ಬಿಜೆಪಿಯವರು ಸಂವಿಧಾನದ ವಿರೋಧಿಗಳು, ಜನರ ವಿರೋಧಿಗಳು. ಅವರು ಯಾವ ಆಧಾರದ ಮೇಲೆ ಮತ ಕೇಳ್ತಾರೆ, ಒಂಬತ್ತು ವರ್ಷ ಸರ್ಕಾರ ನಡೆಸಿದ್ದಾರೆ. ಕರ್ನಾಟಕದಲ್ಲಿ ಏನು ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ದಾವಣಗೆರೆ ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮದು ಬಡವರ ಪರ ಪಕ್ಷ. ಬಿಜೆಪಿಯು ಧರ್ಮ, ಜಾತಿ ಹೆಸರಲ್ಲಿ ಸಮಾಜ ಒಡೆಯುವ ಪಕ್ಷ. ನಾಳೆ ಪ್ರಚಾರಕ್ಕೆ ಕೊನೆ ದಿನ. ಮನೆಮನೆಗೆ ಬಂದು ಮತ ಕೇಳಬಹುದು. ಇಲ್ಲಿ ಅಭ್ಯರ್ಥಿಗಳು ಮಾತ್ರ ಮತ ಕೇಳಬಹುದಾಗಿದೆ. ಅಭ್ಯರ್ಥಿಗಳಲ್ಲದಿರುವವರು ಕ್ಷೇತ್ರದಲ್ಲಿ ಇರುವಂತಿಲ್ಲ. ನಾವು ನೂರಕ್ಕೆ ನೂರು ಗೆಲ್ತಿವಿ. ಗ್ಯಾರಂಟಿ ಯೋಜನೆಗಳನ್ನು ಜನ ನಂಬಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಪಕ್ಷವನ್ನು ಯಾಕೆ ಸೋಲಿಸಿದ್ರು, ಚನ್ನಪಟ್ಟಣದಲ್ಲಿ ಸೋತಿದ್ದು ಯಾರು, ಕುಮಾರಸ್ವಾಮಿ ಗೆದ್ದಿದ್ದು, ಮಗ ಸೋತರಲ್ಲ. ನಮ್ಮ ಅಭ್ಯರ್ಥಿ 22 ಸಾವಿರ ಮತಗಳ ಅಂತರದಿಂದ ಗೆದ್ದರು ಎಂದ ಅವರು, ಕುಟುಂಬ ರಾಜಕಾರಣ ವಿಚಾರವಾಗಿ ಮಾತನಾಡಿ. ಅಪ್ಪ, ಮಕ್ಳು, ಮೊಮ್ಮಕ್ಕಳು, ಇಬ್ಬರು ಸೊಸೆಯಂದಿರು ಅವರ ಪಕ್ಷದಲ್ಲೇ ಇದ್ದಾರೆ. ಇದು ಕುಟುಂಬ ರಾಜಕಾರಣ ಅಲ್ವಾ?. ಜನ ಬಯಸಿದ್ರೆ ರಾಜಕಾರಣ ಮಾಡಲಿ. ತಿರಸ್ಕರಿಸಿದರೂ ರಾಜಕಾರಣ ಸರಿಯಲ್ಲ ಎಂದರು.
ದಾವಣಗೆರೆಗೆ ಪ್ರಚಾರಕ್ಕೆ ಬರಲು ವಸತಿ ಸಚಿವ ಜಮೀರ್ ಅಹ್ಮದ್ಗೆ ಸಮಯವಿಲ್ಲ. ಬಾಗಲಕೋಟೆಗೆ ಹೋಗಿದ್ದಾರೆ. ಬಾಗಲಕೋಟೆಯಲ್ಲಿ 42,000 ಮುಸ್ಲಿಂ ಮತಗಳಿವೆ. ಕೇರಳದಲ್ಲಿದ್ದ ಜಮೀರ್, ಇದೀಗ ಬಾಗಲಕೋಟೆ ಪ್ರಚಾರದಲ್ಲಿದ್ದಾರೆ ಎಂದು ಹೇಳಿದರು. ಅನ್ನರಾಮಯ್ಯ ಅಲ್ಲ ಕನ್ನರಾಮಯ್ಯ ಎಂಬ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ, ಬಿಜೆಪಿಗೆ ಅಪ್ಪಮಗ ಏನೆಲ್ಲ ಬಯ್ದಿದ್ದಾರೆಂದು ಹೇಳಬೇಕಾ?. ಇವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಸೇರಿದ್ದಾರೆ. ಜಾತ್ಯತೀತ ನಾಯಕನಾದ ನಾನು ಜಾತ್ಯತೀತ ಪಕ್ಷ ಸೇರಿದ್ದೇನೆ. ಜೆಡಿಎಸ್ನಲ್ಲಿ ನಾನು ರಾಜ್ಯಾಧ್ಯಕ್ಷನಾಗಿದ್ದಾಗ 59 ಸೀಟು ಗೆದ್ದಿದ್ದೆ. ಅಲ್ಲಿಂದ ಈವರೆಗೆ ಜೆಡಿಎಸ್ ಅಷ್ಟು ಸೀಟು ಗೆದ್ದಿದೆಯಾ?. ಪ್ರತಿವರ್ಷ ಜೆಡಿಎಸ್ ಸ್ಥಾನಗಳು ಕುಸಿಯುತ್ತಿವೆ ಎಂದು ತಿರುಗೇಟು ನೀಡಿದರು. ಬೈಟ್
ಕರ್ನಾಟಕ ಕೈಗಾರಿಕಾ ವಲಯ ಕುಸಿಯುತ್ತಿದೆ ಎಂದ ಹೆಚ್ಡಿಕೆ ಆರೋಪ ವಿಚಾರವಾಗಿ ಮಾತನಾಡಿ, ಕೊಟ್ಟ ಕುದುರೆ ಏರದವ, ಧೀರನೂ ಅಲ್ಲ, ಶೂರನೂ ಅಲ್ಲ ಎಂದು ತಿರುಗೇಟು ಕೊಟ್ಟರು.
