BELAGAVI

ಬೆಳಗಾವಿ ಜೋಸ್ ಆಲುಕ್ಕಾಸ್’ನಲ್ಲಿ ಮಹಿಳಾ ದಿನಾಚರಣೆ;

Share

ಬೆಳಗಾವಿಯ ಜೋಸ್ ಆಲುಕ್ಕಾಸ್ ಇಂದು ಮಹಿಳಾ ದಿನಾಚರಣೆಯನ್ನು ಆಚರಿಸಿ, ಆಭರಣ ಪ್ರಿಯ ಮಹಿಳೆಯರಿಗಾಗಿ ಮಹಿಳಾ ದಿನದಂದೇ ಹೊಸ ಹೊಸ ಯುಗಾದಿಯ ಆಫರ್’ಗಳನ್ನು ಜಾರಿ ಮಾಡಿದೆ.

ಬೆಳಗಾವಿ: ನಗರದಲ್ಲಿ ಅತ್ಯಂತ ವಿಶ್ವಾಸಾರ್ಹ ಆಭರಣ ಮಳಿಗೆಯಾಗಿ ಗುರುತಿಸಿಕೊಂಡಿರುವ ‘ಜೋಸ್ ಆಲುಕ್ಕಾಸ್’ ವಿಶೇಷ ದಿನವನ್ನು ಅಂತಾರಾಷ್ಟ್ರೀಯ ಮಹಿಳಾ ದಿನದೊಂದಿಗೆ ಜೋಡಿಸಿ, ಮಹಿಳಾ ಗ್ರಾಹಕರಿಗಾಗಿ ಯುಗಾದಿಯ ವಿಶೇಷ ರಿಯಾಯಿತಿ ಅಭಿಯಾನವನ್ನು ಸಂಸ್ಥೆ ಆರಂಭಿಸಿದೆ.

ಜನಪ್ರಿಯ ಆಭರಣ ಮಳಿಗೆಗಳಲ್ಲಿ ಒಂದಾದ ಜೋಸ್ ಆಲುಕ್ಕಾಸ್ ಸಂಸ್ಥೆಯೂ 1964 ರಲ್ಲಿ ಕೇರಳದ ತ್ರಿಚೂರ ಜಿಲ್ಲೆಯಲ್ಲಿ ಮೊಟ್ಟ ಮೊದಲ ಪ್ರಾರಂಭವಾಗಿ ಇಂದು ದೇಶಾದ್ಯಂತ 65ಕ್ಕಿಂತ ಅಧಿಕ ಶಾಖೆಗಳನ್ನು ಹೊಂದಿದೆ. ಗ್ರಾಹಕರಿಗೆ ಗುಣಮಟ್ಟದ ಚಿನ್ನ, ಬೆಳ್ಳಿ, ವಜ್ರ ಮತ್ತು ಪ್ಲಾಟಿನಮ್ ಆಭರಣಗಳನ್ನು ಒದಗಿಸಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಅದಲ್ಲದೇ ಸಂಸ್ಥೆಯೂ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಇಂದು ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಮಿತ್ರಾ, ಶಿಕ್ಷಣ ಇಲಾಖೆಯ ನಿವೃತ್ತ ಅಧೀಕ್ಷಕರಾದ ರಾಜೇಶ್ವರಿ , ಕೇರಳದ ಸಾಂಸ್ಕೃತಿಕ ಸಂಘದ ಬೆಳಗಾವಿ ಅಧ್ಯಕ್ಷರಾದ ಚಂದ್ರಿಕಾ, ಸದಸ್ಯೆ ರೇಣುಕಾ, ಸೋಷಿಯಲ್ ಮಿಡೀಯಾ ಪ್ರಭಾವಿಗಳಾದ ಐಶ್ವರ್ಯಾ, ಬೆಳಗಾವಿಯ ಕೈರಾಳಿ ಕಲಾ ಕೇಂದ್ರದ ಸದಸ್ಯೆ ಹಿಮಾ ಉಪಸ್ಥಿತರಿದ್ಧರು. ಉಪಸ್ಥಿತ ಗಣ್ಯರಿಂದ ಕೇಕ್ ಕತ್ತರಿಸುವ ಮೂಲಕ ಜಾಗತೀಕ ಮಹಿಳಾ ದಿನವನ್ನು ಆಚರಿಸಿ, ಹೊಸ ಆಫರ್’ಗಳಿಗೆ ಚಾಲನೆಯನ್ನು ನೀಡಲಾಯಿತು.
ಜೋಸ್ ಆಲುಕ್ಕಾಸ್’ನಲ್ಲಿ ವಿಶೇಷ ಕ್ಯಾಶ್ ಬ್ಯಾಕ್ ಮತ್ತು ರಿಯಾಯಿತಿ ಅಭಿಯಾನ ಆರಂಭವಾಗಿದೆ. ಈ ಅಭಿಯಾನದಡಿ ಚಿನ್ನದ ಆಭರಣ ಖರೀದಿಸುವ ಗ್ರಾಹಕರಿಗೆ ಪ್ರತಿ ಗ್ರಾಂ. ಗೆ 100 ರೂಪಾಯಿ ಕ್ಯಾಶಬ್ಯಾಕ ವೌಚರ್ ನೀಡಲಾಗುವುದು. ಅಲ್ಲದೇ ವಜ್ರದ ಆಭರಣಗಳ ಮೇಲೆ ಶೇ. 30 ರಷ್ಟು ರಿಯಾಯಿತಿ ಮತ್ತು ವಜ್ರದ ಪ್ರತಿ ಕ್ಯಾರೆಟ್’ಗೆ 500 ಮಿಲಿ ಗ್ರಾಂ ಉಚಿತ ಚಿನ್ನದ ನಾಣ್ಯ ನೀಡಲಾಗುವುದು. ಈ ಆಫರ್ ಏಪ್ರೀಲ್ 18 ವರೆಗೆ ಮಾತ್ರ ಮಾನ್ಯವಾಗಿದೆ.

