Vijaypura

ಸಾರಿಗೆ ಸಚಿವರೇ ಸ್ಟೋರಿ ನೋಡಲೇ ಬೇಕು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶಕ್ತಿ ಯೋಜನೆ ತಲುಪಿಲ್ಲಾ; ಶಿಕ್ಷಣ ಉದ್ಯೋಗ ಕ್ಕಾಗಿ ಕಿಲೊ ಮೀಟರ್ ನಡೆಯಬೇಕು

Share

ರಾಜ್ಯದಲ್ಲಿ ಮಹಿಳೆಯರಿಗೆ ಶಕ್ತಿ ಯೋಜನೆ ಮೂಲಕ ಉಚಿತ ಪ್ರಯಾಣ ಮಾಡ್ತಾರೆ. ಆದ್ರೆ ವಿಜಯಪುರ ನಗರಲ್ಲೇ ಇರುವ ಈ ಏರಿಯಾದ ಜನರಿಗೆ ಬಸ್ ಇಲ್ಲ. ನಿತ್ಯ ನಗರಕ್ಕೆ ಹೋಗಲು ಕಿಲೋ ಮೀಟರ್ ಗಟ್ಟಲೇ ನಡೆಯಬೇಕು, ಇಲ್ಲಾ ಖಾಸಗಿ ವಾಹನ ಇರಬೇಕು.

ರಾಜ್ಯದಲ್ಲಿ ಬಸ್ ಸೌಲಭ್ಯವಿಲ್ಲದ ಹಲವು ಪ್ರದೇಶಗಳಿಗೆ. ಅದ್ರಲ್ಲಿ ವಿಜಯಪುರ ನಗರದಿಂದ ನಾಲ್ಕು ‌ಕಿಲೋ ಮಿಟರ್ ದೂರವಿರುವ ರಂಭಾಪುರ ಪ್ರದೇಶ ಕೂಡಾ ಒಂದಾಗಿದೆ. ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇದ್ದರೂ ನಗರ ಸಾರಿಗೆ ಬಸ್ ಸಂಚಾರವಿಲ್ಲ.‌ ಹೀಗಾಗಿ ನಿತ್ಯ ಇಲ್ಲಿನ‌ ಜನ ವಿಜಯಪುರಕ್ಕೆ ಬರಬೇಕಾದ್ರೆ ಸ್ವತಂ ವಾಹನದಲ್ಲೇ ಬರಬೇಕಾದ ಪರಿಸ್ಥಿತಿ ಇದೆ. ಇಲ್ಲಿಗೆ ನಗರ ಬಸ್ ಸೌಲಭ್ಯ ಕಲ್ಪಿಸಿ ಎಂದು ಮನವಿ ಮಾಡಿದ್ರು ಪ್ರಯೋಜವಿಲ್ಲ. ರಾಜ್ಯದ ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡೆಯುತ್ತಾರೆ. ಆದರೆ ಇಲ್ಲಿ ಬಸ್ ಇಲ್ಲದೆ ಇಲ್ಲಿನ ಮಹಿಳೆಯರಿಗೆ ಶಕ್ತಿ ಯೋಜನೆ ಲಾಭ ಸಿಗುತ್ತಿಲ್ಲ. 200 ಕ್ಕೂ ಅಧಿಕ ಮನೆಗಳಿಗೆ ರಂಭಾಪುರ ಏರಿಯಾದಲ್ಲಿದೆ. ಆದರೆ ಹಲವು ವರ್ಷಗಳಿಂದ ಮನವಿ ಮಾಡಿದರು ಈವರೆಗೂ ನಗರ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಬಸ್ ವ್ಯವಸ್ಥೆ ಮಾಡಿಲ್ಲ.

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದೆ. ರಂಬಾಪುರ ಏರಿಯಾದ ಬಳಿಯೇ ಶಿವಗಿರಿ ಪ್ರವಾಸಿ ತಾಣವಿದೆ. ಇಷ್ಟಲ್ಲ ವ್ಯವಸ್ಥೆ ಇದ್ದರೂ ಸಹ ಬಸ್ ವ್ಯವಸ್ಥೆ ಮಾಡಿಲ್ಲ. ಇಲ್ಲಿನ‌ ಜನ ವಿಜಯಪುರ ನಗರಕ್ಕೆ ಬರಬೇಕಾದ್ರೆ ಹೆದ್ದಾರಿ ದಾಟಿ ಸಿಂದಗಿ ನಾಕಾವರಗೆ ಬರಬೇಕು. ಅಲ್ಲಿಂದ ಆಟೋ ಮೂಲಕ ವಿಜಯಪುರ ನಗರಕ್ಕೆ ಬರಬೇಕಾಗಿದೆ. ರಾಜ್ಯದಲ್ಲಿ ಎಲ್ಲ ಕಡೆ ಉಚಿತವಾಗಿ ಬಸ್ ಪ್ರಯಾಣ ಇದೆ.‌ ಆದರೆ ನಮಗೆ ಯಾಕಿಲ್ಲ ಎಂದು ಇಲ್ಲಿನ ಮಹಿಳೆಯರ‌ ಪ್ರಶ್ನೆ ಮಾಡಿದ್ದಾರೆ. ನಾವು ಹಣ ಕೊಡ್ತೇವೆ ಎಂದರೂ ನಮ್ಮ ಏರಿಯಾಗಳಿಗೆ ಬಸ್ ಬಿಡ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟು ದಿನ ಮನವಿ ಕೊಟ್ಟು ಸಾಕಾಗಿರುವ ಇಲ್ಲಿನ ಜನ ಇದೀಗ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಆದಷ್ಟು ಬೇಗ ಬಸ್ ವ್ಯವಸ್ಥೆ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕಿದೆ.

Tags:

error: Content is protected !!