Dharwad

ಕೇಂದ್ರ ಸರ್ಕಾರ ಮಾಡಿದ ಸಾಲವೇ ಸಾಕಷ್ಟಿದೆ, ಬಿಜೆಪಿ ಜನರ ಕೈಗೆ ಚೆಂಬು ಕೊಟ್ಟಿದೆ: ಸಚಿವ ಸುಧಾಕರ್.

Share

ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಬೋಗಸ್ ಇದೆ ಎಂಬ ಬಿಜೆಪಿ ಟೀಕೆಗೆ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ತಿರುಗೇಟು ನೀಡಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಬಿಜೆಪಿಯವರು 2023ರಲ್ಲಿ ಎಷ್ಟು ಹೊರೆ ಇಟ್ಟು ಹೋಗಿದ್ದರು ಗೊತ್ತಾ? ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಬಜೆಟ್‌ನಲ್ಲಿ ಅವಕಾಶ ಇಲ್ಲದೇ ಇದ್ದರೂ ವಿನಾಕಾರಣ ಖರ್ಚು ಮಾಡಿ ಹೋಗಿದ್ದರು. ನಾವು ಗ್ಯಾರಂಟಿಗೆ 52 ಸಾವಿರ ಕೋಟಿ ಕೊಟ್ಟಿದ್ದೇವೆ. ಈಗಾಗಲೇ 1.21 ಲಕ್ಷ ಕೋಟಿ ಗ್ಯಾರಂಟಿಗೆ ಖರ್ಚು ಮಾಡಿದ್ದೇವೆ. ಇದರ ನಡುವೆ 2 ಲಕ್ಷ 65 ಸಾವಿರ ಕೋಟಿ ಗಾತ್ರದ ಬಜೆಟ್ ಇತ್ತು. ಈಗ ಅದು 4 ಲಕ್ಷ 84 ಸಾವಿರ ಕೋಟಿ ಗಾತ್ರ ಬಜೆಟ್ ಆಗಿದೆ. ಕೇಂದ್ರ ಸರ್ಕಾರ ಮಾಡಿದ ಸಾಲವೇ ಹೆಚ್ಚಿದೆ. ಕೇಂದ್ರ ಸರ್ಕಾರ ಜನರ ಕೈಗೆ ಚೆಂಬು ಕೊಟ್ಟಿದೆ. ಕೇಂದ್ರದಲ್ಲಿ 53 ಲಕ್ಷ ಕೋಟಿ ಇದ್ದ ಸಾಲ ಈಗ 218 ಲಕ್ಷ ಕೋಟಿಯಾಗಿದೆ. ಇಷ್ಟು ಸಾಲ ಕೇವಲ 11 ವರ್ಷದಲ್ಲಿ ಹೇಗಾಯಿತು? ಸಮಾಜದಲ್ಲಿ ಕೇವಲ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವುದು ಬಿಟ್ಟರೆ ಬಿಜೆಪಿಯವರಿಗೆ ಬೇರೆ ಏನೂ ಇಲ್ಲ. ತೇಜಸ್ವಿ ಸೂರ್ಯ ದೇವಸ್ಥಾನಗಳಿಗೆ ಎಷ್ಟು ದುಡ್ಡು ಕೊಡಲಾಗಿದೆ ಎಂದು ಕೇಳಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಎಷ್ಟು ದುಡ್ಡು ಕೊಟ್ಟರು ಹೇಳಲಿ. ಅಲ್ಪ ಸಂಖ್ಯಾತರ ತುಷ್ಟೀಕರಣ ಎಂದರೆ ಬರೀ ಮುಸ್ಲಿಂರಲ್ಲ, ಬೇರೆ ಜನಾಂಗವೂ ಇದೆ. ಟ್ರಂಪ್ ಅವರು ಹೇಳಿದಂತೆ ಭಾರತದ ಆಡಳಿತ ನಡೆಸುತ್ತಿರುವ ಬಗ್ಗೆ ಬಿಜೆಪಿಯವರು ಮೊದಲು ಉತ್ತರ ಕೊಡಲಿ ಎಂದು ಕುಟುಕಿದರು.

Tags:

error: Content is protected !!