hubbali

ಲವ್ ಜಿಹಾದ್‌ ಪ್ರಕರಣದ ಆರೋಪಿ ವಿಚಾರಣೆ ನಡೆಸಿದ ಕಮಿಷನ‌ರ್: ಸಮೀ‌ರ್ ಸಹೋದರಿ ಬಂಧನ ಸಾಧ್ಯತೆ..?

Share

ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾದ ನಂತರ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

ಆರೋಪಿ ಸಮೀ‌ರ್ ಮುಲ್ಲಾನನ್ನು ವಶಕ್ಕೆ ಪಡೆದು ಹುಬ್ಬಳ್ಳಿ ವಿದ್ಯಾನಗರ ಠಾಣೆ ಪೊಲೀಸರಿಂದ ವಿಚಾರಣೆ ತೀವ್ರಗೊಂಡಿದೆ. ಸ್ವತಃ ಸಮೀರ್‌ನನ್ನು ಪೊಲೀಸ್‌ ಕಮಿಷನ‌ರ್ ವಿಚಾರಣೆ ಮಾಡಿದ್ದಾರೆ. ಅರ್ಧಗಂಟೆಗಳ ವಿಚಾರಣೆ ಮಾಡಿದ ಪೊಲೀಸ್‌ ಆಯುಕ್ತ ಎನ್.ಶಶಿಕುಮಾ‌ರ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಇನ್ನೂ ಯುವತಿ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದು, ತಮ್ಮನ ಕೃತ್ಯಕ್ಕೆ ಸಾಥ್‌ ನೀಡಿದ ಸಹೋದರಿ ಮತ್ತು ಬಾವನನ್ನು ವಶಕ್ಕೆ ಪಡೆಯಲು ವಿದ್ಯಾನಗರ ಪೊಲೀಸರು ಮುಂದಾಗಿದ್ದಾರೆ. ಸಹೋದರಿ ತೈಸಿಮ್ ಮತ್ತು ಬಾವ ಲೂಕ್‌ನನ್ನು ಬಂಧಿಸುವ ಸಾಧ್ಯತೆಯಿದೆ.

Tags:

error: Content is protected !!