ಏಪ್ರೀಲ್ 14 ರಂದು ನಡೆಯಲಿರುವ ವಿಶ್ವರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರರ 135ನೇ ಜಯಂತ್ಯೋತ್ಸವದ ಹಿನ್ನೆಲೆ ಭೀಮಜ್ಯೋತಿಯನ್ನು ತರಲೂ ಬೆಳಗಾವಿಯ ದಲಿತ ಮುಖಂಡರು ಇಂದು ದೀಕ್ಷಾ ಭೂಮಿಗೆ ಪ್ರಯಾಣ ಬೆಳೆಸಿದರು.


ಏಪ್ರೀಲ್ 14 ರಂದು ನಡೆಯಲಿರುವ ವಿಶ್ವರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರರ 135ನೇ ಜಯಂತ್ಯೋತ್ಸವದ ಹಿನ್ನೆಲೆ ಭೀಮಜ್ಯೋತಿಯನ್ನು ತರಲೂ ದೀಕ್ಷಾ ಭೂಮಿಗೆ ಪ್ರಯಾಣ ಬೆಳೆಸಿದ ದಲಿತ ಮುಖಂಡರನ್ನು ಮತ್ತು ಈ ಬಾರಿಯ ಬೆಳಗಾವಿ ಡಾ. ಅಂಬೇಡ್ಕರ್ ಜಯಂತಿಯ ನೋಡಲ್ ಅಧಿಕಾರಿಯಾಗಿ ನೇಮಕಗೊಂಡ ಬೆಳಗಾವಿ ಮಹಾನಗರ ಪಾಲಿಕೆಯ ಉಪಾಯುಕ್ತರಾದ ಉದಯ್’ಕುಮಾರ್ ತಳವಾರ್ ಅವರನ್ನು ಸತ್ಕರಿಸಲಾಯಿತು.
ಈ ವೇಳೆ ಮಾತನಾಡಿದ ಮಹಾನಗರ ಪಾಲಿಕೆ ಉಪಾಯುಕ್ತರಾದ ಉದಯಕುಮಾರ್ ತಳವಾರ್ ಅವರು ಏಪ್ರೀಲ್ 14 ರಂದು ನಡೆಯಲಿರುವ ವಿಶ್ವರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರರ 135ನೇ ಜಯಂತಿಯ ನಿಮಿತ್ಯ ಬೆಳಗಾವಿಯ ದಲಿತ ಮುಖಂಡರು ನಾಗಪೂರಕ್ಕೆ ತೆರಳಿ ದೀಕ್ಷಾಭೂಮಿಯಿಂದ ಭೀಮಜ್ಯೋತಿಯನ್ನು ತೆಗೆದುಕೊಂಡು ಬರಲಿದ್ದಾರೆ. ನಂತರ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಚಾಲನೆ ಪಡೆಯಲಿದೆ. ಇದಕ್ಕಾಗಿ ಮಹಾನಗರ ಪಾಲಿಕೆ ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದರು.
ಡಾ. ಅಂಬೇಡ್ಕರ್ ಜಯಂತ್ಯೋತ್ಸವ ಮಹಾಮಂಡಳದ ಅಧ್ಯಕ್ಷ ಮಲ್ಲೇಶ್ ಚೌಗಲೆ ಮತ್ತು ಮಲ್ಲೇ ಕುರಂಗಿ ಅವರು ನಾಳೆಯಿಂದಲೇ ಬೆಳಗಾವಿಯಲ್ಲಿ ಡಾ. ಅಂಬೇಡ್ಕರ್ ಜಯಂತಿಗೆ ಚಾಲನೆ ದೊರೆಯಲಿದ್ದು, ನಾಳೆ ಮಹಾತ್ಮಾ ಜ್ಯೋತಿರಾವ್ ಫೂಲೆ ಅವರ 150ನೇ ಜಯಂತಿ ಆಚರಿಸಲಾಗುವುದು. ಅದೇ ರೀತಿ ಮಹಾಡ್ ಸತ್ಯಾಗ್ರಹ ಮತ್ತು ಸಮತಾ ಸೈನಿಕ ದಳದ ಶತಾಬ್ಧಿ ಮಹೋತ್ಸವವನ್ನು ಆಚರಿಸಲಾಗುವುದು. ಇಂದು ದಲಿತ ಮುಖಂಡರು ನಾಗಪೂರಕ್ಕೆ ತೆರಳಿ ಏಪ್ರೀಲ್ 13 ರಂದು ಸಂಜೆ ಭೀಮಜ್ಯೋತಿಯನ್ನು ತರಲಿದ್ದು, ಏಪ್ರೀಲ್ 14 ರಂದು ಬೆಳಿಗ್ಗೆ ಸಾಮ್ರಾಟ್ ಅಶೋಕ ವೃತ್ತದಿಂದ ಬರಮಾಡಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಲ್ಲೇಶ್ ಕುರಂಗಿ, ಬಾಬು ಪೂಜೇರಿ, ಮಹೇಶ್ ಕಾಂಬಳೆ, ವಿನಯ ಕೋಲಕಾರ, ನಾಗೇಶ್ ಕೋಲಕಾರ ಸೇರಿದಂತೆ ಇನ್ನುಳಿದ ಮುಖಂಡರು ಭಾಗಿಯಾಗಿದ್ಧರು.
