ಚಾಲಕನ ನಿಯಂತ್ರ ತಪ್ಪಿ ಟಿಪ್ಪರ ವಾಹನವೊಂದು ಪಲ್ಟಿಯಾದ ಘಟನೆ ಧಾರವಾಡ ಹೊರವಲಯದ ನುಗ್ಗಿಕೇರಿ ಗ್ರಾಮದ ಬಳಿ ಕಲಘಟಗಿ ರಸ್ತೆಯಲ್ಲಿ ಶಾನಿವಾರ ತಡ ರಾತ್ರಿ ನಡೆದಿದೆ.

ವೈ- ಕೆಎ 14-c 9330 ನಂಬರ್ ಟಿಪ್ಪರ ವಾಹನ ಪಲ್ಟಿಯಾಗಿದೆ. ಕಲಘಟನೆ ಮಾರ್ಗವಾಗಿ ಬರುತ್ತಿದ್ದ ವಾಹನ ನುಗ್ಗಿಕೇರಿ ಬಳಿ ಬರುತ್ತುದಂತೆ ಚಾಕಜನ ನಿಯಂತ್ರನ ತಪ್ಪಿದ್ದು,ರಸ್ತೆ ಪಕ್ಕದಲ್ಲಿ ಏಕಾಏಕಿ ಟಿಪ್ಪರ ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳುದು ಬಂದಿದೆ. ಘಟನೆಯಲ್ಲಿ ಟಿಪ್ಪರ ಚಾಲಕ ಸೇರಿ ಕ್ಲೀನರಗೆ ಗಾಯಗಾಳಾಗಿದ್ದು, ಸ್ಥಳೀಯರು ರಕ್ಷಣೆ ಮಾಡಿ ಜಿಲ್ಲಾ ಅಸ್ಪತ್ರೆಗೆ ರವಾನಿಸಿದ್ದಾರೆ. ಧಾರವಾಡ ಗ್ರಾಮೀನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
