Chikkodi

ಯಡೂರಿನಲ್ಲಿ ಮಹಿಳೆಯರಿಂದ ಬೆಳ್ಳಿ ರಥೋತ್ಸವ

Share

ತಾಲೂಕಿನ ಸುಕ್ಷೇತ್ರ ಯಡೂರ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಭದ್ರಕಾಳಿ ದೇವಿಯ ಕಲ್ಯಾಣ ಮಹೋತ್ಸವ ಅಂಗವಾಗಿ ಶ್ರೀ ವೀರಭದ್ರೇಶ್ವರ ಬೆಳ್ಳಿ ರಥೋತ್ಸವ ಮಹಿಳೆಯರಿಂದ ವಿಜೃಂಭಣೆಯಿಂದ ಜರುಗಿತು.

ಶ್ರೀಶೈಲ್ ಜದ್ಗುರು ಡಾ!ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ನಿಲಾಂಬಿಕಾ ಪ್ರಕಾಶ ಹುಕ್ಕೇರಿಯವರು ರಥೋತ್ಸವಕ್ಕೆ ಚಾಲನೆ ನೀಡಿದರು.ಬೆಳ್ಳಿ ರಥವನ್ನು ಮಹಿಳೆಯರು ಅತ್ಯಂತ ಭಕ್ತಿಭಾವದಿಂದ ಎಳೆದರು.ಹರ ಹರ ಮಹಾದೇವ,ಶ್ರೀ ವೀರಭದ್ರೇಶ್ವರ ಮಹಾರಾಜ ಕೀ ಜೈ ಎನ್ನುವ ಘೋಷಣೆಗಳು ಮುಗಿಲು ಮುಟ್ಟಿದವು.ರಥೋತ್ಸವಕ್ಕೆ ಭಕ್ತರು ಖಾರಿಕ,ಕೊಬ್ಬರಿ,ಸಕ್ಕರೆ, ಬಾಳೆ ಹಣ್ಣುಗಳನ್ನು ಭಕ್ತಿಯಿಂದ ಅರ್ಪಿಸಿ ಭಕ್ತಿಯ ಪರಾಕಾಷ್ಠೆಯನ್ನು ಮೇರೆದರು.ರಥೋತ್ಸವ ಉದ್ದಕ್ಕೂ ಆನೆ,ಕುದುರೆ,ನಂದಿ ಮನಸೂರಗೊಂಡವು.

 

ರಥೋತ್ಸವು ಕಾಡಸಿದ್ದೇಶ್ವರ ಮಠದಿಂದ ಪ್ರಾರಂಭವಾಗಿ ಶ್ರೀವೀರಭದ್ರೇಶ್ವರ ದೇವಸ್ಥಾನ,ಚನ್ನಮ್ಮ ವೃತ್ತ,ಹಳೇ ಯಡೂರಿನ ಬಸವೇಶ್ವರ ದೇವಸ್ಥಾನ ಮಾರ್ಗವಾಗಿ ಸಂಚರಿಸಿ ಶ್ರೀವೀರಭದ್ರೇಶ್ವರ ದೇವಸ್ಥಾನಕ್ಕೆ ಬಂದು ಸಂಪನ್ನಗೊಂಡಿತು.

ರಥೋತ್ಸವದಲ್ಲಿ ವಿವಿಧ ಮಠಾಧೀಶರು,ಭಕ್ತರು, ಗ್ರಾಮಸ್ಥರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!