hubbali

ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ – ಮತ್ತೋರ್ವ ಯುವಕನ ವಿರುದ್ಧ ಪ್ರಕರಣ ದಾಖಲು..!!

Share

ನಗರದಲ್ಲಿನ ಜಿಮ್‌ಗಳನ್ನು ಕೇಂದ್ರವಾಗಿಸಿಕೊಂಡು ಲವ್ ಜಿಹಾದ್ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆ, ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಮುಫೀಸ್ ಎಂಬ ಆರೋಪಿ 5 ವರ್ಷದ ಹಿಂದೆ ಕಾಲೇಜಿನ ಇವೆಂಟ್ ಒಂದರಲ್ಲಿ ಪರಿಚಯ ಆಗಿದ್ದು ಇರುತ್ತದೆ. ಆವಾಗಿನಿಂದ ಪೋನಿನಲ್ಲಿ ಮಾತಾಡುವುದು, ಚಾಟ್ ಮಾಡುವುದು ಮಾಡುತ್ತಾ ಬಂದಿದ್ದು ಇರುತ್ತದೆ. ನಂತರ ಸಲುಗೆಯನ್ನು ಬಳಸಿಕೊಂಡು ಆರೋಪಿತನು ಯುವತಿ ಓರ್ವಳನ್ನು ಕರೆದುಕೊಂಡು ಅಡ್ಡಾಡುತ್ತಾ ಬಂದಿದ್ದು, ಒಂದು ಸಲ ಮುಫೀಸ್ ತನ್ನ ಬೈಕ್ ಮೇಲೆ ಕರೆದುಕೊಂಡು ಗದಗರೋಡ್ ಬ್ರಿಡ್ಜ್ ಹತ್ತಿರ ಕರೆದುಕೊಂಡು ಹೋಗಿ ಅವಳು ಬೇಡ ಎಂದರೂ ಲೈಂಗಿಕ ದೌರ್ಜನ್ಯ ಮಾಡುವ ಉದ್ದೇಶದಿಂದ ಅವಳ ಮೈಕೈ ಮುಟ್ಟಾಡಿ ಕಿಸ್ ಕೊಟ್ಟು ಪೋಟೊ ಮತ್ತು ವಿಡಿಯೋ ಮಾಡಿಕೊಂಡು ತೊಂದರೆ ಕೊಟ್ಟಿದ್ದು . ಅಲ್ಲದೇ ನವೆಂಬರ್-2025 ರ ಬೆಡ್‌ರೂಮಿನಲ್ಲಿ ಅವಳ ಮೇಲೆ ಒತ್ತಾಯದಿಂದ ಲೈಂಗಿಕ ಸಂಭೋಗ ಮಾಡಿದ್ದು, ಅಲ್ಲದೇ ಈ ವಿಷಯವನ್ನು ನೀನು ಬೇರೆ ಯಾರಿಗಾದರೂ ಹೇಳಿದರೆ, ನಿನ್ನ ತಂದೆ ತಾಯಿಗೆ ಉಳಿಸುವುದಿಲ್ಲ ಎಂದು ಜೀವದ ಬೆದರಿಕೆ ಹಾಕಿದ್ದಾನೆಂದು ಕೇಶ್ವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!