BELAGAVI

ಬೆಳಗಾವಿ: ರಾಮತೀರ್ಥನಗರದ ಕಾರ್ಯಸಿದ್ದಿ ಆಂಜನೇಯ ದೇವಸ್ಥಾನದ 7ನೇ ವಾರ್ಷಿಕೋತ್ಸವ – ಯೋಗ ಜೀವನದ ಹಾದಿ ಎಂದ ವಚನಾನಂದ ಶ್ರೀ

Share

ಬೆಳಗಾವಿಯ ರಾಮತೀರ್ಥನಗರದಲ್ಲಿ ಶ್ರೀ ಕಾರ್ಯಸಿದ್ದಿ ಆಂಜನೇಯ ದೇವಸ್ಥಾನದ 7ನೇ ವಾರ್ಷಿಕೋತ್ಸವ ಹಾಗೂ ಹನುಮ ಜಯಂತಿಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಹರಿಹರದ ಜಗದ್ಗುರು ವಚನಾನಂದ ಶ್ರೀಗಳು ಕಾರ್ಯಕ್ರಮವನ್ನು ಉದ್ಘಾಟಿಸಿ, ಯೋಗವು ಕೇವಲ ವ್ಯಾಯಾಮವಲ್ಲ, ಅದು ಶಾರೀರಿಕ ಮತ್ತು ಬೌದ್ಧಿಕ ವಿಕಸನದ ರಹದಾರಿ ಎಂದು ಬಣ್ಣಿಸಿದರು.

ಬೆಳಗಾವಿಯ ರಾಮತೀರ್ಥನಗರದ ಶ್ರೀ ಕಾರ್ಯಸಿದ್ದಿ ಆಂಜನೇಯ ದೇವಸ್ಥಾನದಲ್ಲಿ ಗುರುವಾರ ಸಂಜೆ 7ನೇ ವಾರ್ಷಿಕೋತ್ಸವ ಹಾಗೂ ಹನುಮ ಜಯಂತಿ ಪ್ರಯುಕ್ತ ವಿಶೇಷ ಧಾರ್ಮಿಕ ಸಮಾರಂಭ ಜರುಗಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ವಿಶ್ವ ಯೋಗ ಗುರು ವಚನಾನಂದ ಶ್ರೀಗಳು ಮಾತನಾಡಿ, ಯೋಗವು ಒತ್ತಡ ಮುಕ್ತ ಜೀವನಕ್ಕೆ ಮತ್ತು ಮಧುಮೇಹ, ಥೈರಾಯ್ಡ್‌ನಂತಹ ಕಾಯಿಲೆಗಳ ನಿಯಂತ್ರಣಕ್ಕೆ ಸಹಕಾರಿ. ಇದು ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸನ್ನು ರೂಪಿಸುವ ಜೀವನ ವಿಧಾನವಾಗಿದೆ ಎಂದು ತಿಳಿಸಿದರು. ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ದೇವಸ್ಥಾನಗಳು ಸಂಸ್ಕೃತಿಯ ಕೇಂದ್ರಗಳಾಗಿದ್ದು, ಪ್ರಾರ್ಥನೆಯಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ ಎಂದರು.

ವಿಶೇಷ ಆಹ್ವಾನಿತರಾಗಿದ್ದ ಆರ್.ಎಸ್.ಎಸ್. ಉತ್ತರ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಮಾತನಾಡಿ, ಹನುಮಂತನು ಶಕ್ತಿ ಮತ್ತು ಭಕ್ತಿಯ ಸಂಕೇತವಾಗಿದ್ದು ಜಗತ್ತಿನ ಒಳಿತಿಗಾಗಿ ತನ್ನ ಶಕ್ತಿಯನ್ನು ಬಳಸಿದ ಆದರ್ಶಮೂರ್ತಿ ಎಂದರು. ಇದೇ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಸುರೇಶ್ ಉರಬಿನಟ್ಟಿ ಅವರು ಅಭಿವೃದ್ಧಿ ಪೂರಕ ಮನವಿಯನ್ನು ಮಹಾಪೌರರಿಗೆ ಸಲ್ಲಿಸಿದರು. ಕಾರ್ಯಕ್ರಮದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಮಹಾರುದ್ರಾಭಿಷೇಕ ಹಾಗೂ ಮಹಿಳೆಯರಿಂದ ಕುಂಭ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಸಾವಿರಾರು ಭಕ್ತರು ಈ ಸಂಭ್ರಮಕ್ಕೆ ಸಾಕ್ಷಿಯಾಗಿ ಮಹಾಪ್ರಸಾದ ಸ್ವೀಕರಿಸಿದರು.

