Vijaypura

ದೇಶದಲ್ಲಿ ಎರಡು ಕಡೆ ಮಾತ್ರ ಮಹಿಳೆಯರಿಂದ ನಮಾಜ್ ಆಚರಣೆ, ವಿಜಯಪುರ ದಲ್ಲೂ ಸಹಿತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮಹಿಳೆಯರು…

Share

ಇಲ್ಲಿ ಆದಿಲ್ ಶಾಹಿಗಳ ಕಾಲದಿಂದಲೂ ಮಹಿಳೆಯರು ನಮಾಜ್ ಮಾಡುತ್ತಾರೆ. ಪ್ರತಿ ಶುಕ್ರವಾರ ಹಾಗೂ ವಿಶೇಷ ದಿನಗಳಲ್ಲಿ ತಪ್ಪದೇ ಪ್ರಾರ್ಥನೆ ನಡೆಯುತ್ತದೆ. ಮಸೀದಿಯೊಳಗೆ ಯಾರೊಬ್ಬ ಪುರುಷರಿಗೂ ಪ್ರವೇಶವಿಲ್ಲಾ. ಇಲ್ಲಿ ಪುರುಷನಿಗಿದ್ದಷ್ಟೇ ಪ್ರಾಧ್ಯಾನ್ಯತೆ ಮಹಿಳೆಯರಿಗೆ. ಮುಸ್ಲೀಂ ಸಮುಯದಾಯದ ಮಹಿಳೆಯರೆಲ್ಲಾ ಇಲ್ಲಿ ಸ್ವಚ್ಛಂದವಾಗಿ ಅಲ್ಲಾಹುವಿನ ಸ್ಮರಣೆ ಮಾಡುತ್ತಾರೆ. ಸದ್ಯ ಈದ್ ಉಲ್ ಫೀತರ್ ಸಂಭ್ರಮದಂದು ಮಹಿಳೆಯರೆಲ್ಲಾ ಸಡಗರ, ಸಂಭ್ರಮ ಹಾಗೂ ಭಕ್ತಿಯಿಂದ ಮಸೀದಿಯಲ್ಲಿ ಪ್ರಾರ್ಥಿಸಿದರು. ಅರೇ ಮಹಿಳೆಯರ ಮಸೀದಿಯಾ, ಅವರೂ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಾರಾ ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮಲ್ಲಿ ಮೂಡಿದರೆ ಅದಕ್ಕಿದೆ ಇಲ್ಲಿ ಉತ್ತರ…

