Chikkodi

ಯಡೂರಿನ ವೀರಭದ್ರೇಶ್ವರ ದೇವಸ್ಥಾನ ಆಧ್ಯಾತ್ಮಿಕ ಮತ್ತು ಸಂಸ್ಕೃತಿಯ ನಂಬಿಕೆಯ ಪ್ರತಿಕ:ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್

Share

ಯಡೂರಿನ ವೀರಭದ್ರೇಶ್ವರ ದೇವಸ್ಥಾನ ಆಧ್ಯಾತ್ಮಿಕ ಮತ್ತು ಸಂಸ್ಕೃತಿಯಾಗಿದೆ.ಕೃಷ್ಣಾ ನದಿ ದಡದಲ್ಲಿ ಈ ಪುಣ್ಯ ಸ್ಥಳ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ ಎಂದು ಉಪರಾಷ್ಟಪತಿ ಸಿ ಪಿ ರಾಧಾಕೃಷ್ಣನ್ ಹೇಳಿದರು.

ಅವರು ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದ‌ ರಾಜಾಗೋಪುಗಳ ಉದ್ಘಾಟನೆ ಹಾಗೂ ಕುಂಭಾಭಿಷೇಕ,ಲಕ್ಷದಿಪೋತ್ಸವ,ಕೃಷ್ಣಾರತಿ
ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಉದ್ದೇಶಿಸಿ
ಪ್ರಾಣಿಗಳ, ಪಕ್ಷಿಗಳು, ನದಿಗಳು ಪ್ರತಿಯೊಬ್ಬನಲ್ಲಿ ದೈವತ್ವದ ನೋಡುವುದಾಗಿದೆ ಕೋಟ್ಯಾಂತರ ಲಿಂಗಾಯತ ಜನ ಜನರು ಕರ್ನಾಟಕದಲ್ಲಿ ವಾಸಿಸುತ್ತಿರುವುದು ನನಗೆ ಆಶ್ಚರ್ಯವಾಗಿದೆ.
ಯಡೂರಿನ ವೀರಭದ್ರೇಶ್ವರ ದೇವಸ್ಥಾನ ಆಧ್ಯಾತ್ಮಿಕ ಮತ್ತು ಸಂಸ್ಕೃತಿಯಾಗಿದೆ.ಇದು ನಂಬಿಕೆ ಪ್ರತೀಕವಾಗಿದೆ.
ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ದಡದಲ್ಲಿ ಈ ಪುಣ್ಯ ಸ್ಥಳ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ.
ದಕ್ಷ ಯಜ್ಞ ಪೌರಾಣಿಕ ಮಹತ್ವ ನನಗೆ ತಿಳಿದಿದೆ.
ಪವಿತ್ರ ಯಜ್ಜಕುಂಡವು ಯಡೂರಿನ ಬಗ್ಗೆ ಹೆಮ್ಮೆವಿದೆ.
ಹಿಂದೂ ಧರ್ಮ ಪ್ರಖ್ಯಾತಿಯನ್ನ ಸ್ವಾಮೀಜಿಗಳು ಮರುಕಳಿಸಿದ್ದಾರೆ.
ಭಕ್ತಿ ಮತ್ತು ಧೈರ್ಯದ ಮೂಲಕ ಹಿಂದೂ ನಂಬಿಕೆಯನ್ನ ಪುನರ ಸ್ಥಾಪಿಸಿದ್ದಾರೆ.
ದೇಶದ ಲಕ್ಷಾಂತರ ಗಣನ ಜನರ ಸೆಳೆಯುವ ಕೇಂದ್ರವಾಗಿ ಯಡೂರ ಗ್ರಾಮ ಬದಲಾಗಿದೆ.
ಪ್ರಾಚೀನ ಸಂಪ್ರದಾಯ ರಕ್ಷಿಸಲು ವೇದಗಳು, ಆಗಮಳ ಬಗ್ಗೆ ಇಲ್ಲಿ ಶಿಕ್ಷಣ ನೀಡಲಾಗುತ್ತದೆ.
ಭಗವದ್ಗೀತೆಯ ಆಳವಾದ ಸಂದೇಶ ನಮಗೆ ಕಲಿಸಿದ ಪವಿತ್ರ ಭೂಮಿಯಾಗಿದೆ.
ವಸುದೈವ ಕುಟುಂಬದಂತೆ ನಮ್ಮ ದೇಶ ಆಗಿದೆ.
ನದಿಗಳು ಪರ್ವತ ಸೇರಿದಂತೆ ಎಲ್ಲವನ್ನೂ ನೋಡುವುದೇ ನಮ್ಮ ಹಿಂದುತ್ವವಾಗಿದೆ.
ವೀರಶೈವ ಲಿಂಗಾಯತರು
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ 1 ಕೋಟಿಗೂ ಅಧಿಕ ಜನ ವಾಸಿಸುತ್ತಿದ್ದಾರೆ‌.
ವೀರಶೈವ ಲಿಂಗಾಯತ ಧರ್ಮದ ಮಠಗಳ ಕೊಡುಗೆ ಬಹಳ ಇದೆ.
ಈ ಪವಿತ್ರ ಕೃಷ್ಣಾ ನದಿಯ ದಡದಲ್ಲಿ ವೀರಭದ್ರೇಶ್ವರ ಹಾಗೂ ಕಾಡಸಿದ್ದೇಶ್ವರ ದೇವಸ್ಥಾನ ಇದೆ.
ಶಿವ ಪುರಾಣದ ವೀರಭದ್ರೇಶ್ವರ ಹಾಗೂ ಈ ಪವಿತ್ರ ಸ್ಥಾನದ ಮಹತ್ವ ತಿಳಿಸಿದ್ದಾರೆ.
ವೇದ ಆಗಮ ಪಾಠಶಾಲೆ ಪ್ರತೀ ವರ್ಷ ನೂರಾರು ಜನರಿಗೆ ವಿದ್ಯಾಧಾನ ಮಾಡುತ್ತಾರೆ.
ವಿಶ್ವ ಚೇತನ್ ಪ್ರಶಸ್ತಿಗೆ ಶ್ರೀ ಮಠ ಪ್ರಶಂಸಿಸುತ್ತೇನೆ ಎಂದರು.

