ಅಮೇರಿಕ-ಇಸ್ರೇಲ್ ಮತ್ತು ಇರಾನ್ ಯುದ್ಧ ಹಿನ್ನೆಲೆಯಲ್ಲಿ ವಿದೇಶಕ್ಕೆ ತೆರಳಿದ್ದ ಭಾರತೀಯರಲ್ಲಿ ಸಾಕಷ್ಟು ಆತಂಕ ಸೃಷ್ಟಿಯಾಗಿತ್ತು. ಆದರೆ ಈಗ ದುಬೈಯಿಂದ ಹುಬ್ಬಳ್ಳಿಗೆ ಸುರಕ್ಷಿತವಾಗಿ ಉದ್ಯಮಿ ಆನಂದ ಸಂಕೇಶ್ವರ ಮರಳಿದ್ದಾರೆ.

ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು 70 ಜನರನ್ನು ಉದ್ಯಮಿ ಆನಂದ ಸಂಕೇಶ್ವರ ಕರೆತಂದಿದ್ದಾರೆ. ಹೌದು.. ರಾಜ್ಯ 70 ಸಹ ಪ್ರಯಾಣಿಕರನ್ನು ವಿಶೇಷ ವಿಮಾನದ ಮೂಲಕ ದೇಶಕ್ಕೆ ವಾಪಸ್ಸು ತಂದಿದ್ದು, ದುಬೈ ನಲ್ಲಿ ತಮ್ಮ ಪರಿಸ್ಥಿತಿ ನೆನೆದು ಕಣ್ಣೀರು ಹಾಕಿದ್ದಾರೆ. ದುಬೈನಲ್ಲಿ ದೇಶವಾಸಿಗಳ ಪರಿಸ್ಥಿತಿ ಗಂಭೀರವಾಗಿದೆ. ಭಾರತೀಯ ರಾಯಭಾರಿ ಕಚೇರಿ ಯಾವುದೇ ಸಹಾಯ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ನಮ್ಮ ಪಕ್ಕದಲ್ಲೇ ಮಿಸೆಲ್ ದಾಳಿಯಾಗಿದೆ ನಾವು ಜೀವ ಕೈಯಲ್ಲಿಡಿದು ಕಾಲ ಕಳೆದಿದೆವೆ. ಬೇರೆ ದೇಶದವರು ತಮ್ಮ ಪ್ರಯಾಣಿಕರನ್ನು ವಿಶೇಷ ವಿಮಾನದ ಮೂಲಕ ರಕ್ಷಣೆ ಮಾಡಿದರು ಆದರೆ ನಮ್ಮ ಸಹಾಯಕ್ಕೆ ಯಾರು ಬರಲಿಲ್ಲ ಎಂದು ಆನಂದ ಸಂಕೇಶ್ವರ, ಸೇರಿದಂತೆ ಸಹ ಪ್ರಯಾಣಿಕರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
