ಇರಾನ್ ಅಧಿಪತಿ ಖಮೇನಿಗೆ ಹತ್ಯೆಯನ್ನು ಖಂಡಿಸಿ ರಾಜ್ಯದಲ್ಲಿ ಪ್ರತಿಭಟನೆ ಮಾಡುವವರು ದೇಶದ್ರೋಹಿಗಳು, ನಾಲಾಯಕರು ಎಂದು
ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಖಮೇನಿ ಸಾವಿಗೆ ರಾಜ್ಯದಲ್ಲಿ ನಡೆಯುತ್ತಿರುವ ಶೋಕಾಚರಣೆ ಮತ್ತು ಪ್ರತಿಭಟನೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರ ನಗರದಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿದ ಅವರು ಭಾರತ ಎಲ್ಲ ದೇಶಗಳ ಜೊತೆಗೆ ಉತ್ತಮ ಸಂಬಂಧ ಹೊಂದಿದೆ ಮತ್ತು ಈ ಯುದ್ಧದಲ್ಲಿ ನಮ್ಮದೇನು ಪಾತ್ರವಿಲ್ಲ, ನಾವು ಶಾಂತಿ ಬಯಸುತ್ತೇವೆ ಎಂದಿದ್ದಾರೆ. ರಾಜ್ಯದಲ್ಲಿ ಪ್ರತಿಭಟನೆ ಮಾಡುವವರು ದೇಶದ್ರೋಹಿಗಳು, ನಾಲಾಯಕರು ಎಂದು ಕಿಡಿಕಾರಿದ ಅವರು, ಅಲ್ಲಿನ ಘಟನೆಗೂ ಇಲ್ಲಿಗೂ ಏನು ಸಂಬಂಧ? ಭಾರತದಲ್ಲಿ ಆರಾಮಾಗಿದ್ದಾರೆ, ಆರಾಮಾಗಿ ಇರಿ. ಅಲ್ಲಿ ಸತ್ತಿದಕ್ಕೆ ಇಲ್ಲಿ ಹೋರಾಟ ಮಾಡುತ್ತಿರಿ ಯಾಕೆ ಎಂದು ಪ್ರಶ್ನಿಸಿದ್ದಾರೆ.

