ಚಿಕ್ಕೋಡಿಯ ಕೆ.ಎಲ್.ಇ. ಇಂಜಿನೀಯರಿಂಗ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪಾಸಾದ ವಿಜ್ಞಾನ ವಿದ್ಯಾರ್ಥಿಗಳಿಗೆ ಎಪ್ರೀಲ್ 11 ರಂದು ಮುಂಜಾನೆ 09.30 ರಿಂದ 1 ಗಂಟೆಯ ವರೆಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರ ವಿಷಯಗಳ ಅಣಕು ಸಿ.ಇ.ಟಿ. ಪರೀಕ್ಷೆಯನ್ನು ನಡೆಸಲಾಗುವುದು. ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳು ಈ ಅಣಕು ಪರೀಕ್ಷೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಪ್ರಾಚಾರ್ಯರಾದ ಡಾ. ದರ್ಶನಕುಮಾರ ಬಿಳ್ಳೂರ ತಿಳಿಸಿದ್ದಾರೆ.

ಈ ಪರೀಕ್ಷೆಗೆ 50ರೂ. ನೊಂದಣಿ ಶುಲ್ಕ ಇರುತ್ತದೆ. ಈ ಅಣಕು ಪರಿಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದವರಿಗೆ 3000 ರೂಪಾಯಿ, ದ್ವಿತೀಯ ಸ್ಥಾನ 2000 ರೂಪಾಯಿ, ತೃತೀಯ ಸ್ಥಾನ 1000 ರೂಪಾಯಿ ನಗದು ಬಹುಮಾನ ನೀಡಲಾಗುವುದು. ವಿದ್ಯಾರ್ಥಿಗಳು ಆನಲೈನ್ ಮುಖಾಂತರ ತಮ್ಮ ಹೆಸರು ನೊಂದಾಯಿಸಲೂ ರೆಜಿಸ್ಟ್ರೆಶನ್ ಲಿಂಕ್ https://forms.gle/y9UNirajXMfwTjYs7 ಹಾಗೂ ಕಾಲೇಜಿನ ವೆಬ್ಸೈಟ್ www.klecet.edu.in ಗೆ ಸಂಪರ್ಕಿಸಿ ಮತ್ತು ಹೆಚ್ಚಿನ ಮಾಹಿತಿಗಾಗಿ 08338-257100 ಅಥವಾ 9483047799 ಗೆ ಸಂಪರ್ಕಿಸಿ.
