ಆ ಮಠ ಯಾವಾಗಲೂ ಸತ್ಯವಾದ ಕಾರ್ಣಿಕ ನುಡಿಯು ವದಕ್ಕೆ ಖ್ಯಾತಿ ಪಡೆದಿದೆ. ಈ ಮಠದಲ್ಲಿ ಬೆಂಕಿಯುಂಡೆಂತಹ ಕಾರ್ಣಿಕ ಮಾತುಗಳು ಸತ್ಯವಾಗಿ ಭಕ್ತರಿಗೆ ಆಶ್ಚರ್ಯದ ಜೊತೆಗೆ ಭಯ ಭಕ್ತಿ ಶ್ರದ್ದೆಯನ್ನು ಭಕ್ತರಲ್ಲಿ ಹೆಚ್ಚಿಸುತ್ತಿವೆ. ಈಗ ಮತ್ತೊಮ್ಮೆ ಬಬಲಾದಿ ಬೆಂಕಿ ಭವಿಷ್ಯ ಸತ್ಯವಾಗಿದೆ. ಅಷ್ಟಕ್ಕೂ ಆ ಮಠದಲ್ಲಿ ನುಡಿದಿದ್ದ ಭವಿಷ್ಯವಾದ್ರೂ ಏನು ಎನ್ನುವ ಕುರಿತು ಇಲ್ಲಿದೆ ಒಂದು ವರದಿ…


ಹೌದು ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತುತ್ತತುದಿಗೇರಿದೆ. ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸಾವು ವಿಶ್ವದಾದ್ಯಂತ ದೊಡ್ಡ ಆಘಾತ ಉಂಟುಮಾಡಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ ಅವರು ಕೊಲ್ಲಲ್ಪಟ್ಟ ಹಿನ್ನೆಲೆಯಲ್ಲಿ ಇರಾನ್ ರೊಚ್ಚಿಗೆದ್ದಿದೆ. ಇದರ ನಂತರ, ಇರಾನ್ನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ “ಇತಿಹಾಸದ ಅತ್ಯಂತ ಉಗ್ರ ಆಕ್ರಮಣಕಾರಿ ಕಾರ್ಯಾಚರಣೆ” ಮಾಡುವುದಾಗಿ ಪ್ರತಿಜ್ಞೆ ಮಾಡಿದ ಪರಿಣಾನ. ಇದು ಯುದ್ಧದ ಭೀತಿಯನ್ನು ಹೆಚ್ಚಿಸಿ ಯುದ್ದ ಶುರುವಾಗಿದೆ. ಈ ಯುದ್ಧದ ಕುರಿತು ಈ ಹಿಂದೆಯೇ ವಿಜಯಪುರ ಜಿಲ್ಲೆಯ ಬಬಲಾದಿ ಮಠದ ಸಿದ್ದು ಮುತ್ಯಾ ಭವಿಷ್ಯ ನುಡಿದಿದ್ದರು. ಅಂದು ಸಿದ್ದು ಮುತ್ಯಾ ಆಡಿದ್ದ ಮಾತುಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಭಕ್ತರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಸಿದ್ದು ಮುತ್ಯಾ ಆಡುವ ಮಾತುಗಳ ಸತ್ಯ ಆಗುತ್ತೆ ಅನ್ನೋದಕ್ಕೆ ಇದೇ ಸಾಕ್ಷಿ ಎಂದು ಹೇಳಿ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಂದು ಸಿದ್ದು ಮುತ್ಯಾ ಬಬಲಾದಿ ಕಾಲಜ್ಛಾನ ನುಡಿದಿದ್ದರು. ಯುದ್ಧ, ಬಹುದೊಡ್ಡ ಕೆಡಕಿನ ಭವಿಷ್ಯ ನುಡಿದು ಇರಾನ್ ಸರ್ವಾಧಿಕಾರಿ ಹತ್ಯೆ, ಮಧ್ಯಪ್ರಾಚ್ಯ ಯುದ್ಧದ ಕುರಿತು ಮೊದಲೆ ಸುಳಿವು ಕೊಟ್ಟಿದ್ದರು. ಕಳೆದ ಶಿವರಾತ್ರಿಯ 5ನೇ ದಿನ ಭವಿಷ್ಯ ನುಡಿಯಲಾಗಿತ್ತು. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಲಜ್ಞಾನ ಖ್ಯಾತಿಯ ಬಬಲಾದಿ ಮಠವು ಈ ಹಿಂದೆ ಕೊರೊನಾ, ಜಲಪ್ರಳಯದಂತಹ ಕರಾರುವಾಕ್ಕಾಗಿ ಭವಿಷ್ಯ ನುಡಿಯಲಾಗಿತ್ತು.

