ಸಮಾಜದ ಕಣ್ಣುಗಳಾದ ಶಿಕ್ಷಕಿಯರಿಗೆ ಇಂದು ಬೆಳಗಾವಿಯಲ್ಲಿ ಸಂಭ್ರಮದ ದಿನ. ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಪ್ರತಿಷ್ಠಿತ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.
ಬೆಳಗಾವಿಯ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಾತೆ ಸಾವಿತ್ರಿಬಾಯಿ ಫುಲೆ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭವು ಅತ್ಯಂತ ಸಂಭ್ರಮದಿಂದ ಜರುಗಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜನವಾಡದ ಅಲ್ಲಮಪ್ರಭು ಆಶ್ರಮದ ಪರಮ ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ವಹಿಸಿದ್ದರು. ರಾಷ್ಟ್ರೀಯ ಅಧ್ಯಕ್ಷೆ ಡಾ. ಲತಾ ಎಸ್. ಮುಳ್ಳೂರ ಅವರು ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಮರ್ಪಿಸಿದರು. ಜಿಲ್ಲಾಧ್ಯಕ್ಷೆ ನಸ್ರೀನಬಾನು ಕಾಶೀಮನವರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಪನಿರ್ದೇಶಕರಾದ ಲೀಲಾವತಿ ಹಿರೇಮಠ ಉಪನ್ಯಾಸ ನೀಡಿದರು. ವಿಶೇಷ ಆಹ್ವಾನಿತರಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆಂಜನೇಯ ಆರ್. ಕೆ. ಹಾಗೂ ರವಿ ಭಜಂತ್ರಿ, ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಪಾಲ್ಗೊಂಡಿದ್ದರು. ಅಲ್ಲದೆ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಐ. ಡಿ. ಹಿರೇಮಠ ಮತ್ತು ಡಾ. ದಾನಮ್ಮ ಝಳಕಿ, ಉಪಪ್ರಾಂಶುಪಾಲ ಡಾ. ಎಮ್. ಎಸ್. ಮೇದಾರ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಆನಂದಗೌಡ ಕಾದ್ರೋಳ್ಳಿ, ಅನ್ವರ ಲಂಗೋಟಿ, ಎಸ್. ಜಿ. ಕರಂಬಳ್ಳ, ಸುರೇಶ ಸಕ್ರೆಣ್ಣವರ, ಎಲ್. ಬಿ. ನಾಯಕ, ಬಿ. ಬಿ. ಹಟ್ಟಿಹೊಳಿ ಹಾಗೂ ಎಮ್. ವಾಯ್. ಮೆಣಸಿನಕಾಯಿ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಕಳೆ ನೀಡಿದರು.
ಸಂಘಟನೆಯ ಜಿಲ್ಲಾ ಪದಾಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ ಪುಷ್ಪಾ ಬನ್ನಿನಾಯ್ಕರ, ಕೋಶಾಧ್ಯಕ್ಷೆ ಜಯಶ್ರೀ ಡೇಕುಳಿ ಹಾಗೂ ಉಪಾಧ್ಯಕ್ಷರಾದ ಫಿಲಿನ್ ಬಾನು ಸೌದಾಗರ, ವಿಜಯಾ ಪಾಟೀಲ, ಫೆಮೀದಾ ಮನಿಯಾರ, ಸುರೇಖಾ ಬಿ. ನವಲಗುಂದೆ, ಸುಜಾತಾ ಅರಬಳ್ಳಿ, ಎಸ್ತರ ದಾನಪ್ಪನವರ, ಗೀತಾ ಮಡಿವಾಳರ, ವರದಾ ಹೆಗಡೆ, ಎಚ್. ಆರ್. ಕಾಗಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸಹಕಾರ್ಯದರ್ಶಿಗಳಾದ ಫರಜಾನಾ ಔಟಿ, ರಾಜಶ್ರೀ ಕಾಂಬಳೆ, ಖುರ್ಷಿದಾ ಮುಲ್ಲಾ, ಅಂಜನಾ ಕೋಳಿ, ಶ್ರೀದೇವಿ ಅಂಗದಳ್ಳಿ, ಭಾರತಿ ಕಿತ್ತೂರಮಠ, ನಿರ್ಮಲಾ ಮೆಣಸಿನಕಾಯಿ ಹಾಗೂ ಸಂಘಟನಾ ಕಾರ್ಯದರ್ಶಿಗಳಾದ ಲಕ್ಷ್ಮೀ ಭೂಸನ್ನವರ, ಶ್ವೇತಾ ಹುಣಶ್ಯಾಳ, ವೇಲಾಂಗಣಿ ಹಂಚಿನಮನಿ, ರಾಯವ್ವಾ ಜೋಬಾಲಿ, ಅನ್ನಪೂರ್ಣಾ ಮೂಲಮನಿ, ಸುರೇಖಾ ಗಾಯಕವಾಡ, ಜಾಸ್ಮಿನ್ ದೇಸಾಯಿ, ಬೀಬೀ ಆಯಿಷಾ ಬಾಳೆಕುಂದ್ರಿ ಮತ್ತು ಈರಮ್ಮಾ ಬಾಗೇವಾಡಿ ಅವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಮಹಿಳೆಯರು ಶಿಕ್ಷಣ ಮತ್ತು ಸಮಾಜದ ಕಣ್ಣುಗಳಾಗಿದ್ದು, ಸಾವಿತ್ರಿಬಾಯಿ ಫುಲೆ ಅವರ ಹಾದಿಯಲ್ಲಿ ನಡೆಯಬೇಕೆಂದು ಈ ಸಂದರ್ಭದಲ್ಲಿ ಕರೆ ನೀಡಲಾಯಿತು.
