ್ಲಿ ಭಾಗಿಯಾದವರಾಗಿದ್ದು, ಉಳಿದ ಮೂವರು ಹತ್ಯೆಗೆ ಸಂಚು ರೂಪಿಸಿದವರಾಗಿದ್ದಾರೆ. ಕೃತ್ಯದ ಬಳಿಕ ಆರೋಪಿಗಳು ಫೈರೋಜ್ ಮೊಬೈಲ್ ಅನ್ನು ಧಾರವಾಡ-ಬೆಳಗಾವಿ ಗಡಿ ಭಾಗದಲ್ಲಿ ಬಿಸಾಡಿ ಪರಾರಿಯಾಗಿದ್ದರು. ತಾಂತ್ರಿಕ ತಂಡದ ಸಹಾಯದಿಂದ ಮೊಬೈಲ್ ಲೋಕೇಶನ್ ಪತ್ತೆಹಚ್ಚಿದ ಪೊಲೀಸರು, ಆರೋಪಿಗಳು ಉಪ್ಪಿನ ಬೆಟ್ಟಗೇರಿಯ ಸಂಬಂಧಿಕರ ಮನೆಯಲ್ಲಿ ಅಡಗಿರುವುದನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿದ್ದಾರೆ.ಎ1 ಆರೋಪಿ ಮಹಮ್ಮದ್ ಶಾ ಸೇರಿದಂತೆ ಎಂಟು ಜನರನ್ನು ಸದ್ಯ ವಶಕ್ಕೆ ಪಡೆಯಲಾಗಿದ್ದು, ಕೃತ್ಯದಲ್ಲಿ ಭಾಗಿಯಾದ ಒಟ್ಟು 9 ಜನರ ಗ್ಯಾಂಗ್‌ನಲ್ಲಿ ಇನ್ನೊಬ್ಬ ತಲೆಮರೆಸಿಕೊಂಡಿರುವ ಸಂಚುಗಾರನಿಗಾಗಿ ಶೋಧ ಮುಂದುವರಿದಿದೆ. ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

Tags:

error: Content is protected !!