ಜೀವಮಾನದಲ್ಲಿ ಒಮ್ಮೇಯಾದರೂ ಮೆಕ್ಕಾ ಮಸೀದಿಯನ್ನು ನೋಡಬೇಕೆನ್ನುವುದು ಪ್ರತಿಯೊಬ್ಬ ಮುಸ್ಲೀಂ ಸಮುದಾಯದವರ ಆಸೆ. ಅಂತಹ ಪವಿತ್ರ ಕ್ಷೇತ್ರವಾಗಿದೆ ಮೆಕ್ಕಾ. ಇಂತಹ ಮೆಕ್ಕಾ ಹೆಸರಿನ ಮಸೀದಿಯೊಂದು ಗುಮ್ಮಟ ನಗರಿ ವಿಜಯಪುರದಲ್ಲಿದೆ. ಅಲ್ಲಿ ನಿತ್ಯ 5 ಬಾರಿ ಪ್ರಾರ್ಥನೆ ಮಾಡಲಾಗುತ್ತದೆ. ಜೊತೆಗೆ ಖುರಾನ ಪಠನ ಹಾಗೂ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಗ್ರಂಥಗಳ ಪಾರಾಯಣವೂ ನಡೆಯುತ್ತವೆ. ಇಷ್ಟೆಲ್ಲಾ ನಡೆಯುವ ಈ ತಾಣದಲ್ಲಿ ಪುರುಷರಿಗೆ ಮಾತ್ರ ಪ್ರವೇಶವಿಲ್ಲಾ. ಇಲ್ಲಿ ಎಲ್ಲವೂ ಮಹಿಳಾ ಮಯವಾಗಿರುತ್ತದೆ. 463 ವರ್ಷಗಳ ಇತಿಹಾಸ ಹೊಂದಿದ ಈ ಮೆಕ್ಕಾ ಮಸೀದಿಯನ್ನು ಮಹಿಳೆಯರ ಮಸೀದಿ ಎಂದೇ ಕರೆಯುತ್ತಾರೆ. ಈ ಮಸೀದಿಯನ್ನು ನಿಜಾಮರು ತನ್ನ ಮಗಳಿಗಾಗಿ ಕಟ್ಟಿಸಿದ್ದು ಎಂದು ಇತಿಹಾಸದಿಂದ ತಿಳಿದು ಬರುತ್ತದೆ. 16 ನೇ ಶತಮಾನದಲ್ಲಿಯೇ ಗಂಡು ಹೆಣ್ಣು ಎಂಬ ಬೇಧ ಭಾವ ಬರದಂತೆ ಸಮಾನತೆ ಮೆರೆದಿದ್ದಾರೆ ಆದಿಲ್ ಶಾಹಿಗಳು ಹಾಗೂ ನಿಜಾಮರು. ಇಂತಹ ಸಮಾನತೆಯ ಪ್ರತೀಕವೇ ಈ ಮೆಕ್ಕಾ ಮಸೀದಿ. ಎರಡನೇಯ ಆದಿಲ್ ಶಾಹಿ ಪತ್ನಿ ಚಾಂದಬೀಬಿಗಾಗಿ ಆಕೆಯ ತಂದೆ ನಿಜಾಮ ದೊರೆ ಹುಸೇನ ನಿಜಾಮ ಈ ಮಸೀದಿಯನ್ನು ಕಟ್ಟಿಸಿದ್ದಾರೆ ಎಂಬ ಅಂಶ ಇತಿಹಾಸದಲ್ಲಿ ದಾಖಲಾಗಿದೆ. 1554 ರಲ್ಲಿ ರಲ್ಲಿ ವಿಜಯಪುರದಲ್ಲಿ ಮಹಿಳೆಯರಿಗಾಗಿಯೇ ಪ್ರಾರ್ಥನೆ ಮಾಡಲು ನಿರ್ಮಿಸಿದ ಮಸೀದಿ ಇದಾಗಿದೆ. ಸರಿ ಸುಮಾರು 1554 ರಲ್ಲಿ ನಿರ್ಮಾಣವಾದ ಈ ಮಸೀದಿಯಲ್ಲಿ ಅಂದಿನಿಂದ ಹಿಡಿದು ಇಂದಿನವರೆಗೂ ಮಹಿಳೆಯರು ಮಾತ್ರ ಪ್ರಾರ್ಥನೆ ಮಾಡಬೇಕೆಂದು ನಿಯಮ ಮಾಡಲಾಗಿದೆ. ರಂಜಾನ್ ಸೇರಿದಂತೆ ಇನ್ನಿತರ ಹಬ್ಬಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲೀಂ ಸಮುದಾಯದ ಮಹಿಳೆಯರು ಪ್ರಾರ್ಥನೆಗೆ ಆಗಮಿಸೋದು ಕಾಮನ್ ಆಗಿದೆ. ಚಿಕ್ಕ ಚಿಕ್ಕ ಮಕ್ಕಳು, ಯುವತಿರು ಹಾಗೂ ವಯಸ್ಸಾದ ಮಹಿಳೆಯರು ಯಾವುದೇ ವಯೋಮಾನದ ಬೇಧ ಭಾವವಿಲ್ಲದೇ ಸಾಮೂಹಿಕ ಪ್ರಾರ್ಥನೆ ಮಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಮಹಿಳಾ ಸ್ವಾವಲಂಬನೆ, ಸ್ವಾತಂತ್ರ್ಯ, ಅಭಿವ್ಯಕ್ತಿ, ಸಮಾನತೆಯನ್ನು ನೀಡುವ ಉದ್ದೇಶದಿಂದಲೇ ಆದಿಲ್ ಶಾಹಿಗಳು ಈ ಕೊಡುಗೆ ನೀಡಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲಾ. ಇಂದು ರಂಜಾನ್ ಹಬ್ಬ, ಈದ್ ಉಲ್ ಫೀತರ್ ಪ್ರಯುಕ್ತ ನೂರಾರು ಮಹಿಳೆಯರು ಸರದಿಯಂತೆ ಮೆಕ್ಕಾ ಮಸೀದಿಗೆ ಆಗಮಸಿ ವಿಶೇಷ ಪ್ರಾರ್ಥನೆ ನಡೆಸಿದರು. ಪ್ರಾರ್ಥನೆಯ ಬಳಿಕ ಪರಸ್ಪರರು ಆಲಿಂಗನ ಮಾಡಿಕೊಂಡು ಈದ್ ಉಲ್ ಫಿತರ್ ಹಬ್ಬದ ಶುಭಾಷಯಗಳನ್ನು ವಿನಿಮಯ ಮಾಡಿಕೊಂಡರು…