ವೇದಿಕೆಯಲ್ಲಿ ಮಹಾಪೌರ ಪ್ರೀತಿ ಕಾಮಕರ, ಉಪ ಮಹಾಪೌರ ಹನುಮಂತ ಕೊಂಗಾಲಿ, ನಿವೃತ್ತ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಮಾಜಿ ಶಾಸಕ ಅನಿಲ ಬೆನಕೆ, ಶಂಕರಗೌಡ ಪಾಟೀಲ, ಮದನಕುಮಾರ ಭೈರಪ್ಪನವರ, ಬಸಪ್ಪಾ ಉರಬಿನಹಟ್ಟಿ, ಮುರಘೇಂದ್ರಗೌಡ ಪಾಟೀಲ, ಎನ್.ಬಿ. ನಿರ್ವಾಣಿ, ಡಾ. ಬಸವರಾಜ ವೀರಾಪೂರ, ಡಾ. ರವಿ ಪಾಟೀಲ ಮತ್ತು ಎಂ.ವಿ. ಹಿರೇಮಠ ಉಪಸ್ಥಿತರಿದ್ದರು.

ಕಾರ್ಯಕ್ರಮದ ಯಶಸ್ಸಿಗೆ ಮಂಜುನಾಥ ಪಾಟೀಲ, ಶಿವಾನಂದ ಮಠಪತಿ, ಮನೋಹರ ಕಾಜಗಾರ, ಮಹೇಶ ಚಿಟಗಿ, ಮಹಾದೇವ ಟೊಣ್ಣೆ, ಪ್ರಶಾಂತ್ ಕೋಟಗಿ, ವಿಲಾಸ ಕೆರೂರ, ಸಂತೋಷ ಸನದಿ, ಎಸ್.ಎಲ್. ಸನದಿ, ಜೆ.ಜಿ. ಹುನ್ನೂರ, ಪರಗೌಡ ಪಾಟೀಲ, ಎಸ್. ಖನಗನ್ನಿ, ಬಸವರಾಜ ಗೌಡಪ್ಪಗೋಳ, ಬಸವರಾಜ ಹಿರೇಮಠ, ಗುರುಸಂಗಪ್ಪಾ ಚೆಳಗೇರಿ, ವಿ.ಬಿ. ಈಶ್ವರಪ್ಪಗೋಳ, ಮಹಾಂತೇಶ ಪೂಜಾರಿ, ಜಿ.ಎಸ್. ಹಿರೇಮಠ, ಬಸವರಾಜ ವಾಲಿ, ಆನಂದ ಪಾಟೀಲ, ಬಸವರಾಜ ಮರಾಠೆ, ಸಂಜೀವ ದೊನವಾಡೆ, ಪ್ರದೀಪ ನಾಗವಲ್ಲಿ, ಪ್ರಕಾಶ ದಿಕ್ಷಿತ್, ಜಿ.ವೈ. ದಳವಾಯಿ ಹಾಗೂ ಆನಂದ ಕರಲಿಂಗನ್ನವರ ಶ್ರಮಿಸಿದರು. ಪ್ರೊ. ಎ.ಕೆ. ಪಾಟೀಲ ಮತ್ತು ಚನ್ನಪ್ಪ ಉಜ್ಜಿನಕೊಪ್ಪ ನಿರೂಪಿಸಿದರು, ಬಿ.ಬಿ. ನಿರ್ವಾಣಿ ವಂದಿಸಿದರು.

Tags:

error: Content is protected !!