ನಾಲತವಾಡ ಕುಟುಂಬದಲ್ಲಿ ಸಂಪ್ರದಾಯದ ಮದುವೆ ಸಂಭ್ರಮ

ಮುದ್ದೇಬಿಹಾಳದಲ್ಲಿ ನೆರವೇರಿದ ವಿಶಿಷ್ಟ ಕಲ್ಯಾಣ ಮಹೋತ್ಸವ
ಇಳಕಲ್ ಶ್ರೀಗಳ ಸಾನಿಧ್ಯದಲ್ಲಿ ಮಂಗಲ ಕಾರ್ಯ
ಬಸವ ತತ್ವದಡಿ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ
ವಿಶ್ವಗುರು ಬಸವಣ್ಣನವರ ಜನ್ಮಭೂಮಿ ವಿಜಯಪುರ ಜಿಲ್ಲೆಯಲ್ಲಿ ಲಿಂಗಾಯತ ಸಂಪ್ರದಾಯದಂತೆ ಮದುವೆ ನಡೆಯಿತು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡದ ತಾತರೆಡ್ಡಿ ಕುಟುಂಬದ ಕಲ್ಯಾಣ ಮಹೋತ್ಸವವು ಮುದ್ದೇಬಿಹಾಳ ಪಟ್ಟಣದಲ್ಲಿ ಲಿಂಗಾಯತ ಸಂಪ್ರದಾಯದಂತೆ ವಿಶಿಷ್ಟವಾಗಿ ಜರುಗಿತು. ಪೂಜ್ಯ ಗುರುಮಹಾಂತ ಶ್ರೀಗಳು, ಇಳಕಲ್–ಚಿತ್ತರಗಿ ಹಾಗೂ ಪೂಜ್ಯ ಶ್ರೀ ವೇಮನಾನಂದ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯವು ಸಮಾರಂಭಕ್ಕೆ ವಿಶೇಷ ಪಾವಿತ್ರ್ಯ ತುಂಬಿತು. ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಈ ದಂಪತಿಗಳು ಸುಖ, ಶಾಂತಿಯಿಂದ ನೂರುಕಾಲ ಬಾಳಲಿ ಎಂದು ಹಿತೈಷಿಗಳು ಹರಸಿದರು.
