Bailahongala

ತಿಗಡಿ ಗ್ರಾಮದಲ್ಲಿ ಸಂಭ್ರಮದ ಶ್ರೀ ಚನ್ನಬಸವೇಶ್ವರ ಜಾತ್ರೆ: ಭಕ್ತಿ ಪರಾಕಾಷ್ಠೆಯಲ್ಲಿ ತೇರು ಎಳೆದ ಭಕ್ತಸಾಗರ

Share

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಚನ್ನಬಸವೇಶ್ವರ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಎರಡು ದಿನಗಳ ಕಾಲ ನಡೆದ ಈ ಮಹೋತ್ಸವದ ಮೊದಲ ದಿನ ಸಾಮೂಹಿಕ ವಿವಾಹ ಹಾಗೂ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.
ಇನ್ನು ಎರಡನೇ ದಿನ ನಡೆದ ಶ್ರೀ ಚನ್ನಬಸವೇಶ್ವರ ರಥೋತ್ಸವ ವಿಶೇಷ ಆಕರ್ಷಣೆಯಾಗಿತ್ತು. ಮಹಿಳೆಯರು ರಥಕ್ಕೆ ಪೂಜೆ ಸಲ್ಲಿಸಿದರು. ಮೇಳ-ತಾಳ ಹಾಗೂ ಡೊಳ್ಳು-ಕುಣಿತದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥೋತ್ಸವ ಭವ್ಯವಾಗಿ ಸಾಗಿತು. ಗ್ರಾಮದ ಯುವಕರು, ಹಿರಿಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾತ್ರೆಯ ಮೆರಗನ್ನು ಹೆಚ್ಚಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಎರಡೂ ದಿನಗಳಲ್ಲಿ ಜಕ್ಕನಾಯಕನಕೊಪ್ಪದ ಶ್ರೀ ಚನ್ನವೃಷಭೇಂದ್ರ ಮಠದ ಶ್ರೀ ಮಾತೋಶ್ರೀ ಶಿವಯೋಗಿನಿ ದೇವಿ ಅವರಿಂದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ನಡೆಯಿತು.
ಈ ಮಹೋತ್ಸವದ ಯಶಸ್ವಿಗೆ ಶ್ರೀ ಚನ್ನಬಸವೇಶ್ವರ ಜಾತ್ರಾ ಸಮಿತಿ ಹಾಗೂ ತಿಗಡಿ ಗ್ರಾಮದ ಸಮಸ್ತ ಭಕ್ತ ಮಂಡಳಿ ಶ್ರಮಿಸಿತು

Tags:

error: Content is protected !!