hubbali

ಓವರ್‌ಟೇಕ್ ವೇಳೆ ಸಾರಿಗೆ ಬಸ್ ಅಪಘಾತ; 6 ಜನ ಪ್ರಯಾಣಿಕರಿಗೆ ಗಾಯ.

Share

ಓವರ್‌ಟೇಕ್ ಮಾಡಲು ಯತ್ನಿಸಿದ ವೇಳೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಅಪಘಾತಕ್ಕೀಡಾಗಿ ಆರು ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ನಗರದ ಹೊರವಲಯದ ಕುಂದಗೋಳ ಕ್ರಾಸ್ ಸಮೀಪ ನಡೆದಿದೆ.

ಹುಬ್ಬಳ್ಳಿಯಿಂದ ಶಿರಸಿಯತ್ತ ಹೊರಟಿದ್ದ ಕೆಎ-31 ಎಫ್ 1536 ಸಂಖ್ಯೆಯ ಮುಂಡಗೋಡ ಡಿಪೋ ಬಸ್, ಮುಂದೆ ಸಾಗುತ್ತಿದ್ದ ವಾಹನವನ್ನು ಓವರ್‌ಟೇಕ್ ಮಾಡಲು ಮುಂದಾಗಿತ್ತು. ಈ ವೇಳೆ ಎದುರು ದಿಕ್ಕಿನಿಂದ ಬೃಹತ್ ಟ್ರಕ್ ಬಂದ ಹಿನ್ನೆಲೆ, ಚಾಲಕ ತಕ್ಷಣ ತನ್ನ ಮಾರ್ಗಕ್ಕೆ ಮರಳಲು ಯತ್ನಿಸಿದ್ದಾನೆ.

ಅದರ ಮಧ್ಯೆ ಬಸ್ ಮುಂದೆ ಸಾಗುತ್ತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ, ಬಸ್‌ನ ಮುಂಭಾಗಕ್ಕೆ ಹಾನಿಯಾಗಿದೆ. ಅಪಘಾತದಲ್ಲಿ ಆರು ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

Tags:

error: Content is protected !!