ಇಡೀ ದೇಶದಲ್ಲಿ ಕೇವಲ ಎರಡು ಸ್ಥಳಗಳಲ್ಲಿ ಮಾತ್ರ ಮಹಿಳೆಯರಿಗೆ ಪ್ರಾರ್ಥನೆ ಮಾಡಲು ಮಸೀದಿ ಇದೆ. ಐತಿಹಾಸಿಕ ಹಿನ್ನಲೆಯ ವಿಜಯಪುರದ ಮೆಕ್ಕಾ ಮಸೀದ ಮೊದಲನೇಯದ್ದಾದರೆ, ಎರಡನೇಯದ್ದು ಹೈದರಾಬಾದಿನಲ್ಲಿದೆ. ಇಲ್ಲಿ ನಿತ್ಯ ಬೆಳಿಗ್ಗೆ 5-30 ಕ್ಕೆ ಸರಿಯಾಗಿ ಆಸರ ನಮಾಜ್, ಮದ್ಯಾಹ್ನ 2-00 ಗಂಟೆಗೆ ಚೇವಾಂಕಿ, 4-00 ಗಂಟೆಗೆ ಆಸರಕಿ, ಸಾಯಂಕಾಲ 7-00 ಗಂಟೆಗೆ ನಮಾಜ್. ರಾತ್ರಿ 8-00 ಕ್ಕೆ ಇಷಾ ಹೀಗೆ ನಿತ್ಯ 5 ಬಾರಿ ಇಸ್ಲಾಂ ಪದ್ದತಿಯಂತೆ ಇಲ್ಲಿ ಪ್ರಾರ್ಥನೆ ನಡೆಯುತ್ತದೆ. ಮಹಿಳೆಯರಿಗಾಗಿಯೇ ಹಾಗೂ ಮಹಿಳೆಯರು ಪ್ರಾರ್ಥನೆ ಮಾಡಲು ನಿರ್ಮಾಣವಾದ ಈ ಮೆಕ್ಕಾ ಮಸೀದಿಯಲ್ಲಿ ಒಳ್ಳೆಯ ಮನಸ್ಸಿನಿಂದ ಪ್ರಾರ್ಥನೆ ಮಾಡಿದರೆ ಒಳಿತಾಗುತ್ತದೆ ಎಂಬುದು ಪ್ರಾರ್ಥನೆ ಮಾಡುವವರ ಮಾತು..

ಕೇವಲ ಭಾಷಣದಲ್ಲಿ, ಮಾತುಗಳಲ್ಲಿ ಮಹಿಳಾ ಸಬಲೀಕರಣ ಬಗ್ಗೆ ಮಾತನಾಡುವ ನಮ್ಮಗಳ ಮಧ್ಯೆ 463 ವರ್ಷಗಳ ಹಿಂದೆಯೇ ಮಹಿಳೆಯರಿಗಾಗಿಯೇ ಮಸೀದಿ ಕಟ್ಟುವ ಮೂಲಕ ಆದಿಲ್ ಶಾಹಿಗಳು ಮತ್ತು ನಿಜಾಮರು ನಿಜವಾಗಿ ಮಹಿಳೆಯರಿಗೆ ಸರಿ ಸಮಾನತೆಯನ್ನು ನೀಡಿದ್ದಾರೆ. ಮಾನಿನಿಯರಿಗಾಗಿಯೇ ಮೀಸಲಾದ ಇಂತಹ ಪ್ರಾರ್ಥನಾ ಸ್ಥಳಗಳನ್ನು ದೇಶದೆಲ್ಲೆಡೆ ನಿರ್ಮಾಣ ಮಾಡಬೇಕೆನ್ನುತ್ತಾರೆ ಸ್ಥಳಿಯ ಮಹಿಳೆಯರು. ಒಟ್ಟಾರೆ ದೇಶದಲ್ಲಿ ಈದ್ ಉಲ್ ಫಿತರ್ ಸಂಭ್ರಮದಲ್ಲಿ ಕೇವಲ ಪುರುಷರಷ್ಟೇ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಿದರೆ, ವಿಜಯಪುರದಲ್ಲಿ ಪುರುಷರಷ್ಟೇ ಸರಿಸಮನಾಗಿ ಮಹಿಳೆಯರೂ ಸಹ ಮಸೀದಿಗೆ ತೆರಳಿ ಪ್ರಾರ್ಥನೆ ಮಾಡಿದ್ದು ನಿಜಕ್ಕೂ ವಿಶೇಷವಾಗಿದೆ…

Tags:

error: Content is protected !!