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ
ಯಡೂರ ಕ್ಷೇತ್ರವು ಅಧ್ಯಾತ್ಮಿಕ ಶಕ್ತಿ ಜೊತೆಗೆ ಸಾಮಾಜಿಕ ಶೈಕ್ಷಣಿಕ ಕೇಂದ್ರವಾಗಿದೆ.ಇವತ್ತು ಯಡೂರ ಗ್ರಾಮದಲ್ಲಿ ರಾಜಗೋಪುರಗಳ ಉದ್ಘಾಟನೆ, ಮಹಾಕುಂಭಾಭಿಷೇಕ, ಕೃಷ್ಣಾರತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂತಸ ತಂದಿದೆ ಎಂದರು.

ದಿವ್ಯಸಾನಿಧ್ಯವನ್ನು ವಹಿಸಿದ್ದ ಶ್ರೀಶೈಲ್ ಜಗದ್ಗುರು ‌ಡಾ! ಚನ್ನಸಿಧ್ದರಾಮ ಪಂಡಿತಾರಾಧ್ಯ ಮಾತನಾಡಿ ಭಾರತದ ಎರಡನೇ ಕಾಶೀ ಎಂದೇ ಪ್ರಸಿದ್ದಿಯನ್ನು ಪಡೆದಿರುವ ಸುಕ್ಷೇತ್ರ ಯಡೂರ ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನವು ಪ್ರಸಿದ್ಧ ದೇವಸ್ಥಾನವಾಗಿದೆ.ಕೃಷ್ಣಾ ನದಿಯಲ್ಲಿ ಶ್ರೀ ವೀರಭದ್ರೇಶ್ವರ ದೇವರ ಬೃಹತ ಮೂರ್ತಿ ನಿರ್ಮಾಣ ಮಾಡಲು ಉಪರಾಷ್ಟ್ರಪತಿಗಳಿಗೆ ಮನವಿ‌ ಮಾಡಿಕೊಂಡರು.

ಹಿರಿಯ ರಾಜಕಾರಣಿ ಪ್ರಕಾಶ ಹುಕ್ಕೇರಿಯವರಿಗೆ ಪ್ರಕಾಶ ವೀರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಹಾಗೂ ಆರೋಗ್ಯ,ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿರುವ ಕೆಎಲ್ಇ ಸಂಸ್ಥೆಯ ಮಾಜಿ ಕಾರ್ಯಾಧ್ಯಕ್ಷರಾದ ಡಾ! ಪ್ರಭಾಕರ ಕೋರೆಯವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾಶೀ ಜದ್ಗರುಗಳು,ಉಜ್ಜನೀಯ ಜದ್ಗುರುಗಳು,ಸಚಿವ ಎಂ.ಬಿ.ಪಾಟೀಲ,ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಉಪಸ್ಥಿತರಿದ್ದರು. ಶಾಸಕ ಗಣೇಶ ಹುಕ್ಕೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Tags:

error: Content is protected !!