BELAGAVI

ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳಗಾವಿಯ ಸ್ಟೀಮ್ ಎಚ್ ವಿದ್ಯಾರ್ಥಿಗಳು ಆಯ್ಕೆ

Share

ಇಲ್ಲಿನ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿನ ಸ್ಟೀಮ್ ಹೆಚ್ ತರಬೇತಿ ಮತ್ತು ಸಂಶೋಧನಾ ಪ್ರತಿಷ್ಠಾನದ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿರುವ ಸುಶಾಂತ ಲಕ್ಕಪ್ಪ ಬಂಡಿವಡ್ದರ ಹಾಗೂ ವಿಠ್ಠಲ ಮಲ್ಲಿಕಾರ್ಜುನ ಗದಗ ಎಂಬ ಇಬ್ಬರು ವಿದ್ಯಾರ್ಥಿಗಳು ಮಾರ್ಚ 11 ಮತ್ತು 12 ರಂದು ಬೆಂಗಳೂರಿನ ಗೀತಂ ವಿಶ್ವವಿದ್ಯಾಲಯದಲ್ಲಿ ಜರುಗಿದ ರಾಷ್ಟ್ರಮಟ್ಟದ ಕೊಡವಿಯರ್ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಸ್ಥಾನ ಗಳಿಸಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯು ಮೇ 16 ಮತ್ತು 17ರಂದು ಇಂಡೋನೇಷ್ಯಾದ ಜಕಾರ್ಥ ನಲ್ಲಿ ಜರುಗಲಿದೆ. ಪರಿಣಿತರಂತೆ ಫುಟ್ಬಾಲ್ ಆಟವಾಡುವ ರೋಬೋಟ್ ಸಾಕರ್ ತಯಾರಿಸಿರುವ ವಿದ್ಯಾರ್ಥಿಗಳ ಈ ವಿಶೇಷ ಸಾಧನೆಗೆ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಇವರಿಗೆ ಪ್ರಾಚಾರ್ಯ ವಿ.ಎಸ್. ಹೊಸಮನಿ, ಸಂಯೋಜಕಿ ಹೇಮಲತಾ ಹಿರೇಮಠ, ಉಪನ್ಯಾಸಕ ದಯಾನಂದ ಮಗದುಮ ಮಾರ್ಗದರ್ಶನ ಮಾಡಿದ್ದರು.

Tags:

error: Content is protected !!