ಈ ವೇಳೆ ಮಾತನಾಡಿದ ಶಿಕ್ಷಣ ಇಲಾಖೆಯ ನಿವೃತ್ತ ಅಧೀಕ್ಷಕರಾದ ರಾಜೇಶ್ವರಿ ಜೋಸ್ ಆಲುಕ್ಕಾಸ್ ಗ್ರಾಹಕರ ಪ್ರೀತಿ ವಿಶ್ವಾಸವನ್ನು ಗಳಿಸಿದೆ. ಗ್ರಾಹಕರಿಗೆ ಆವಶ್ಯಕವಾದ ರೀತಿಯಲ್ಲಿ ಚಿನ್ನಾಭರಣಗಳನ್ನು ಒದಗಿಸುವ ಜೋಸ್ ಆಲುಕ್ಕಾಸ್ ಇಂದು ಮಹಿಳಾ ದಿನವನ್ನು ಆಚರಿಸುವುದರೊಂದಿಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೂ ಹಲವಾರು ಉಪಕ್ರಮಗಳನ್ನು ಕೈಗೆತ್ತಿಕೊಂಡಿರುವುದು ಪ್ರಶಂಸನೀಯ ಎಂದರು.

ಇನ್ನೋರ್ವ ಗಣ್ಯರು ಮಾತನಾಡಿ, ಜೋಸ್ ಆಲುಕ್ಕಾಸ್ ಕೇವಲ ಆಭರಣಗಳನ್ನು ಗ್ರಾಹಕರಿಗೆ ನೀಡುವುದಷ್ಟೇ ಅಲ್ಲದೇ ಮಹಿಳಾ ದಿನದಂತಹ ಕಾರ್ಯಕ್ರಮಗಳು ಮತ್ತು ಸಾಮಾಜೀಕ ಉಪಕ್ರಮಗಳಲ್ಲಿಯೂ ಸೈ ಎನಿಸಿಕೊಂಡಿದೆ. ಭವಿಷ್ಯದಲ್ಲಿ ಇದು ಇನ್ನಷ್ಟು ಉತ್ತರೋತ್ತರ ಪ್ರಗತಿಯನ್ನು ಸಾಧಿಸಲಿ ಎಂದು ಹಾರೈಸಿದರು.

ಸೋಷಿಯಲ್ ಮೀಡಿಯಾ ಪ್ರಭಾವಿಗಳಾದ ಐಶ್ವರ್ಯಾ ಅವರು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆಯನ್ನು ಮಾಡಿದ್ದಾರೆ. ದೇಶದ ರಾಷ್ಟ್ರಪತಿ ಸ್ಥಾನದಿಂದ ಹಿಡಿದು, ಕ್ರೀಡೆ, ರಾಜಕೀಯ, ಸಾಮಾಜೀಕ ಎಲ್ಲ ಕ್ಷೇತ್ರದಲ್ಲಿಯೂ ತನ್ನ ಛಾಪು ಮೂಡಿಸಿದ್ದಾರೆ. ಜೋಸ್ ಆಲುಕ್ಕಾಸ್ ಮಹಿಳೆಯರನ್ನು ಪ್ರೋತ್ಸಾಹಿಸುತ್ತ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.

Tags:

error: Content is protected !!