• ಬೆಳಗಾವಿಯಲ್ಲಿ ಅದ್ಧೂರಿ ಬಸವ ಜಯಂತಿ ಆಚರಣೆ
• ಏಪ್ರಿಲ್ 26ಕ್ಕೆ ಜಿಲ್ಲಾಮಟ್ಟದ ಬೃಹತ್ ಕಾರ್ಯಕ್ರಮ
• 50 ಸಾವಿರಕ್ಕೂ ಹೆಚ್ಚು ಭಕ್ತರ ನಿರೀಕ್ಷೆ
• ಸಾಂಪ್ರದಾಯಿಕ ಶೈಲಿಯ ಮೆರವಣಿಗೆಗೆ ಸಜ್ಜಾದ ಕುಂದಾನಗರಿ

ಈ ಬಾರಿ ವೀರಶೈವ ಲಿಂಗಾಯಿತ ಸಮಾಜದ ವತಿಯಿಂದ ಅದ್ಧೂರಿಯಾಗಿ ಏಪ್ರೀಲ್ 26 ರಂದು ಜಿಲ್ಲಾಮಟ್ಟದ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಿಸಲಾಗುವುದೆಂದು ಶಾಸಕ ಲಕ್ಷ್ಮಣ ಸವದಿ ಅವರು ಹೇಳಿದರು.
ಇಂದು ಬೆಳಗಾವಿಯ ಸರ್ಕೀಟ್ ಹೌಸಿನಲ್ಲಿ ಬೆಳಗಾವಿ ಎಲ್ಲ ವೀರಶೈವ ಲಿಂಗಾಯಿತ ಸಮಾಜದ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಅದ್ಧೂರಿ ಬಸವೇಶ್ವರ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು.
ಈ ವೇಳೆ ಮಾತನಾಡಿದ ಶಾಸಕ ಲಕ್ಷ್ಮಣ್ ಸವದಿ ಅವರು ಜಗಜ್ಯೋತಿ ಬಸವೇಶ್ವರರ ಸಮಾನತೆಯ ಸಂದೇಶವನ್ನು ಉಲ್ಲೇಖಿಸಿ ತುಳಿತಕ್ಕೊಳಗಾದ ಸಮಾಜವನ್ನು ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಅನುಭವ ಮಂಟಪದಲ್ಲಿ ಕ್ರಾಂತಿಯಾಯಿತು. ಬಸವಣ್ಣನವರ 893ನೇ ಜಯಂತ್ಯೋತ್ಸವವನ್ನು ಈ ಬಾರಿ ಆಚರಣೆ ಮಾಡಲಾಗುತ್ತಿದೆ. ಅದರಂತೆಯೂ ಈ ಬಾರಿಯೂ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಜಿಲ್ಲಾಮಟ್ಟದಲ್ಲಿ ಆಚರಿಸುವ ಉದ್ಧೇಶವನ್ನು ಹೊಂದಲಾಗಿದೆ. ಏಪ್ರೀಲ್ 20 ರಂದು ಬಸವ ಜಯಂತಿ ಆಚರಣೆ ನಡೆಯಲಿದ್ದು, ಏಪ್ರೀಲ್ 19 ರಂದು ಜಾಗೃತಿ ರ್ಯಾಲಿ ನಡೆಯಲಾಗುವುದು. ಏಪ್ರೀಲ್ 26 ರಂದು ಜಿಲ್ಲಾಮಟ್ಟದ ಶ್ರೀ ಬಸವೇಶ್ವರ ಜಯಂತಿಯ ಕಾರ್ಯಕ್ರಮ ಆಯೋಜಿಸುವ ತಿರ್ಮಾಣವನ್ನು ಸಭೆಯಲ್ಲಿ ಕೈಗೊಳ್ಳಲಾಗಿದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ವೀರಶೈವ ಲಿಂಗಾಯಿತ ಸಮಾಜ ಬಾಂಧವರು ಭಾಗಿಯಾಗುವ ನಿರೀಕ್ಷೆಯಿದ್ದು ಬಸವಣ್ಣನವರ ವಿಚಾರಧಾರೆಗಳನ್ನು ಅನುಸರಿಸುವ ಎಲ್ಲರೂ ಆಗಮಿಸಬೇಕೆಂದು ಕರೆ ನೀಡಿದರು.
ಇನ್ನು ಮಾಜಿ ರಾಜ್ಯಸಭಾ ಸದಸ್ಯ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ಬಸವಣ್ಣನವರ ಜಯಂತಿಯ ನಿಮಿತ್ಯ ಬೃಹತ್ ಮೆರವಣಿಗೆಯ ಮೂಲಕ ಬಸವಣ್ಣನವರ ಸಂದೇಶಗಳನ್ನು ಸಾರಲಾಗುವುದು. ಪಾಶ್ಚಿಮಾತ್ಯ ಸಂಸ್ಕೃತಿಗಳನ್ನು ಅನುಸರಿಸದೇ, ಕೇವಲ ಸಾಂಪ್ರದಾಯಿಕ ಪದ್ಧತಿಯಿಂದ ಏಪ್ರೀಲ್ 26 ರಂದು ಸಂಜೆ 4 ಗಂಟೆಗೆ ಈ ಮೆರವಣಿಗೆ ನಡೆಯಲಿದೆ. ಬಹುಜನರು ಇದರಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. ಬೈಟ್
ಈ ಸಂದರ್ಭದಲ್ಲಿ ಸಂಸದ ಜಗದೀಶ್ ಶೆಟ್ಟರ್, ಚಿಕ್ಕೋಡಿ-ಸದಲಗಾ ಶಾಸಕ ಗಣೇಶ್ ಹುಕ್ಕೇರಿ, ಎಂ.ಎಲ್.ಸಿ ಚನ್ನರಾಜ್ ಹಟ್ಟಿಹೊಳಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
