BELAGAVI

ಮಾರ್ಚ್ 8 ರಿಂದ 13ರವರೆಗೆ ಬೆಳಗಾವಿಯಲ್ಲಿ ಚಾಂಗದೇವ ಉರ್ಫ್ ರಾಜಾಬಾಗಸವಾರ ಮಹಾರಾಜರ ಜಾತ್ರಾ ಮಹೋತ್ಸವ

Share

ಬೆಳಗಾವಿಯ ಚಾಂಗದೇವ ನಗರದಲ್ಲಿ ಶ್ರೀ ಯಮನೂರ ಅಜ್ಜಾ ಉರ್ಫ್ ರಾಜಾಬಾಗಸವಾರ ಮಹಾರಾಜರ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 8 ರಿಂದ 13ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜಾತ್ರೆಯು ಅತಿ ವಿಜೃಂಭಣೆಯಿಂದ ಜರುಗಲಿದ್ದು, ಭಕ್ತಸಾಗರವೇ ಹರಿದು ಬರುವ ನಿರೀಕ್ಷೆಯಿದೆ. ಈ ಕುರಿತಾದ ವರದಿ ಇಲ್ಲಿದೆ.

ಬೆಳಗಾವಿಯ ಚಾಂಗದೇವ ನಗರದ ಶ್ರೀ ಯಮನೂರ ಅಜ್ಜಾ ಉರ್ಫ್ ರಾಜಾಬಾಗಸವಾರ ಮಹಾರಾಜರ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮಾರ್ಚ್ 8 ರಿಂದ 13ರವರೆಗೆ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಚ್ 8 ರಂದು ಶ್ರೀ ಸಿದ್ದೇಶ್ವರ ಮಂದಿರಕ್ಕೆ ಪಲ್ಲಕ್ಕಿ ಭೇಟಿ ನೀಡುವ ಮೂಲಕ ಜಾತ್ರೆಯ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿದ್ದು, ಪ್ರತಿದಿನ ವಿಶೇಷ ಪೂಜೆ, ಗಂಧಾಭಿಷೇಕ ಮತ್ತು ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಈ ಐದು ದಿನಗಳ ಕಾಲ ಭಜನಾ ಮಂಡಳಿಗಳಿಂದ ಭಕ್ತಿಗೀತೆಗಳು ಮತ್ತು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಮಾರ್ಚ್ 10 ರಂದು ಅಶ್ವ ಪೂಜೆ (ಕುದುರೆ ಪೂಜೆ) ಮತ್ತು 11 ರಂದು ದಂಡವತ ಕಾರ್ಯಕ್ರಮಗಳು ನಡೆಯಲಿವೆ. ಜಾತ್ರೆಯ ಅಂತಿಮ ದಿನವಾದ ಮಾರ್ಚ್ 13 ರಂದು ಮಧ್ಯಾಹ್ನ ಗಾರಾಣಿ ಹಾಕುವ ಕಾರ್ಯಕ್ರಮ ಮತ್ತು ಸಾಯಂಕಾಲ ಭಂಡಾರ ಹಾಗೂ ಹಬೀರ್ ಉತ್ಸವದೊಂದಿಗೆ ಜಾತ್ರೆಯು ಸಂಪನ್ನಗೊಳ್ಳಲಿದೆ. ಜಾತ್ರೆಯ ಪ್ರತಿಯೊಂದು ದಿನವೂ ಪಲ್ಲಕ್ಕಿಯು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಲಿದೆ. ಈ ಭಕ್ತಿಪೂರ್ಣ ಕಾರ್ಯಕ್ರಮಕ್ಕೆ ಸೇವಾ ಕಮೀಟಿಯ ಪದಾಧಿಕಾರಿಗಳು ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.

Tags:

error: Content is protected !!