ಬಬಲಾದಿ ಮಠವು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದಲ್ಲಿದೆ. ಶ್ರೀ ಗುರು ಚಕ್ರವರ್ತಿ ಬಬಲಾದಿ ಸದಾಶಿವಮೂರ್ತಿ ಮಹಾಪುರುಷರು ಇಲ್ಲಿಯೇ ಲಿಂಗೈಕ್ಯರಾದ ಹಿನ್ನೆಲೆ ಮಠ ನಿರ್ಮಾಣ ಮಾಡಲಾಗಿದೆ. ಪ್ರತಿ ಶಿವರಾತ್ರಿ ದಿನ ಜಾತ್ರೆ ಮತ್ತು ಜಾನುವಾರುಗಳ ಜಾತ್ರೆ ನಡೆಯುತ್ತದೆ. ಜಾತ್ರೆಯಲ್ಲಿ ಭವಿಷ್ಯ ನುಡಿಯುವ ಸಿದ್ದು ಮುತ್ಯಾ ಗಡಿಯಲ್ಲಿ ಭೀತಿ, ಯುದ್ಧದ ಕಾರ್ಮೋಡ ಎಂದು ಭವಿಷ್ಯ ನುಡಿದಿದ್ದರು. ಇದೀಗ ಭವಿಷ್ಯದಂತೆಯೇ ಗಲ್ಪ್ ರಾಷ್ಟ್ರ ಇರಾನ್ ಮೇಲೆ ಅಮೇರಿಕ ಇಸ್ರೆಲ್ ಮುಗಿಬಿದ್ದಿವೆ. ಇದಕ್ಕೆ ಪ್ರತಿಯಾಗಿ ದುಬೈ, ಕತಾರ್, ಬೆಹೆರಿನ್ ಮೇಲೆ ಇರಾನ್ ದಾಳಿ ನಡೆಸಿ ತನ್ನ ರೋಷಾವೇಷ, ಪ್ರತಾಪ ತೋರುತ್ತಿದೆ. ಇನ್ನೂ ದೊಡ್ಡ ದುಃಖದ ಸುದ್ದಿಯೊಂದು ಬಂದೀತು ಎಂದು ಭವಿಷ್ಯ ನುಡಿದಂತೆ ಅಮೇರಿಕಾ ಇಸ್ರೇಲ್ ದಾಳಿಯಲ್ಲಿ ಖಮೇನಿ ಹತನಾಗಿದ್ಸಾರೆ. ಸದ್ಯ ಬಬಲಾದಿ ಬೆಂಕಿ ಭವಿಷ್ ಸತ್ಯವಾಗಿದ್ದು ಭಕ್ತರು ಇದನ್ನು ಬೆಂಕಿಯುಂಡೆಯಂತ ಭವಿಷ್ಯ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. 500 ವರ್ಷಗಳ ಹಿಂದೆ ಚಿಕ್ಕಯ್ಯಪ್ಪನವರು ಬರೆದಿಟ್ಟಿರುವ ಕಾಲಜ್ಞಾನ ಇದಾಗಿದ್ದು, ಪ್ರತಿ ವರ್ಷ ಶಿವರಾತ್ರಿಯಂದು ಇದನ್ನು ಓದಲಾಗುತ್ತದೆ. ಬಬಲಾದಿ ಮಠದ ಭವಿಷ್ಯ ರಾಜ್ಯದಲ್ಲೇ ಅತ್ಯಂತ ವಿಶಿಷ್ಟವಾಗಿದೆ.
ಒಟ್ನಲ್ಲಿ ಪಶ್ಚಿಮ ರಾಷ್ಟ್ರಗಳ ನಡುವೆ ಕರಾರುವಾಕ್ಕಾಗಿ ಭವಿಷ್ಯ ನುಡಿದು ಬಬಲಾದಿ ಮಠದ ಭವಿಷ್ಯ ವು ಬೆಂಕಿ ಭವಿಷ್ಯ ಮತ್ತೊಮ್ಮೆ ಸತ್ಯವಾಗಿದೆ. ಭಕ್ತರಲ್ಲಿ ಮಠದ ಕುರಿತು ಇದ್ದ ಭಯ ಭಕ್ತಿ ಮತ್ತಷ್ಟು ಹೆಚ್ಚಾದಂತಾಗಿದೆ.
