Kagawad

ತಂತಾನೆ ಬೆಂಕಿ ಹೊತ್ತಿಕೊಳ್ಳುವ ಬಾನಾಮತಿ ರಹಸ್ಯ – ಎಲ್ಲಾ ಸುಳ್ಳು ಎಂದ ಹುಲಿಕಲ್ ನಟರಾಜ್!

Share

ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದಲ್ಲಿ ಅಚ್ಚರಿ ಮೂಡಿಸುವ ಘಟನೆ ಬೆಳಕಿಗೆ ಬಂದಿತ್ತು. ಮನೆಯೊಂದರಲ್ಲಿ ಎಲ್ಲೆಂದರಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಳ್ಳುವ ಘಟನೆಗಳಿಂದ ಜನರು ಭೀತಿಗೊಳಗಾಗಿ ಇದು ಬಾನಾಮತಿ ಕಾಟ ಎಂದು ನಂಬಿದ್ದರು. ಆದರೀಗ ಈ ವರದಿಯ ಬಗ್ಗೆ ಹುಲಿಕಲ್‌ ನಟರಾಜ್‌ ಪ್ರತಿಕ್ರಿಯಿಸಿದ್ದಾರೆ. ಈ ವಿಸ್ಮಯಗಳ ಹಿಂದೆ ಯಾವುದೇ ಬಾನಾಮತಿ ರಹಸ್ಯ ಇಲ್ಲ ಎಂದು ಅವರು ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದ ಈಶ್ವರ ತೇಗ್ಗಿ ಕುಟುಂಬದ ಮನೆಯಲ್ಲಿ ಎಲ್ಲೆಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಳ್ಳುವಂತಹ ಘಟನೆಗಳು ಇತ್ತೀಚೆಗೆ ಪದೇ ಪದೇ ಘಟಿಸುತ್ತಿತ್ತು. ಮನೆಯ ದವಸಧಾನ್ಯ, ಮನೆಯ ಸದಸ್ಯರ ಬಟ್ಟೆ, ಜಾನುವಾರುಗಳ ಮೇವಿಗೂ ಬೆಂಕಿ ಹೊತ್ತಿಕೊಳ್ಳುತ್ತಿತ್ತು.

ಈ ಘಟನೆಗಳಿಂದ ಮನೆ ಮಂದಿಯೆಲ್ಲರೂ ಆತಂಕದಿಂದ ದಿನ ದೂಡುತ್ತಿದ್ದರು. ಎಲ್ಲಿ ಬೆಂಕಿ ಬೀಳುತ್ತೋ ಎಂಬ ಭಯದಿಂದ ನಿದ್ದೆಗೆಟ್ಟಿದ್ದರು. ಇದು ಯಾವುದೇ ವಾಮಾಚಾರ ಇರಬಹುದು, ಬಾನಾಮತಿ ರಹಸ್ಯ ಇರಬಹುದು ಎಂದು ನಂಬಿದ್ದರು.

ಇದೀಗ ಈ ವರದಿಯನ್ನು ಗಮನಿಸಿ ಪ್ರತಿಕ್ರಿಯಿಸಿರುವ ಹುಲಿಕಲ್ ನಟರಾಜ್ ವಿಸ್ಮಯ ಘಟನೆಗಳು ನಡೆಯುತ್ತಿರುವ ಮನೆಗೆ ಸ್ವತಃ ಭೇಟಿ ನೀಡಿ, ಯಾವುದೇ ಬಾನಾಮತಿ ರಹಸ್ಯ ಇಲ್ಲ. ಈ ಘಟನೆಗಳ ಹಿಂದೆ ಯಾವುದೋ ವಿಕೃತ ಮನಸ್ಸಿನ ಕೈವಾಡ ಇದೆ. ಇದೆಲ್ಲದಕ್ಕೂ ತಾನೇ ಉತ್ತರ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.

ದೇವರು ಮನುಷ್ಯನಿಗೆ ಕೇಡು ಮಾಡಲ್ಲ. ಕೇಡು ಮಾಡುವ ದೇವರು ದೇವರೇ ಅಲ್ಲ. ವಾಮಾಚಾರಿಗಳ ಮಾತು ನಂಬಬೇಡಿ. ಇದು ವಿಸ್ಮಯನೂ ಅಲ್ಲ ವಾಮಾಚಾರ, ಮಾಟ ಮಂತ್ರನೂ ಅಲ್ಲ. ಇಂತಹ ಘಟನೆಗಳು ಮತ್ತೆ ಮರುಕಳಿಸಿದರೆ ನನಗೆ ವಿಡಿಯೋ ಕರೆ ಮಾಡಿ. ನಾನು ಅದಕ್ಕೆ ಉತ್ತರ ನೀಡುತ್ತೇನೆ ಎಂದು ಹುಲಿಕಲ್ ನಟರಾಜ್ ತಿಳಿಸಿದ್ದಾರೆ.

Tags:

error: Content is protected !!