ಬೈಕ್ ಸವಾರನೊಬ್ಬ ಮಹಿಳೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ಮಹಿಳೆಗೆ ಗಾಯವಾಗಿದ್ದು, ಬೈಕ್ ಸವಾರನಿಗೆ ಟ್ರಾಫಿಕ್ ಪೊಲೀಸರೊಬ್ಬರು ಕಪಾಳ ಮೋಕ್ಷ ಮಾಡಿದ ಘಟನೆ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಯುವಕನೊಬ್ಬ ಬೇಕಾಬಿಟ್ಟಿಯಾಗಿ ಬೈಕ್ ಓಡಿಸುತ್ತ ಮಹಿಳೆಗೆ ಹಾಯಿಸಿದ್ದ, ಇದನ್ನು ಕಂಡ ಟ್ರಾಫಿಕ್ ಪೊಲೀಸರೊಬ್ಬರು ಯುವಕನಿಗೆ ತರಾಟೆ ತೆಗೆದುಕೊಂಡಿದ್ದು, ಎದುರು ಮಾತನಾಡಿದ್ದಕ್ಕೆ ಪೊಲೀಸರು ಆ ಯುವಕನಿಗೆ ಕಪಾಳ ಮೋಕ್ಷ ಮಾಡಿ ಬುದ್ಧಿ ಹೇಳಿದ್ದಾರೆ. ಈ ವಿಡಿಯೋ ಈ ವೈರಲ್ ಆಗಿದೆ.
