Bagalkot

ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಪ್ರಿಯಕರ ಆತ್ಮಹತ್ಯೆ.

Share

ಅವ್ರಿಬ್ಬರು ಒಂದೆ ಊರಿನವ್ರು.ಅವ್ರರಿಬ್ಬರ ಸ್ನೇಹ ಮನದಲ್ಲಿ ಪ್ರೀತಿಯಾಗಿ ಅರಳಿತ್ತು.ನಿನ್ನೆ ಅವ್ರಿಬ್ಬರ ನಡುವೆ ಜಗಳ ನಡೆದಿದೆ. ಮನನೊಂದ ಹುಡುಗಿ ರಾತ್ರಿ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಹುಡಿಗಿ ಆತ್ಮಹತ್ಯೆ ಸುದ್ದಿ ಕೇಳಿ ಹುಡುಗನು ಆತ್ಮಹತ್ಯೆಗೆ ಶರಣಾಗಿದ್ದಾನೆ.ನೇಣಿಗೆ ಶರಣಾದ ಪ್ರೇಮಿಗಳ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ…

ಒಂದೆಡೆ ಪ್ರೀತಿಯ ಗುಂಗಲ್ಲಿ ತಗೆಸಿಕೊಂಡ ಪ್ರೀತಿಯ ಜೋಡಿ ಹಕ್ಕಿಗಳ ಪೋಟೋ.ಮತ್ತೊಂದೆಡೆ ಪ್ರೇಮಿಗಳಿಬ್ಬರ ನಡುವಿನ ಜಗಳದಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ಪ್ರೇಮಿಗಳಿಬ್ಬರ ಶವ.ಇನ್ನೊಂದೆಡೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರೋ ಪೊಲೀಸರು.ಇಂತಹ ದಾರುಣ ಘಟನೆ ನಡೆದಿದ್ದು ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲ್ಲೂಕಿನ ಆಸಂಗಿ ಗ್ರಾಮದಲ್ಲಿ. ಹೌದು ಆಸಂಗಿ ಗ್ರಾಮದ ಯುವತಿ ಪವಿತ್ರಾ(19) ನಿನ್ನೆ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.ಪವೀತ್ರಾಳ ಆತ್ಮಹತ್ಯೆ ಸುದ್ದಿ ಕೇಳಿ ಪ್ರೇಮಿ ಕಶರ್ತಿಕ್(21) ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಇವರಿಬ್ಬರು ಪ್ರೇಮಿಗಳಾಗಿದ್ದರು,ನಿನ್ನೆ ಮದ್ಹ್ಯಾನ ಇಬ್ಬರ ನಡುವೆ ಜಗಳವಾಗಿದ್ದು,ಮನನೊಂದು ಈ ದುರ್ಘಟನೆ ನಡೆದಿದೆ ಎನ್ನಲಾಗ್ತಿದೆ..

ಇನ್ನು ಆತ್ಮಹತ್ಯೆಗೆ ಶರಣಾದ ಈ ಪ್ರೇಮಿಗಳಿಬ್ಬರು ಕಳೆದ ಎರಡಮೂರು ವರ್ಷಗಳಿದ್ದ ಪ್ರೀತಿಸುತ್ತಿದ್ದರು.ನಿನ್ನೆ ಇವರಿಬ್ಬರಲ್ಲಿ ಮದುವೆ ವಿಚಾರಕ್ಕೆ ಜಗಳ ನಡೆದಿದೆ ಎನ್ನಲಾಗಿದೆ.ಮನನೊಂದು ಪವಿತ್ರಾ ಮನೆಯಲ್ಲಿ ಆತ್ಮಹತ್ಯೆ ಗೆ ಶರಣಾಗಿದ್ದಾಳೆ.ಸುದ್ದಿ ತಿಳಿದು ಯುವಕ ಕಾರ್ತಿಕ್ ಭಯಗೊಂಡು ಆತನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಆದ್ರೆ ಮೃತ ಪ್ರೇಮಿಗಳ ಸಂಬಂಧಿಕರು ಇನ್ನು ದೂರು ನೀಡಿಲ್ಲ.ಮೃತ ಪ್ರೇಮಿಗಳ ಸಂಬಂಧಿಕರ ದೂರಿನನ್ವಯ ಪ್ರಕರಣದ ತನಿಖೆ ನಡೆಸುತ್ತೆವೆ ಎಂದು ಬಾಗಲಕೋಟೆ ಎಸ್ ಪಿ ಸಿದ್ದಾರ್ಥ್ ಗೊಯಲ್ ಹೇಳಿದ್ರು…

ಒಟ್ಟಿನಲ್ಲಿ ಬಾಳಿ ಬದುಕಬೇಕಿದ್ದ ಪ್ರೇಮಿಗಳು ದುಡಿಕಿನ ನಿರ್ಧಾರಕ್ಕೆ ತುತ್ತಾಗಿ ಆತ್ಮಹತ್ಯೆಗೆ ಶರಣಾಗಿ ಇಹ ಲೋಕ ತ್ಯೇಜಿಸಿದ್ದು,ಆಸಂಗಿ ಗ್ರಾಮವೇ ಬೆಚ್ಚಿ ಬೀಳುವಂತೆ ಮಾಡಿದ್ದಂತೂ ಸುಳ್ಳಲ್ಲ….

Tags:

error: Content is protected !!