BELAGAVI

ಮಹಿಳೆಯರು ಸಾಕ್ಷಾತ್ ಶಿವಶಕ್ತಿ ಸ್ವರೂಪಿಗಳು: ಬ್ರಹ್ಮಕುಮಾರಿ ಕೇಂದ್ರದಲ್ಲಿ ಸಂಭ್ರಮದ ಮಹಿಳಾ ದಿನಾಚರಣೆ!

Share

ಬೆಳಗಾವಿಯ ಮಹಾಂತೇಶ ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೌಂಟ್ ಅಬುವಿನಿಂದ ಆಗಮಿಸಿದ್ದ ರಾಜಯೋಗಿನಿ ಬ್ರಹ್ಮಕುಮಾರಿ ಡಾ. ಸುನಿತಾ ಅಕ್ಕನವರು ಮಹಿಳೆಯರಿಗೆ ಆಧ್ಯಾತ್ಮಿಕ ಶಕ್ತಿಯ ಜಾಗೃತಿಯ ಸಂದೇಶ ನೀಡಿದರು.

ಸ್ನೇಹಿ ಶಿವಶಕ್ತಿ ಸ್ವರೂಪರಾಗಿ ಎಂಬ ವಿಷಯದ ಕುರಿತು ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮವನ್ನು ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ಪ್ರೀತಿ ಸಾಯಿನಾಥ್ ಗಾಯಕವಾಡ್, ಮರಾಠಾ ಮಂಡಳದ ಶ್ರೀಮತಿ ರಾಜೇಶ್ವರಿ ಹಲಗೇಕರ್ ಹಾಗೂ ವಲಯ ಸಂಚಾಲಕಿ ರಾಜಯೋಗಿನಿ ಅಂಬಿಕಾ ಅಕ್ಕನವರು ಜಂಟಿಯಾಗಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಡಾ. ಸುನಿತಾ ಅಕ್ಕನವರು, ಮಹಿಳೆಯರಲ್ಲಿ ಅಪಾರವಾದ ಸಹನಶಕ್ತಿ, ಶಾಂತಿ ಮತ್ತು ಸಂತುಷ್ಟತೆಯ ಗುಣಗಳಿವೆ. ಇದೇ ಕಾರಣಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರನ್ನು ದುರ್ಗೆ ಮತ್ತು ಲಕ್ಷ್ಮಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಪ್ರತಿಯೊಬ್ಬ ಮಹಿಳೆಯೂ ತನ್ನಲ್ಲಿರುವ ಸುಪ್ತ ಶಕ್ತಿಗಳನ್ನು ಜಾಗೃತಗೊಳಿಸಿಕೊಂಡು ಶಿವಶಕ್ತಿಯಾಗಿ ಹೊರಹೊಮ್ಮಬೇಕು ಎಂದು ಪ್ರೇರೇಪಿಸಿದರು. ಕಾರ್ಯಕ್ರಮದಲ್ಲಿ ಮಹೇಶ್ವರಿ ಸಮಾಜದ ಸದಸ್ಯರು, ಮಹಾಂತೇಶ ನಗರ ಮಹಿಳಾ ಮಂಡಳ ಹಾಗೂ ವಿವಿಧ ಸೇವಾಕೇಂದ್ರಗಳ ಸಹೋದರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Tags:

error: Content is protected !!