ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ಜಾಗತಿಕ ಮಹಿಳಾ ದಿನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು
ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ಈ ವರ್ಷವೂ ಜಾಗತಿಕ ಮಹಿಳಾ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಸನ್ಮಾನಿಸುವುದು ಈ ಸಂಸ್ಥೆಯ ವಿಶೇಷತೆಯಾಗಿದೆ.

ಈ ಸಾಲಿನ ಮಹಿಳಾ ದಿನಾಚರಣೆಯಲ್ಲಿ, ಸಮಾಜ ಸೇವಕಿ ಭಕ್ತಿ ಶಿಂಧೆ ಮತ್ತು ಈಜು ತರಬೇತುದಾರರಾದ ರಾಜಶ್ರೀ ಪಾಟೀಲ್ ಅವರನ್ನು ಅವರ ಸಾಮಾಜಿಕ ಮತ್ತು ವೃತ್ತಿಪರ ಕೊಡುಗೆಗಳಿಗಾಗಿ ಗೌರವಿಸಲಾಯಿತು. ಶ್ರೀಮತಿ ಲತಾ ಕಿತ್ತೂರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಶಾಲು, ಹೂಗುಚ್ಛ ಹಾಗೂ ಸ್ಮರಣಿಕೆ ನೀಡಿ ಸಾಧಕಿಯರನ್ನು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಭಕ್ತಿ ಶಿಂಧೆ ಮತ್ತು ರಾಜಶ್ರೀ ಪಾಟೀಲ್, ಈ ಗೌರವವು ತಮ್ಮ ಮುಂದಿನ ಸಮಾಜ ಸೇವೆಗೆ ಮತ್ತಷ್ಟು ಪ್ರೇರಣೆ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ಅಧ್ಯಕ್ಷರಾದ ಉಮೇಶ್ ಕಲ್ಘಟ್ಗಿ, ಸೂರ್ಯಕಾಂತ್ ಹಿಂದಲಗೇಕರ್, ಗಣೇಶ್ ದಡ್ಡಿಕರ್, ಮಹೇಶ್ ದಡ್ಡಿಕರ್, ಖ್ಯಾತ ಚಿತ್ರಕಲಾವಿದ ವಸಂತ ನಿರ್ಮಳೆ, ಸೀತಾ ನಿರ್ಮಳೆ, ಸೌ.ಮೋದ್ಗೇಕರ್, ಸೌ.ಹಿರೇಮಠ, ಸೌ.ಭೋಸಲೆ ಸೇರಿದಂತೆ ಅನೇಕ ಗಣ್ಯರು, ಕ್ರೀಡಾಪಟುಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
