BELAGAVI

ಉಕ್ಕಡದ ಹಸುಗೂಸಿನ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಪಾಪಿ ತಂದೆ ಅರೆಸ್ಟ್! ಪೊಲೀಸರ ವಿಚಾರಣೆಯಲ್ಲಿ ಬಯಲಾಯ್ತು ಸ್ಫೋಟಕ ಸತ್ಯ!

Share

ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ 15 ದಿನದ ಹೆಣ್ಣು ಮಗುವಿಗೆ ವಿಷವಿಕ್ಕಿ ಕೊಂದಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಘಟನೆ ಬಳಿಕ ಎಸ್ಕೇಪ್ ಆಗಿದ್ದ ಆರೋಪಿ ತಂದೆಯನ್ನು ಕಾಕತಿ ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ವಿಷವನ್ನು ವಶಪಡಿಸಿಕೊಂಡಿದ್ದಾರೆ.

ಉಕ್ಕಡ ಗ್ರಾಮದ ಮಗು ಪ್ರಿಯಾಂಕಾ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿ ಭೀಮರಾಯನನ್ನು ಕಾಕತಿ ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ್ ಶಿಂಗೆ ನೇತೃತ್ವದ ತಂಡ ಬಂಧಿಸಿದೆ. ಮಾರ್ಚ್ 17ರಂದು ಪತ್ನಿ ಶೀಲಾ ನಿದ್ದೆಯಲ್ಲಿದ್ದಾಗ ಮಗುವಿಗೆ ವಿಷವುಣಿಸಿ ಈತ ಪರಾರಿಯಾಗಿದ್ದ. ಹೆಣ್ಣು ಮಗು ಎಂಬ ಕಾರಣಕ್ಕೆ ಅಸಮಾಧಾನಗೊಂಡಿದ್ದ ಭೀಮರಾಯ, ಮಗುವನ್ನು ಅಲ್ಲಿಯೇ ಬಿಟ್ಟು ಮನೆಗೆ ಬರುವಂತೆ ಪತ್ನಿಯ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದ ಎಂಬ ಮಾಹಿತಿ ವಿಚಾರಣೆಯ ವೇಳೆ ತಿಳಿದುಬಂದಿದೆ.

ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿ, ಆರೋಪಿಯು ಮಗುವಿನ ಬಾಯಿಗೆ ವಿಷ ಹಾಕಿರುವುದಾಗಿ ತಿಳಿದು ಬಂದಿದೆ. ಕೃತ್ಯಕ್ಕೆ ಬಳಸಿದ್ದ ವಿಷದ ಅಂಶಗಳನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದ್ದು, ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದಿದ್ದಾರೆ.

ಪತಿ ಮನೆಗೆ ಹೋಗದ ಹಿನ್ನಲೆ ವಿಷ ಕುಡಿಯುವುದಾಗಿ ಹೇಳುತಿದ್ದ. ಆದರೇ ಏಕಾಏಕಿ ಮನೆಗೆ ಬಂದು ಮಗುವಿಗೆ ವಿಷ ಹಾಕಿದ್ದಾರೆ. ಇದು ನನ್ನ ಚೊಚ್ಚಲ ಮಗುವಾಗಿದೆ. ಮೊದಲಿನಿಂದಲೂ ಪತಿ ಮತ್ತು ಅವರ ಮನೆಯವರು ಗಂಡು ಮಗುವೇ ಬೇಕು ಎನ್ನುತ್ತಿದ್ದರು. ಯಾವುದೋ ಎಣ್ಣೆಯನ್ನು ಕುಡಿಸಿ ಮಗುವನ್ನು ಕೊಲೆ ಮಾಡಿದ್ದಾರೆಂದು ಪತ್ನಿ ಶೀಲಾ ಆರೋಪಿಸಿದರು.

ಪತಿ ಭೀಮರಾಯ ಮನೆಗೆ ಬಂದಾಗ ವಾಸನೆ ಬರುತ್ತಿತ್ತು. ಮನೆಯಲ್ಲಿ ಕೇಳಿದಾಗ ಯಾರಿಗೂ ಗೊತ್ತಾಗಲಿಲ್ಲ. ಪ್ರತಿದಿನ ಮನೆಗೆ ಬರುತ್ತಿದ್ದ. ಯಾರು ಇಲ್ಲದ ಸಮಯ ನೋಡಿ ಈ ಕೃತ್ಯ ಎಸಗಿದ್ದಾನೆ ಎಂದು ಮಾರುತಿ ಪಾಟೀಲ್ ಹೇಳಿದರು.

ಗರ್ಭವತಿ ಮಗಳನ್ನು ಹೆರಿಗೆಗಾಗಿ ಕರೆ ತಂದಾಗಲೂ ಅತ್ತೆ ಮಾವ ಮರಳಿ ಮತ್ತೆ ಕರೆಯಲು ಬಂದಿದ್ದರು. ಅಲ್ಲದೇ ಹೆರಿಗೆಯಾದಾಗ ಹೆಣ್ಣು ಮಗು ಎಂದು ತಿಳಿದಾಗಿನಿಂದ ಅವರ ವರ್ತನೆಯೇ ಬದಲಾಗಿತ್ತು. ಮನೆಗೆ ಬಂದು ಹತ್ತಿ ಎಣ್ಣೆ ಕುಡಿಸಿ ಅಳಿಯ ಪರಾರಿಯಾಗಿದ್ದು, ಮಗು ತೀರಿಕೊಂಡಿದೆ ಎಂದು ಹೇಳಿದರೂ ಕೂಡ ಅಂತ್ಯಕ್ರಿಯೆಗೂ ಯಾರು ಬಂದಿಲ್ಲ. ಅವರಿಗೆ ಬೇಡಾಗಿದ್ದರೆ ನಾವು ಸಾಕುತ್ತಿದ್ದೇವು. ಈ ಕೃತ್ಯ ಎಸಗಿದ ಪತಿ ಮತ್ತು ಆತನ ಮನೆಯವರಿಗೆ ಶಿಕ್ಷೆ ಆಗಲೇ ಬೇಕೆಂದು ಶೀಲಾಳ ದೊಡ್ಡಪ್ಪ ಆಗ್ರಹಿಸಿದರು.

Tags:

error: Content is protected !!