ಕೇವಲ ಮನೆಗೆ ಮಾತ್ರ ಸೀಮತವಾಗಿದ್ದ ಮಹಿಳೆಯರಿಗೆ ಸ್ವತಂತ್ರ ಕೊಟ್ಟಿದ್ದು ಬಸವಣ್ಣನವರು ಎಂದು ಚಿಕ್ಕೋಡಿಯ ಚರಮೂರ್ತಿಮಠದ ಸಂಪಾದನಾ ಸ್ವಾಮೀಜಿಯವರು ಹೇಳಿದರು.


ಅವರು ಚಿಕ್ಕೋಡಿ ಪಟ್ಟಣದ ಚರಮೂರ್ತಿ ಮಠದಲ್ಲಿ ಲಿಂಗಾಯತ ಸಮುದಾಯದ ಸಮಾವೇಶದಲ್ಲಿ ದಿವ್ಯಸಾನಿಧ್ಯವನ್ನು ವಹಿಸಿ ಮಾತನಾಡಿದರು.ಮಕ್ಕಳಿಗೆ ತಾಯಂದಿರು ಒಳ್ಳೆಯ ಸಂಸ್ಕಾರ ಜೊತೆಗೆ ವಚನಗಳನ್ನು ಕಲಿಸಬೇಕು.ದಾನ, ಧರ್ಮದಂತಹ ಕಾರ್ಯಗಳನ್ನು ಮೈಗೂಡಿಸಿಕೊಳ್ಳಬೇಕು.ನಾನು ನನ್ನಿಂದ ಎಂಬ ಭಾವ ಇರಬಾರದು.ನಾವೆಲ್ಲರೂ ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣಾ ಎಂದರು.
ಬಳಿಕ ನಿವೃತ ಶಿಕ್ಷಕರಾದ ಚಂದ್ರಶೇಖರ ಅರಭಾವಿಯವರು ಮಾತನಾಡಿ ನಮ್ಮ ಸಮಾಜದ ಜನರು ಮಕ್ಕಳು ಟಿವಿ-ಮೊಬೈಲ್ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ಅಧ್ಯಾತ್ಮಿಕ,ಸತ್ಸಂಗ,ಚಿಂತನೆ,ಪ್ರವಚನದಲ್ಲಿ ತೋಡಗಿಸಿಕೊಳ್ಳಿ ಎನ್ನುವ ಜಾಗೃತಿ ಮೂಲಕ ಮಕ್ಕಳನ್ನು, ಜನರನ್ನು ಬೆಳೆಸೋಣಾ.ನಾವು ಹೇಗೆ ಇರಬೇಕು ಎಂಬುದನ್ನು ನಮ್ಮನೂ ನೋಡಿ ಸಮಾಜ ಕಲಿಯಬೇಕು ಎಂದರು.
ಈ ಸಂದರ್ಭದಲ್ಲಿ ಪ್ರೋಪೆಸರ ಎಸ್.ವೈ.ಹಂಜಿ,ಪ್ರಕಾಶ ಪಾಯನ್ನವರ, ಎನ್ ಜಿ ಪಾಟೀಲ, ಸುನೀಲ ಖಡ್ಡ, ಸುಭಾಷ ಸಂಕಪಾಳ ಮಾರುತಿ ಮುಂಜಾವ, ಲಕ್ಮೀಕಾಂತ ಘೋಸರವಾಡಿ, ಅಜಿತ ಹುನಶ್ಯಾಳೆ, ಶಿವಯೋಗಿ ಚನ್ನಗೌಡರ, ಎಸ್ ಎಸ್ ಮಠಪತಿ ಶಿವಲಿಲಾ ಹಿಪ್ಪರಗಿ, ಚೆನ್ನಮ್ಮಾ ಕೊಳಚೆ, ನಾಗರಾಜ ಬಳೋಬಾಳ,ಎ ಆರ್ ಇಸಾರಗೊಂಡಾ,ಎಸ್ ಆರ್ ಮರಡಿ,ಮಂಗಲ ಅಂಬಾಯಿ,ಜಯಶ್ರೀ ಮಸರಗುಪ್ಪಿ ಶೈಲಾ ಪಟ್ಟಣಶೆಟ್ಟಿ ಸೇರಿದಂತೆ ಬಸವ ಬಳಗ ಭಕ್ತರು ಉಪಸ್ಥಿತರಿದ್ದರು.
