ಸತತ ಆರು ದಿನಗಳ ಕಾಲ ಭಕ್ತರ ಸಂಭ್ರಮದೊಂದಿಗೆ ನಡೆದ ಶ್ರೀ ಚಾಂಗದೇವ ಉರ್ಫ್ ರಾಜಾಬಾಗಸವಾರ್ ಯಮನೂರ ಅಜ್ಜನವರ ಜಾತ್ರೆಯು ಇಂದು ಅದ್ಧೂರಿಯಾಗಿ ಸಂಪನ್ನಗೊಂಡಿದೆ. ಶ್ರೀ ಗುರು ಸುಭಾಷ್ ಅಜ್ಜನವರ ಮಾರ್ಗದರ್ಶನದಲ್ಲಿ ಈ ಜಾತ್ರೆಯೂ ಸಮಾರೋಪಗೊಂಡಿತು.
ಬೆಳಗಾವಿಯ ಶ್ರೀನಗರದಲ್ಲಿ ಯಮನೂರ ಅಜ್ಜನವರ ಜಾತ್ರೆಯು ಆರು ದಿನಗಳ ಕಾಲ ಅತೀ ವಿಜೃಂಭಣೆಯಿಂದ ಜರುಗಿತು. ಸಮಾರೋಪ ಸಮಾರಂಭದಲ್ಲಿ ಶ್ರೀ ಗುರು ಸುಭಾಷ್ ಅಜ್ಜನವರು ಹಾಗೂ ಸೇವಾ ಕಮಿಟಿಯ ಪ್ರಮುಖರಾದ ಮಹಾಂತೇಶ್ ಚವಾಣ್, ಲೋಕೇಶ್ ಗೌಡ, ಗಿರೀಶ್ ಭಸ್ಮೆ, ಬಸವರಾಜ್ ಮಾಳಗಿ, ಬಸವರಾಜ್ ದೊಡ್ಡಮನಿ ಸೇರಿದಂತೆ ಅನೇಕ ಸದಸ್ಯರು ಉಪಸ್ಥಿತರಿದ್ದರು. ವಾದ್ಯ ಮೇಳಗಳ ಮೆರುಗು, ಭಕ್ತಿಪೂರ್ಣ ಭಜನೆಗಳು ಹಾಗೂ ಭಂಡಾರ ಉತ್ಸವದೊಂದಿಗೆ ಭಕ್ತರು ಅಜ್ಜನವರ ಕೃಪೆಗೆ ಪಾತ್ರರಾದರು. ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದ ಈ ಜಾತ್ರೆಯು ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವವನ್ನು ಸಾರಿತು

