• ಬೆಳಗಾವಿಯಲ್ಲಿ ಮಹಾತ್ಮ ಫುಲೆ ಜಯಂತಿ ಸಂಭ್ರಮ
• ಉಪಾಯುಕ್ತ ಉದಯಕುಮಾರ್ ತಳವಾರ್ ಅವರಿಂದ ಗೌರವ
• ಸಮಾನತೆ ಸಾರಿದ ಸತ್ಯಶೋಧಕ ಸಮಾಜದ ಚಿಂತನೆ
• ಸ್ತ್ರೀ ಶಿಕ್ಷಣದ ಮಹತ್ವ ಸಾರಿದ ಗಣ್ಯರು

ಬೆಳಗಾವಿಯ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಉದ್ಯಾನವನದಲ್ಲಿ ಇಂದು ಮಹಾತ್ಮ ಜ್ಯೋತಿರಾವ್ ಫುಲೆ ಅವರ 200ನೇ ಜಯಂತಿಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಸಾಮಾಜಿಕ ಸಮಾನತೆ ಮತ್ತು ಸ್ತ್ರೀ ಶಿಕ್ಷಣದ ಹರಿಕಾರನಿಗೆ ನಗರದ ಗಣ್ಯರು ಪುಷ್ಪ ನಮನ ಸಲ್ಲಿಸಿ, ಅವರ ವಿಚಾರಧಾರೆಗಳನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಉಪಾಯುಕ್ತರಾದ ಉದಯಕುಮಾರ್ ತಳವಾರ್ ಅವರು ಮಹಾತ್ಮ ಫುಲೆ ಅವರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಂದು ಸಾವಿತ್ರಿಬಾಯಿ ಫುಲೆ ಮತ್ತು ಮಹಾತ್ಮ ಫುಲೆ ಅವರು ಹಾಕಿಕೊಟ್ಟ ಶಿಕ್ಷಣದ ಬುನಾದಿಯಿಂದಾಗಿ ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಅವರ ತ್ಯಾಗ ಮತ್ತು ದೂರದೃಷ್ಟಿ ಇಂದಿನ ಸಮಾಜಕ್ಕೆ ದಾರಿದೀಪ ಎಂದು ಬಣ್ಣಿಸಿದರು.
ದಲಿತ ಮುಖಂಡ ಮಲ್ಲೇಶ್ ಚೌಗುಲೆ ಮಾತನಾಡಿ, ಸತ್ಯಶೋಧಕ ಸಮಾಜದ ಮೂಲಕ ಫುಲೆ ಅವರು ಮೂಢನಂಬಿಕೆಗಳ ವಿರುದ್ಧ ಹೋರಾಡಿ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದರು ಎಂದರು. ಈ ವೇಳೆ ಮಹಾನಗರ ಪಾಲಿಕೆ ಉಪಾಯುಕ್ತ ಉದಯಕುಮಾರ್ ತಳವಾರ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಬೈಟ್
ಕಾರ್ಯಕ್ರಮದಲ್ಲಿ ರಾಜು ಕಲ್ಲೇಕಣ್ಣವರ, ಸಂತೋಷ್ ಕಾಂಬಳೆ, ಮನೋಜ್ ಹಿತಲಮಣಿ, ಆನಂದ್ ಕೋಲ್ಕಾರ್, ಯಲ್ಲಪ್ಪ ಗಾಡಿನಾಯಕ್, ದೀಪಕ್ ಮೈತ್ರಿ, ಸುಧೀರ್ ಚೌಗುಲೆ, ಜೀವನ್ ಕುರಣೆ, ಗಜಾನನ ಕಾಂಬಳೆ, ರಾಮ ಚೌಹಾಣ್, ಸುಬ್ರಮಣ್ಯಂ ಕಾಂಬಳೆ, ಸಂದೀಪ್ ಕೋಳ್ಕರ್, ಅಮರೇಶ್ ಜಿ.ಸಿ. (ಆಂಬಿ), ಮತ್ತು ಸಾಗರ್ ಚೌಗುಲೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಫುಲೆ ದಂಪತಿಗಳ ಹೋರಾಟವನ್ನು ಸ್ಮರಿಸಿದರು.
