ರೈತನೋರ್ವ ಕೃಷಿಗೆ ಹಾಗೂ ಕುಡಿಯುವ ನೀರಿಗಾಗಿ ಬೋರವೆಲ್ ಕೊರೆಸಲು ಮುಂದಾಗಿದ್ದರು.ಆ ಬೋರವೆಲನ ನೀರು ಆಕಾಶದೆತ್ತರಕ್ಕೆ ಚಿಮ್ಮಿ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ.

ರಾಯಬಾಗ ತಾಲೂಕಿನ ಇಟನಾಳ ಗ್ರಾಮದ ರೈತ ಭೀಮಪ್ಪ ಡಾಂಗೆಯವರು ಬೋರವೆಲ ಕೊರೆಸುವ ಸಂದರ್ಭದಲ್ಲಿ ನೀರು ಆಕಾಶದೆತ್ತರಕ್ಕೆ ಚಿಮ್ಮಿದೆ. ಇದು ರೈತನ ಸಂತೋಷಕಕ್ಕೆ ಪಾರವೇ ಇಲ್ಲದಂತಾಗಿದೆ.
ರೈತ ಭೀಮಪ್ಪ ಬೆಳೆಗಳಿಗೆ ಹಾಗೂ ಕುಡಿಯುವ ನೀರಿಗಾಗಿ ನಿನ್ನೆ ರಾತ್ರಿ ಸಮರ್ಥ ಬೋರವೆಲ್ ಸರ್ವಿಸನ ಬೋರವೆಲ್ ಕರೆಸಿ 280 ಅಡಿ ಬೋರವೆಲ್ ಕೊರೆಸಿದರು.ಅದರಲ್ಲಿ 250 ಅಡಿಗೆ ಬೋರವೆಲ್ ನೀರು ಆಕಾಶದ ಎತ್ತರಕ್ಕೆ ಚಿಮ್ಮಿದೆ.5_6 ಅಡಿಯಷ್ಟು ನೀರಾಗಿದೆ ಎಂದು ಅಂದಾಜಿಸಲಾಗಿದೆ.
ಒಟ್ಟಿನಲ್ಲಿ ನೆತ್ತಿ ಸುಡುವ ಬಿಸಿಲಿನಲ್ಲಿ ಮಡ್ಡಿಭಾಗದಲ್ಲಿ ಬೋರವೆಲ್ ನ ನೀರು ಆಕಾಶದ ಎತ್ತರಕ್ಕೆ ಚಿಮ್ಮಿರುವುದು ಪವಾಡ ಸದೃಶ್ಯವೇ ಸರಿ..
