Dharwad

ಧಾರವಾಡ ಜನತೆ ಬೆಚ್ಚಿ ಬಿಳಿಸಿದ ಮಾಜಿ ಶಾಸಕರ ಪುತ್ರನ ತನ್ನದೇ ಕಾರನಲ್ಲಿ ಸುಟ್ಟ ಹತ್ಯೆ ಪ್ರಕರಣ.

Share

ಕಳೆದ ಮಾರ್ಚ 23 ಮಧ್ಯ ರಾತ್ರಿ ಧಾರವಾಡ ತಾಲ್ಲೂಕಿನ ರಾಪಾಪುರ ಗ್ರಾಮ ನಿರ್ಜನ್ ಅರಣ್ಯ ಪ್ರದೇಶದಲ್ಲಿ ಬೈಲಹೊಂಗಲ ಮಾಜಿ ಶಾಸಕನ ಪುತ್ರನ ಕಾರನಲ್ಲಿ ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಯಲ್ಲಿ ಓರ್ವ ಮಹಿಳಾ ಹಾಗೂ ಓರ್ವ ಅಪ್ರಾಪ್ತ ಸೇರಿ 4ಜನ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮಾಜಿ ಶಾಸಕ ಬಾಬುರಾವ್ ಅವರ ಎರಡನೇ ಪುತ್ರ ರಾಜು ಭೋಳಶೆಟ್ಟಿ ಅವರದೇ ಕಾರಿನಲ್ಲಿ ಸುಟ್ಟು ಕರಕಲಾದ ರೀತಿಯಲ್ಲಿ ದೇಹ ಪತ್ತೆಯಾಗಿತ್ತು. ಈ ಪ್ರಕರಣ ದಾಖಲಿಸಿಕೊಂಡ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ತನಿಖೆ ಕೈಗೊಂಡು ಈಗ ಮೂವರು ಆರೋಪಿಯನ್ನು ಬಂಧನ ಮಾಡಿದ್ದಾರೆ. ಬೆಳಗಾವಿಯ ಬೀದರಗಡ್ಡಿ ಮೂಲದ ಮಹಿಳಾ ಆರೋಪಿ ಮುನೀರಾ ಶರೀಫ ದುಲಾನಾಯಕ್(32), ಮುನೀರಾ ಮಗ ಅಪ್ರಾಪ್ತ ಬಾಲಕ, ಬಸವರಾಜ್ ರಾಮಪ್ಪ ಪೂಜಾರಿ ಹಾಗೂ ಮೃತ್ಯುಂಜಯ ದೇವಪ್ಪಾ ಕಂಬಾರ, ಬಂಧಿತ ಆರೋಪಿಗಳಾಗಿದ್ದಾರೆ. ಇನ್ನೋರ್ವ ಆರೋಪಿಯ ಬಂಧನಕ್ಕಾಗಿ ಪೊಲೀಸರು ಈಗ ಬಲೆ ಬೀಸಿದ್ದಾರೆ. ಪ್ರಕರಣ ಕುರಿತು ಮಾಹಿತಿ ನೀಡಿದ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು, ಕೊಲೆಗೆ ಹಣಕಾಸಿನ ವ್ಯವಹಾರ ಜತೆಗೆ ಅನೈತಿಕ ಸಂಬಂಧ ಕಾರಣವೆಂದು ತನಿಖೆಯಲ್ಲಿ ತಿಳಿದು ಬಂದಿದೆ. ಬಂಧಿತ ಮಹಿಳೆ ಮುನೀರಾ ಹಾಗೂ ಹತ್ಯೆಯಾದ ರಾಜು ನಡುವೆ ಅನೈತಿಕ ಸಂಬಂಧ ಇತ್ತು, ಮುಖ್ಯವಾಗಿ ಮುನೀರಾ ಹಾಗೂ ಮಗ ಅಪ್ರಾಪ್ತ ಜತೆಗೆ ಮೃತ್ಯುಂಜಯ ಸೇರಿ ಮುವರು ಜನ ಹತ್ಯೆ ಮಾಡಿದ್ದಾರೆ.

ನಂತರ ಬಾಡಿ ಸಾಗಿಸಲು ಬಸವರಾಜ್ ಸಹಾಯ ಪಡೆದಿದ್ದಾರೆ. ಮೊದಲು ಮುನೀರಾ ರಾಜು ಅವರನ್ನು ಪೋನ ಕಾಲ ಮಾಡಿ ಜಮೀನು ಕಡೆ ಕರೆಯಿಸಿಕೊಳ್ಳುತ್ತಾಳೆ. ಮೃತ ರಾಜು ಬರುವ ಮುಂಚೆ ಕೊಲೆ ಆರೋಪಿಗಳು ಮಹಿಳೆಯೊಂದಿಗೆ ಇದ್ದರು. ಕೊಲೆಗೂ ಮುನ್ನ ಜಗಳವಾಗುತ್ತದೆ, ನಂತರ ಚಾಕು ಸಲಕಿಯಿಂದ ರಾಜುವುನ ಮೇಲೆ ದಾಳಿಯಾಗುತ್ತದೆ. ಸ್ಥಳದಲ್ಲಿ ರಾಜು ಸಾವನಪ್ಪಿದ ನಂತರ ರಾತ್ರೀ ಶವವನ್ನು ಧಾರವಾಡ ತಾಲೂಕಿನ ರಾಮಾಪುರ ವ್ಯಾಪ್ತಿಯಲ್ಲಿ ರಾಜು ಅವರ ಕಾರಿನಲ್ಲಿ ತಂದು ಡಿಸೇಲ್ ಬಳಿಸಿ ಸುಟ್ಟಿರುವುದು ಈಗ ತನಿಖೆಯಿಂದ ಬೆಳಕಿಗೆ ಬಂದಿದೆ. ಇನ್ನೋರ್ವ ಆರೋಪಿ ಬಂಧನಕ್ಕೆ ಈಗ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Tags:

error: Content is protected !!